ನಾನು  ಕಾಂಗ್ರೆಸ್  ಹೈಕಮಾಂಡ್  ಲಿಸ್ಟ್’ನಲ್ಲಿರುವೆ-C.S.ನಾಡಗೌಡ

ನಾನು  ಕಾಂಗ್ರೆಸ್  ಹೈಕಮಾಂಡ್  ಲಿಸ್ಟ್’ನಲ್ಲಿರುವೆ-C.S.ನಾಡಗೌಡ

ಮುದ್ದೇಬಿಹಾಳ : ‘ಕೆಲವರು ನಾನು ಡಿಕೆಶಿ ಲಿಸ್ಟ್’ನಲ್ಲಿರುವೆ,ಇನ್ನು ಕೆಲವರು ಸಿದ್ಧರಾಮಯ್ಯ ಲಿಸ್ಟ್’ನಲ್ಲಿರುವೆ ಎನ್ನುತ್ತಿದ್ದಾರೆ.ನಾನು ಅವರಿಬ್ಬರ ಜೊತೆಗೆ ಖರ್ಗೆ ಲಿಸ್ಟ್’ನಲ್ಲಿ ಇದ್ದೇನೆ.ಕಾಂಗ್ರೆಸ್ ಹೈಕಮಾಂಡ್  ಲಿಸ್ಟ್’ನಲ್ಲೂ  ಇದ್ದೇನೆ’ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

 ತಾಲ್ಲೂಕಿನ  ಹಡಲಗೇರಿ ಗ್ರಾಮದಲ್ಲಿ  ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್  ರಾಜ್ ಇಲಾಖೆ,ಪಂಚಾಯತ್ ರಾಜ್ ಇಂಜಿನಿಯರಿOಗ್ ವಿಭಾಗದ ನೇತೃತ್ವದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಹಡಲಗೇರಿ-ಆಲಮಟ್ಟಿ ಮುಖ್ಯರಸ್ತೆ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಡಿಕೆಶಿ,ಸಿದ್ಧರಾಮಯ್ಯ ಮಧ್ಯೆ ಹಾಗೆ ಹೀಗೆ ಎಂದು ಟಿವಿಯವರು ಬಿಂಬಿಸಿದರು. ಆದರೆ ಹೈಕಮಾಂಡ್  ಹೇಳಿದಂತೆ ಅವರು ಕೇಳುವುದಾಗಿ  ಹೇಳಿದ್ದಾರೆ.ಸರ್ಕಾರ  ಗಟ್ಟಿಯಾಗಿದೆ.134 ಶಾಸಕರು ಜೊತೆಗೆ ಇದ್ದು ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ್ದು ರಾಜ್ಯಗಳಲ್ಲಿ ಗಲಾಟೆ ಉಂಟು ಮಾಡುವ ಉದ್ದೇಶ ಹೊಂದಿದೆ ಎಂಬುದಕ್ಕೆ ಕಬ್ಬಿನ ಬೆಳೆಯ ಬೆಲೆಗಾಗಿ ನಡೆದ ಹೋರಾಟ ನಿದರ್ಶನ.ಬೆಂಬಲ ಬೆಲೆ ನಿಗದಿ ಮಾಡುವ ಅಧಿಕಾರ ಕೇಂದ್ರಕ್ಕಿದ್ದರೂ ರಾಜ್ಯ ಸರ್ಕಾರದ ಮೇಲೆ ಬೆರಳು ಮಾಡುವ ಕೆಟ್ಟ ಪ್ರವೃತ್ತಿ ಕೇಂದ್ರ ಸರ್ಕಾರದ್ದು ಎಂದು ಟೀಕಿಸಿದರು.

ಬೆಳೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಅನ್ಯಾಯ,ತಾರತಮ್ಯ ಮಾಡುವುದಿಲ್ಲ.ಈಗಾಗಲೇ ರೈತರ ಖಾತೆಗಳಿಗೆ ಬೆಳೆ ಪರಿಹಾರದ ಹಣ ಜಮೆ ಮಾಡಿದೆ ಎಂದು ತಿಳಿಸಿದರು.

ಮುಖಂಡ ಬಿ.ಆರ್.ನಾಡಗೌಡ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಂತೋಷ  ಚವ್ಹಾಣ(ಹುಲ್ಲೂರ),ಹಣಮಂತ ತಳ್ಳೀಕೇರಿ,ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃಬಾಯಿ ಬಿರಾದಾರ,ಉಪಾಧ್ಯಕ್ಷ ಅಬ್ದುಲರಜಾಕ್ ಮೊಕಾಶಿ, ಸಿದ್ದನಗೌಡ ಬಗಲಿ,ಶಿವಪುತ್ರ ಹರಿಂದ್ರಾಳ, ಮೌನೇಶ ಮಾದರ,ಮುತ್ತಪ್ಪ ಮುರಾಳ,ಗುತ್ತಿಗೆದಾರರಾದ ಯಲ್ಲಪ್ಪ ಚಲವಾದಿ, ಭೀಮಣ್ಣ ಹರಿಂದ್ರಾಳ, ಹಣಮಂತ ಖಿಲಾರಟ್ಟಿ,ಬಡಕಪ್ಪ ಹರಿಂದ್ರಾಳ,ತಾಪA ಅಧಿಕಾರಿ ಎಸ್.ಎಸ್.ಗಣಾಚಾರಿ, ನಾಗರಾಜ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Latest News

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ : ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಆರ್ಚಕರು ಕರೆ ಮಾಡಿ ದೇವಸ್ಥಾನದ ವಿಗ್ರಹ ಕಾಣಿಸುತ್ತಿಲ್ಲ, ಕಳ್ಳತನವಾಗಿದೆ ಎಂದು ಕರೆ ಮಾಡಿ ತಿಳಿಸಿದ ಕೂಡಲೇ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದೆವು.ದೇವಸ್ಥಾನದ ಸಿಸಿ