ಬಸವ ಇಂಟರನ್ಯಾಷನಲ್ ಸ್ಕೂಲ್ ಮಕ್ಕಳಿಂದ ವಿಶ್ವದಾಖಲೆ…!

ಬಸವ ಇಂಟರನ್ಯಾಷನಲ್ ಸ್ಕೂಲ್ ಮಕ್ಕಳಿಂದ ವಿಶ್ವದಾಖಲೆ…!

ಮುದ್ದೇಬಿಹಾಳ : ರಾಷ್ಟ್ರೀಯ ಮಟ್ಟದ ಇಬಿಕ್ ರೀಡಥಾನ್ -2,2025ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಟ್ಟಣದ ಬಸವ ಇಂಟರ್‌ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಹರ್ಲಾಪೂರ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಬಸವ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಸಾಧನೆ ತೋರಿದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ಇಂಗ್ಲಿಷ್ ಭಾಷಾ ಕೌಶಲ್ಯ, ಅರ್ಥಗ್ರಹಣ, ಶಬ್ದಸಂಪತ್ತು ಹಾಗೂ ವಿಮರ್ಶಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆ ತೋರಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯೆ ಪ್ರಭಾ ಚಿನಿವಾರ(ಹರ್ಲಾಪೂರ) ಮಾತನಾಡಿ, ಇಬಿಕ್ ಭಾಷಾ ಪ್ರಯೋಗಾಲಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಈ ರಾಷ್ಟ್ರೀಯ ಅಭಿಯಾನವು ಬುಕ್ರ್ ತರಗತಿ, ಕೇಂಬ್ರಿಜ್ ಇಂಗ್ಲಿಷ್ ಹಾಗೂ ದಿ ಟೈಮ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ನಡೆದಿದ್ದ ಅಂತರ್ಜಾಲ ಆಧಾರಿತ ವೇದಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ವಿವಿಧ ಪುಸ್ತಕಗಳು ಹಾಗೂ ಕಥೆಗಳನ್ನು ಓದಲು ಮತ್ತು ಧ್ವನಿಮುದ್ರಿತ ಪುಸ್ತಕಗಳನ್ನು ಆಲಿಸಲು ಅವಕಾಶ ಕಲ್ಪಿಸಲಾಗಿತ್ತು.ಸ್ಪರ್ಧೆಯಲ್ಲಿ ವೇದಾಂತ 119 ಪುಸ್ತಕಗಳನ್ನು ಹಾಗೂ ಮನೀಷ್ ಜಾಟ್ 121 ಪುಸ್ತಕಗಳನ್ನು ಓದಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣೇಶ ಜಾಟ್, ಲೀಲಾ, ಜಾಟ್ ನಾಗರಾಜ ಹಾಗೂ ಮಹಾಲಕ್ಷ್ಮಿ ಸೇರಿದಂತೆ ಪೋಷಕರು ಹಾಗೂ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

ಕ್ರೀಡಾ ಕ್ಷೇತ್ರದಲ್ಲೂ ಸಾಧನೆ.

ಪಟ್ಟಣದ ಬಸವ ಇಂಟರನ್ಯಾಷನಲ್ ಸ್ಕೂಲ್ ಮಕ್ಕಳು ಶೈಕ್ಷಣಿಕ ಸಾಧನೆಯ ಜೊತೆಗೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದು ಸಂಸ್ಥೇಯ ಆಡಳಿತ ಮಂಡಳಿ ತಿಳಿಸಿದೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸ್ಕೇಟಿಂಗ್ ಇಂಟರ್ ಸ್ಕೂಲ್ ಕಾಂಪಿಟೇಷನ್‌ನಲ್ಲಿ 6ನೇ ತರಗತಿ ವಿದ್ಯಾರ್ಥಿ ನಾಗಶೃತನ್ ಇಲ್ಲೂರ್ ಅವರು ಸ್ಕೇಟಿಂಗ್‌ನ ಇನ್‌ಲೈನ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಅಲ್ಲದೇ ರೋಪ್ ಸ್ಕಿಪ್ಪಿಂಗ್, ಕಬಡ್ಡಿ ಹಾಗೂ ಅಥ್ಲೆಟಿಕ್ಸ್‌ನಲ್ಲೂ ಶಾಲೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ 4ನೇ ತರಗತಿ ವಿದ್ಯಾರ್ಥಿ ಜೀಶಾನ್ ಸೂರಜ್ ರಿಸಾಲ್ದಾರ ಉತ್ತಮ ಪ್ರದರ್ಶನ ನೀಡಿದ್ದರೆ, 9ನೇ ತರಗತಿ ವಿದ್ಯಾರ್ಥಿ ಉಮೇರ್ ಡವಳಗಿ ನಾಯಕತ್ವದ ಕಬಡ್ಡಿ ತಂಡ ಸಿಬಿಎಸ್‌ಇ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ವಿಧ್ಯಾರ್ಥಿಗಳಾಗಿದ್ದಾರೆ.

Latest News

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ

ಪಾಲಕರು,ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಅನ್ನದಾತರು-ಅಮೀತಗೌಡ ಪಾಟೀಲ್

ಪಾಲಕರು,ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಅನ್ನದಾತರು-ಅಮೀತಗೌಡ ಪಾಟೀಲ್

ಮುದ್ದೇಬಿಹಾಳ : ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಮೇಲಿನ ಪೈಪೋಟಿ ಹೆಚ್ಚಾಗಿದ್ದು, ಆಕ್ಸ್ಫರ್ಡ್ ಸಂಸ್ಥೆಯಲ್ಲಿ ವ್ಯಾಸಂಗ

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಮೇಲೆ ಹಣ ದುರುಪಯೋಗದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅವರಿಗೆ ಸರ್ಕಾರ ಕೊಟ್ಟಿರುವ ಸ್ಥಾನಮಾನಗಳನ್ನು ಹಿಂಪಡೆದುಕೊoಡು ತನಿಖೆ ನಡೆಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲ್ಲೂಕು ಘಟಕದಿಂದ ರಾಜ್ಯಪಾಲರು,ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿದ ಪದಾಧಿಕಾರಿಗಳು, ಶಿರಸ್ತೇದಾರ ಎಂ.ಎ.ಬಾಗೇವಾಡಿ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ ಸಂಸ್ಥೆಯಾಗಿದೆ.ಆಯ್ಕೆಯಾಗಿರುವ ಎಲ್ಲ ಸದಸ್ಯರು ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಉದ್ಯಮಿ ಅಯೂಬ್ ಮನಿಯಾರ್ ಹೇಳಿದರು. ಪಟ್ಟಣದ ಬೆಂಗಳೂರು ಬೇಕರಿ ಹಾಲ್‌ನಲ್ಲಿ ಮಂಗಳವಾರ ಅಂಜುಮನ್ ಹಿತರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಂಜುಮನ್ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಗೆ ಯುವ ಉತ್ಸಾಹಿ ಸದಸ್ಯರು ಆಯ್ಕೆಯಾಗಿದ್ದೀರಿ.ಅಂಜುಮನ್ ಸಂಸ್ಥೆಗೆ ಇದ್ದ