ಮುದ್ದೇಬಿಹಾಳ : ಸಹಕಾರ ಸಂಘದ ಮೂಲಕ ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಪಾವತಿಸಲು ಮುಂದಾಗುವ ಮೂಲಕ ಬ್ಯಾಂಕಿನ ವಿಶ್ವಾಸಕ್ಕೆ ಗ್ರಾಹಕರು ಪಾತ್ರರಾಗಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸಪ್ಪ ಹೆಬ್ಬಾಳ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಸಂಘದ ಕಚೇರಿಯಲ್ಲಿ ಮಂಗಳವಾರ 25ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಾಲಿನಲ್ಲಿ ಒಟ್ಟು 8.77 ಲಕ್ಷ ರೂ.ಲಾಭ ಸಂಘ ಮಾಡಿದ್ದು ಮುಂದಿನ ವರ್ಷದ ಒಳಗಾಗಿ ನಾಲತವಾಡದಲ್ಲಿ ಸಂಘದ ಶಾಖೆಯನ್ನು ಆರಂಭಿಸಲಾಗುತ್ತದೆ. ಅಂದೇ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಲಾಗುವುದು ಎಂದರು.
ಗ್ರಾಹಕರು ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸುವ ಕಾರ್ಯ ಮಾಡಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಕಾಶೀನಾಥ ಹೆಬ್ಬಾಳ, ನಿರ್ದೇಶಕರಾದ ಬಸವರಾಜ ಪಣೇಗೋಳ, ಮುತ್ತಣ್ಣ ಪ್ಯಾಟಿಗೌಡರ, ಚೆನ್ನಬಸ್ಸು ಗುಡ್ಡದ ಮಾತನಾಡಿದರು.ಸಂಘದ ಉಪಾಧ್ಯಕ್ಷ ರಮೇಶ ಹೆಬ್ಬಾಳ , ನಿರ್ದೇಶಕರಾದ ಸುಭಾಷ ರುದ್ರಗಂಟಿ, ಬಸವರಾಜ ಅಗಸಬಾಳ, ಬಸಪ್ಪ ಹುಣಶ್ಯಾಳ, ಈರಪ್ಪ ಆಲೂರ, ದ್ಯಾವಪ್ಪ ಹುಣಶ್ಯಾಳ, ಉಮೇಶ ಪ್ಯಾಟಿಗೌಡರ, ಸಂಗಪ್ಪ ಕಲ್ಲುಂಡಿ, ಶಂಕ್ರಮ್ಮ ಪ್ಯಾಟಿಗೌಡರ, ಜಯಶ್ರೀ ಹೆಬ್ಬಾಳ ಇದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮಿ ಪ್ಯಾಟಿಗೌಡರ ಪ್ರಾರ್ಥಿಸಿದರು. ರಮೇಶ ಪ್ಯಾಟಿಗೌಡರ ನಿರೂಪಿಸಿದರು. ಶಂಕರ ಹೆಬ್ಬಾಳ ವಂದಿಸಿದರು.
ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಚಾಕು ಇರಿತ, ನಾಲ್ವರು ಯುವಕರಿಗೆ ಗಂಭೀರ ಗಾಯ