ಶಿವಮೊಗ್ಗ: ಇಂದು ನಾಗರ ಪಂಚಮಿ. ರಾಜ್ಯಾದ್ಯಂತ ಸಡಗರ, ಸಂಭ್ರಮದಿಂದ ಹುತ್ತಕ್ಕೆ ಹಾಲೆರೆದು ಪೂಜಿಸಲಾಗಿದೆ. ಇಂತಹ ನಾಗರ ಪಂಚಮಿ ದಿನದಂದೇ ಹಾವು ಕಚ್ಚಿ ಬಾಣಂತಿಯೊಬ್ಬರು ಸಾವನ್ನಪ್ಪಿರುವಂತ (women death) ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.
Join Our Telegram: https://t.me/dcgkannada
ಜಿಲ್ಲೆಯ ಸಾಗರ ತಾಲ್ಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ನಾಗರ ಪಂಚಮಿಯ ಇಂದಿನ ದಿನದಂದೇ ಬಾಣಂತಿಯಾಗಿದ್ದಂತ (women death) ರಂಜಿತಾ(22) ಎಂಬುವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ರಂಜಿತಾ ಅವರು ಹುತ್ತಾದಿಂಬ ಗ್ರಾಮದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದಾರೆ. ಹೀಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ರಂಜಿತಾ (women death) ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Suicide: ನಾಗರ ಪಂಚಮಿಯಂದು ದುರಂತ.. ನೇಣಿಗೆ ಶರಣಾದ ಪ್ರೇಮಿಗಳು!
ಅಂದಹಾಗೆ, ರಂಜಿತಾ (women death) ಅವರು ಮೂರು ತಿಂಗಳ ಹಿಂದಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇಂದು ಹಾವು ಕಚ್ಚಿ ಸಾವನ್ನಪ್ಪಿದ್ದರಿಂದ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡಂತೆ ಆಗಿದೆ.