ಮುದ್ದೇಬಿಹಾಳ : ಯುವ ಜನಾಂಗ ದುಶ್ಚಟಗಳ ದಾಸರಾಗಿ ತಮ್ಮ ಬದುಕು ಹಾಳುಮಾಡಿಕೊಳ್ಳುತ್ತಿದ್ದು ಅವರನ್ನು ಸರಿದಾರಿಯಲ್ಲಿ ನಡೆಸಲು ದುಶ್ಚಟಗಳನ್ನು ಭಿಕ್ಷೆ ಬೇಡಿ ಅವರನ್ನು ಸನ್ಮಾರ್ಗದ ಬದುಕಿನ ದಾರಿಗೆ ತೋರುವುದಕ್ಕಾಗಿ ಜನಜಾಗೃತಿ ಸೇವಾಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹುಣಶ್ಯಾಳ ಪಿ.ಬಿ ಹಿರೇಮಠದ ಆನಂದ ದೇವರು ಹೇಳಿದರು.
Join Our Telegram: https://t.me/dcgkannada
ತಾಲೂಕಿನ ಬಸರಕೋಡ ಗ್ರಾಮದಲ್ಲಿ ಒಂಭತ್ತು ದಿನಗಳ ಕಾಲ ನಡೆದ ಜನಜಾಗೃತಿ ಸೇವಾಯಾತ್ರೆಯ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.

ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಬದುಕಿಗೆ ವಿದಾಯ ಹೇಳಿ ಹೋಗುತ್ತಿರುವ ಯುವ ಜನಾಂಗವನ್ನು ಸರಿದಾರಿಗೆ ತರುವ ಸಂಕಲ್ಪವನ್ನು ಮಾಡಿದ್ದೇವೆ. ಬೀದಿ ಬೀದಿಗಳಲ್ಲಿ ಸುತ್ತಾಡಿ ಪ್ರತಿ ಮನೆ ಮನೆಗಳಿಗೆ ಜಾತಿ ಭೇದವಿಲ್ಲದೆ ಹೋಗಿ ರುದ್ರಾಕ್ಷಿ ದೀಕ್ಷೆಯನ್ನು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Who after modi? ಮೋದಿ ನಂತರ ಪ್ರಧಾನಿ ಯಾರು..? ಸಮೀಕ್ಷೆ ಬಹಿರಂಗ..!
ಜನಜಾಗೃತಿ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಕೆ.ವಾಯ್. ಬಿರಾದಾರ, ಮುಖಂಡ ಶ್ರೀಶೈಲ ಮೇಟಿ, ಎಸ್.ಜಿ.ಬಿರಾದಾರ, ನಾಗರಾಜ ಕಮತರ, ಅನ್ನಾಸಾಬ ನಾಡಗೌಡರ , ಬಸವರಾಜ ಮಂಕಣಿ,ಬಸಪ್ಪ ಸಜ್ಜನ, ಸಂಗಮೇಶ ತೋಟದ ಮೊದಲಾದವರು ಇದ್ದರು.