ಇದೇ 12ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಂದ‌ ರಾಜಧಾನಿಯಲ್ಲಿ ಹೋರಾಟ.. ಬೇಡಿಕೆ ಏನು ಗೊತ್ತಾ?

ಇದೇ 12ರಂದು ಪ್ರಾಥಮಿಕ ಶಾಲಾ ಶಿಕ್ಷಕರಿಂದ‌ ರಾಜಧಾನಿಯಲ್ಲಿ ಹೋರಾಟ.. ಬೇಡಿಕೆ ಏನು ಗೊತ್ತಾ?

ಬೆಂಗಳೂರು: ಪದವಿ ಮುಗಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಘೋಷಿಸಬೇಕು. 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು 2016ರ ಮೊದಲು ನೇಮಕಗೊಂಡವರಿಗೆ ಪೂರ್ವಾನ್ವಯಗೊಳಿಸಬಾರದು ಎಂಬುದು ಸೇರಿದಂತೆ ತಮ್ಮ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆ.12ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಮಟ್ಟದ ಬ್ರಹತ್‌ ಪ್ರತಿಭಟನೆ ನಡೆಸಲಿದೆ.

ಪದವಿ ಪೂರೈಸಿರುವ ಶಿಕ್ಷಕರನ್ನು ಪದವೀ ಧರ ಶಿಕ್ಷರೆಂದು ಪರಿಗಣಿಸಿ ಮುಂದಿನ ಅವರ ಸೇವಾ ಬಡ್ತಿಗೆ ಪರಿಗಣಿಸಬೇಕು. ಅದೇ ರೀತಿ 2017ರ ಹೊಸ ನಿಯಮ ಜಾರಿಯಿಂದ 1ರಿಂದ 7ನೇ ತರಗತಿವರೆಗಿನ ಬೋಧನೆ ಗೆಂದು ನೇಮಕಾತಿ ಮಾಡಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 1ರಿಂದ 5ನೇ ತರಗತಿ ಬೋಧನೆಗೆ ಮಾತ್ರ ಸೀಮಿತ ಎಂದು ಹಿಂಬಡ್ತಿ ನೀಡಲಾಗಿದೆ.

ಅದೇ ರೀತಿ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ಸಾಕಷ್ಟು ಅನ್ಯಾಯವಾಗುತ್ತಿದೆ. ಈ ಎಲ್ಲದರ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿ ಅನ್ಯಾಯ ಸರಿಪಡಿಸಲು ಬೇಡಿಕೆ ಇಟ್ಟರೂ ಪ್ರಯೋ ಜನವಾಗಿಲ್ಲ ಹಾಗಾಗಿ ಹೋರಾಟ ಅನಿವಾ ರ್ಯವಾಗಿದೆ ಎಂದು ಸಂಘದ ಅಧ್ಯಕ್ಷತೆ, ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ ನುಗ್ಗಲಿ ಎಂದು ತಿಳಿಸಿದ್ದಾರೆ.

2016ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಅವಧಿ ಮುಗಿಯುವವೆಗೂ ಮೊದಲಿನಂತೆ 1ರಿಂದ 8ನೇ ತರಗತಿ ವರೆಗೆ ಬೋಧನೆಗೆ ಅವಕಾಶ ನೀಡಬೇಕು. ಸೇವಾ ಜೇಷ್ಠತೆ ಮೇಲೆ ಅವರಿಗೆ ಪ್ರೌಢ ಶಾಲೆಗೆ ಬಡ್ಡಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು. ಪದವೀಧರ ಶಿಕ್ಷಕರಿಗೆ ಪ್ರೌಢ ಶಾಲಾ ಬಡ್ತಿಗೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Latest News

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ ತಾಲ್ಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಿ.ಎಚ್.ಮುದ್ನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ನಾಗಪ್ಪ ತುರಡಗಿ,ಖಜಾಂಚಿಯಾಗಿ ಭರತೇಶ ಹೊಳಿ, ಉಪಾಧ್ಯಕ್ಷರಾಗಿ ಶಾಂತಪ್ಪ ಬಿರಾದಾರ,ರೇಣುಕಾ ಹಿರೇಮಠ,ಸಹ ಕಾರ್ಯದರ್ಶಿಯಾಗಿ ಈರಯ್ಯ ಹಿರೇಮಠ,ಶೈಲಾ ಗೊಂಗಡಿ,ಸAಘಟನಾ ಕಾರ್ಯದರ್ಶಿಗಳಾಗಿ ಬಸನಗೌಡ ಭಗವತಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಕವಡಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಜೂನ್ ಮೊದಲ ವಾರದಿಂದ ನಾಗರಬೆಟ್ಟದಲ್ಲಿ ರೈತರೊಡಗೂಡಿ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ದಶಕದಿಂದ ಈ ನೀರಾವರಿ ಯೋಜನೆಯಡಿ ಹೊಲಗಳಿಗೆ ನೀರು ಹರಿದಿಲ್ಲ.ರಾಜಕಾರಣಿಗಳ