ಮುದ್ದೇಬಿಹಾಳ : ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ವಿ.ಎಚ್.ಪಿ ಸಹ ಕಾರ್ಯದರ್ಶಿ, ಅಯೋಧ್ಯಾ ಶ್ರೀ ರಾಮ ಮಂದಿರ ದೇವಸ್ಥಾನದ ಉಸ್ತುವಾರಿ ವಕ್ತಾರ ಗೋಪಾಲ್ ಜೀ ಬುಧವಾರ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ದೇವಸ್ಥಾನ ಸಮೀತಿ ಪ್ರಮುಖ ಟಿ.ವಿಜಯಭಾಸ್ಕರ್ ಸನ್ಮಾನಿಸಿದರು.
ವಕೀಲ ರವಿ ನಾಲತವಾಡ, ಸಂತೋಷ ನಾಯಕ, ಮುತ್ತಣ್ಣ ತಾಳಿಕೋಟಿ, ಚೇತನ ಕೆಂಧೂಳಿ, ಅನಿಲ ನಾಯಕ ಮೊದಲಾದವರು ಇದ್ದರು. ಗೋಪಾಲ ಜೀ ಅವರು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ ಅವರ ಮನೆಗೆ ಭೇಟಿ ನೀಡಿದರು.