ಮುದ್ದೇಬಿಹಾಳ : ವ್ಯಾಪಾರಿಗಳು,ರೈತರ ಸಹಕಾರದಿಂದ ಸಂಘವು ಒಟ್ಟು 67.38 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ವೀರಶೈವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಈರಣ್ಣ ತಡಸದ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಏಪಿಎಂಸಿಯಲ್ಲಿರುವ ವೀರಶೈವ ಪತ್ತಿನ ಸಹಕಾರಿ ಸಂಘದಲ್ಲಿ ಈಚೇಗೆ ಸಂಘದಲ್ಲಿ ಹಮ್ಮಿಕೊಂಡಿದ್ದ 31ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಧಾರವಾಡದಲ್ಲಿ ಸಂಘದ ಪ್ರಥಮ ಶಾಖೆ ಆರಂಭಿಸಲಾಗಿದ್ದು ನಿಡಗುಂದಿ ಸೇರಿ ಇನ್ನೂ ಎರಡು ಕಡೆಗಳಲ್ಲಿ ಹೊಸದಾಗಿ ಶಾಖೆ ತೆರೆಯುವುದಾಗಿ ತಿಳಿಸಿದರು.
ಸಂಘದ ಹಿರಿಯ ಗ್ರಾಹಕರಾದ ಅಯ್ಯಣ್ಣ ಕಡಿ, ದೊಡ್ಡಬಸಪ್ಪ ಹುರಕಡ್ಲಿ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ವಿಜಯಪುರ RTO ಆಗಿ ಗುಡ್ನಾಳದ ವಾಸೀಮ್ ಬಾಬಾ ಮುದ್ದೇಬಿಹಾಳ (ಪಟೇಲ್) ನೇಮಕ
ಸಂಘದ ಉಪಾಧ್ಯಕ್ಷೆ ಎ.ಎಸ್.ಹಿರೇಮಠ, ನಿರ್ದೇಶಕರಾದ ಎಸ್.ಎಸ್.ಬಳ್ಳೊಳ್ಳಿ, ಎಂ.ಎಸ್.ನಾವದಗಿ,ಕೆ.ಬಿ.ಮಾದನಶೆಟ್ಟಿ, ಎಸ್.ಎಂ.ಚಳಗೇರಿ, ಸಿ.ಜಿ.ಬಿಂಜಲಭಾವಿ, ಸಿ.ಎಸ್.ಗುಡ್ಡದ, ಎಂ.ಸಿ.ದಡ್ಡಿ, ಡಿ.ಎಸ್.ಅಂಗಡಿ, ಯು.ಎ.ನಾಯನೇಗಲಿ, ಪಿ.ಎಸ್.ಮುದ್ದೇಬಿಹಾಳ , ಸಂಘದ ಕಾರ್ಯದರ್ಶಿ ವಿ.ಎಸ್.ನಾವದಗಿ, ಸಿಬ್ಬಂದಿ ಜೆ.ಎಸ್.ದಡ್ಡಿ, ಎಸ್.ವಿ.ದಡ್ಡಿ ಮೊದಲಾದವರು ಇದ್ದರು.