ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪದವಿ ಕಾಲೇಜಿನಲ್ಲಿ ಜೂ.19, 20 ರಂದು ಎರಡು ದಿನಗಳ ಕಾಲ ಪಟ್ಟಣದ ಅಭ್ಯುದಯ ಪದವಿ ಕಾಲೇಜಿನಲ್ಲಿ ಸಂಯೋಜಿತ ಪದವಿಗಳ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಎಂದು ಅಭ್ಯುದಯ ಪದವಿ ಕಾಲೇಜಿನ ಕಾರ್ಯದರ್ಶಿ ಎಂ. ಎನ್. ಮದರಿ ತಿಳಿಸಿದರು.
ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಕವಿವಿ ಮಾಜಿ ಕುಲಪತಿ ಎಚ್. ಬಿ. ವಾಲೀಕಾರ, ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಕ್ರೈಸ್ಟ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಕೆ. ಅಶೋಕ, ಧಾರವಾಡ ಸ್ಪರ್ಧಾ ಜೀನಿಯಸ್ ಅಕಾಡೆಮಿಯ ಸಿದ್ದಣ್ಣ ದಳವಾಯಿ, ಧಾರವಾಡ ಈಶ್ವರ ಗಿರಿ ಪಾಠಶಾಲಾದ ಶಿಕ್ಷಣ ತಜ್ಞೆ ಪ್ರಿಯಾಂಕಾ ಪತ್ತಾರ, ಧಾರವಾಡ ಎಂ. ಡಿ. ಆರ್. ಎಸ್ ನ ಶೇಖಪ್ಪ ಮೇಟಿ ಆಗಮಿಸುವರು. ಎರಡು ದಿನಗಳ ಕಾಲ ಪದವಿ ಸಂಯೋಜಿತ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.