ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ ದಿನಗಳಲ್ಲಿಯೂ ಗುರುವಿಗೆ ಮಹತ್ವವಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಬಿ.ಎ.ಎಸ್ ಇಂಟರನ್ಯಾಶನ್ ಶಾಲೆಯ ಕಾರ್ಯದರ್ಶಿ ಎಸ್.ಎಸ್.ಬಿರಾದಾರ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎ.ಎಸ್. ಇಂಟನ್ಯಾಷನಲ್ ಸ್ಕೂಲ್ನಲ್ಲಿ ಬುಧವಾರ ಶಿಕ್ಷಕರ ದಿನಾಚರಣೆ ಹಾಗೂ ಇತ್ತಿಚಿಗೆ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಠ್ಯಯೊಂದೆ ಅಗತ್ಯವಲ್ಲ. ಪಠ್ಯತರ ಚಟುವಟಿಕೆಗಳೂ ಬಹಳ ಅಗತ್ಯವಿದೆ. ಇದನ್ನು ಕಳಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರ ಪ್ರಯತ್ನವಿರುತ್ತದೆ. ಆದರೆ ಕೆಲ ಬಾರಿ ಶಿಕ್ಷಕರ ಮೇಲೆ ಕೆಲ ಪಾಲಕರು ತಪ್ಪು ತಿಳುವಳಿಕೆ ಇಟ್ಟುಕೊಳ್ಳುತ್ತಾರೆ. ಮಕ್ಕಳಿಗೆ ಪಾಲಕರಿಗೆ ಇರುವ ಜವಾಬ್ದಾರಿಗಿಂತ ಒಬ್ಬ ಗುರುವಿಗೆ ಇರುತ್ತದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಸ್ಥಾಪಕ ಶಿವನಗೌಡ ಬಿರಾದಾರ ಮಾತನಾಡಿ, ಸಮಾಜದಲ್ಲಿ ಗುರುವಿಗೆ ಅತೀ ಹೆಚ್ಚು ಗೌರವವಿದೆ. ಇದನ್ನು ಪ್ರತಿಯೊಬ್ಬ ಪಾಲಕರೂ ತಿಳಿದುಕೊಳ್ಳಬೇಕು. ಅದರಂತೆ ಸಮಾಜ ಗುರುವಿಗೆ ನೀಡುವ ಮಹತ್ವವನ್ನು ಅರಿತುಕೊಂಡು ಮುನ್ನೆಯಬೇಕು. ಇದರಿಂದ ಸಮಾಜ ಕಲ್ಯಾಣವಾಗುತ್ತದೆ ಎಂದು ಹೇಳಿದರು. ಪ್ರಾಚಾರ್ಯರಾದ ಅಶೋಕ್ ತುಪ್ಪದ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ, ಕೋಆರ್ಡಿನೇಟರ್ ಸತೀಶ್ ವಾಲಿಕಾರ, ಪಿ.ಕೆ.ಬಿರಾದಾರ, ನಿವೃತ್ತ ಶಿಕ್ಷಕರಾದ ಶಕುಂತಲಾ ಬಿರಾದಾರ, ಶಿಕ್ಷಕಿಯರಾದ ಶೈಲಾ ದೇಸಾಯಿ, ಶಾಂತಾ ಪಾಟೀಲ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರಿದ್ದರು.
ರಾಜ್ಯಮಟ್ಟದ ಓಪನ್ ಸ್ಕೆಟಿಂಗ್ ಚಾಂಪಿಯನ್ಶಿಪ್ನಲ್ಲಿ ಸಾಧನೆ:
ಬೆಂಗಳೂರಿನ ಕರ್ನಾಟಕ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಹಾಗೂ ಕಲಬುರಗಿ ಜಿಲ್ಲಾ ರೋಲರ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಕಲಬುರಗಿಯ ಸ್ಪಾರ್ಕಲ್ಸ್ ಇಂಟರ್ನ್ಯಾಷನಲ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಓಪನ್ ಸ್ಕೆಟಿಂಗ್ ಚಾಂಪಿಯನ್ಶಿಪ್-2026ರಲ್ಲಿ ಸಾಧನೆಗೈದ ಹಾಗೂ ವಿಜಯಪುರದಲ್ಲಿ ನಡೆದ ಗಾಂಧಾರಿ ವಿದ್ಯೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.







