ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಯರಝರಿ ಜಿಪಂ ಭಾಗದ ರೈತರು ಬುಧವಾರದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಶಾಸಕರು,ಸರಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಳೆ ಕೊರತೆ ಇದೆ ಎಂದು ಕೃಷಿ ಇಲಾಖೆಯ ಅಂಕಿಸoಖ್ಯೆಗಳು ಹೇಳುತ್ತಿದ್ದರೂ ಈ ಭಾಗದಿಂದ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವ ಕೆಲಸ ಆಗಿಲ್ಲ ಎಂದು ಆರೋಪಿಸಿದರು.

ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರು ಬರೀ ನಾಟಕೀಯತೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.ಎಂದಿಗೂ 10 ಗಂಟೆ ನಂತರ ಎದ್ದೆಳದ ಮನುಷ್ಯ ಇಂದು 9 ಗಂಟೆಗೆ ಟಾಸ್ಕ್ಫರ‍್ಸ್ ಸಭೆ ಎಂಬ ಮತ್ತೊಂದು ನಾಟಕ ಮಾಡುತ್ತಿದ್ದಾರೆ.ಜನರ ಕಣ್ಣಿಗೆ ಮಂಕುಬೂದಿ ಎರಚುವುದನ್ನು ಕೈ ಬಿಡಿ ಎಂದು ಹೇಳಿದರು.ಕಳೆದ ಮೂರು ತಿಂಗಳಿನಿoದ ಬರಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸರ್ವೆ ನಡೆಸಿ ವರದಿ ತಯಾರಿಸುವ ಕೆಲಸ ಮಾಡಿಲ್ಲ.ಮಾಡಿದ್ದರೆ ಅದನ್ನು ಜನರ ಹಾಗೂ ಮಾಧ್ಯಮದವರ ಮುಂದೆ ಬಹಿರಂಗಪಡಿಸಿ ಎಂದು ನಡಹಳ್ಳಿ ಹೇಳಿದರು. ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ, ವಕೀಲ ಎಂ.ಆರ್.ಪಾಟೀಲ ಸೇರಿದಂತೆ ಹಲವು ಮುಖಂಡರು ಬರ ಪರಿಸ್ಥಿತಿ ಕುರಿತು ಮಾತನಾಡಿದರು.ಯರಝರಿ ಭಾಗದ ರೈತರು,ಬಿಜೆಪಿ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಯುವ ವಕೀಲರ ಬೆಂಬಲ: ತಾಲ್ಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ನಡೆದಿರುವ ಮೂರನೇ ದಿನದ ಹೋರಾಟದಲ್ಲಿ ತಾಲ್ಲೂಕಿನ ಕೆಲವು ಯುವ ವಕೀಲರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

Latest News

ಸೆ.9 ರಂದು ಬರಪರಿಸ್ಥಿತಿ ಅವಲೋಕನಕ್ಕೆ ಟಾಸ್ಕಫೋರ್ಸ್ ಸಭೆ

ಸೆ.9 ರಂದು ಬರಪರಿಸ್ಥಿತಿ ಅವಲೋಕನಕ್ಕೆ ಟಾಸ್ಕಫೋರ್ಸ್ ಸಭೆ

ಮುದ್ದೇಬಿಹಾಳ : ಬರಪರಿಸ್ಥಿತಿ,ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಚರ್ಚೆ ನಡೆಸಲು

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಮುದ್ದೇಬಿಹಾಳ : ಮತಕ್ಷೇತ್ರದ ರೈತರಿಂದ ಆಯ್ಕೆಯಾಗಿರುವ ನೀವು ಅವರ ಬದುಕಿಗೆ ಸಂಕಷ್ಟ ಎದುರಾದಾಗ ಸ್ಪಂದಿಸುವ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ

ಎಐ ಚಾಲಿತ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ; ಆರಕ್ಷಕರು ಸಮಾಜದ ರಕ್ಷಕರು,ಅವರನ್ನು ಬಳಸಿಕೊಳ್ಳಬಾರದು-ನಾಡಗೌಡ

ಎಐ ಚಾಲಿತ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ; ಆರಕ್ಷಕರು ಸಮಾಜದ ರಕ್ಷಕರು,ಅವರನ್ನು ಬಳಸಿಕೊಳ್ಳಬಾರದು-ನಾಡಗೌಡ

ಮುದ್ದೇಬಿಹಾಳ : ಹೆಚ್ಚುತ್ತಿರುವ ಜನಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆ ಮತ್ತಷ್ಟು ದಕ್ಷತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಸಕ ಸಿ.ಎಸ್.ನಾಡಗೌಡರು ವಿಶೇಷ ಮುತುವರ್ಜಿ ವಹಿಸಿ ನಗರದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ ಎಂದು ಡಿವೈಎಸ್ಪಿ ಚಂದ್ರಕಾAತ ನಂದರೆಡ್ಡಿ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಎಐ ಚಾಲಿತ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಕಾರ್ಯದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಮುದ್ದೇಬಿಹಾಳ ಪಟ್ಟಣದ

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಮುದ್ದೇಬಿಹಾಳ : ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಕುಟುಂಬದವರು ಪರಿಶ್ರಮದಿಂದ ಗಳಿಸಿದ ಆಸ್ತಿಯನ್ನು ದಾನ ಮಾಡುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಸರ್ಕಾರಿ ಕೈಗಾರಿಕಾ ಹಾಗೂ ಉದ್ಯೋಗ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಗಂಗಮ್ಮ ಚಿನಿವಾರ ಅವರು ಬಂಥನಾಳ ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಶಿಕ್ಷಣಕ್ಕಾಗಿ ತಮ್ಮ ಇಡೀ ಆಸ್ತಿಯನ್ನು ದಾನ