ಮುದ್ದೇಬಿಹಾಳ : ತನ್ನೊಂದಿಗೆ ಅನೈತಿಕ ಸಂಬoಧವಿಟ್ಟುಕೊoಡಿದ್ದ ಮಹಿಳೆ ತನ್ನ ಮದುವೆಗೆ ವಿರೋಧಿಸಿದೆಳೆನ್ನುವ ಕಾರಣಕ್ಕಾಗಿ ಆಕೆಯನ್ನು ಕೊಲೆಗೈದು ಶವವನ್ನು ಕೃಷ್ಣಾ ನದಿಗೆ ಎಸೆಯಲು ಮುಂದಾಗಿದ್ದ ವೇಳೆ ಸಾರ್ವಜನಿಕರನ್ನು ಕಂಡು ಶವ ಅಲ್ಲಿಯೇ ಬಿಟ್ಟು ವ್ಯಕ್ತಿಯೋರ್ವ ಪರಾರಿಯಾಗಿರುವ ಘಟನೆ ತಾಲ್ಲೂಕಿನ ತಂಗಡಗಿ ಕೃಷ್ಣಾ ನದಿ ಬಳಿ ಮೇ.13 ರಂದು ಮಧ್ಯರಾತ್ರಿ ಜರುಗಿದೆ.
ಘಟನೆ ವಿವರ : ಮೂಲತಃ ತೇರದಾಳದ ಸದ್ಯಕ್ಕೆ ಹುನಗುಂದ ತಾಲ್ಲೂಕು ಮರೋಳದಲ್ಲಿ ವಾಸಿಸುತ್ತಿದ್ದ ಸಮ್ಮೇದ ವಿಜಯ ಸಾಬಣ್ಣವರ ಹಾಗೂ ಸವದತ್ತಿ ತಾಲ್ಲೂಕು ಅರ್ಟಗಲ್ ಗ್ರಾಮದ ವಿವಾಹಿತೆ ಮಹಿಳೆ ಗಂಗವ್ವ ಸುನೀಲ ತ್ಯಾಪಿ ಮಧ್ಯೆ ಅನೈತಿಕ ಸಂಬoಧ ಬೆಳೆದಿತ್ತು.
ಆರೋಪಿತ ಸಮ್ಮೇದನು ಬೇರೆ ಹುಡುಗಿಗೆ ಮದುವೆ ಮಾಡಿಕೊಳ್ಳಲು ಆತ ಪ್ರೀತಿಸುತ್ತಿದ್ದ ಗಂಗವ್ವ ತಕರಾರು ಮಾಡಿದ್ದನ್ನು ಸಹಿಸಲಾಗದೇ ಆಕೆಯನ್ನು ಮರೋಳ ಗ್ರಾಮದ ಹತ್ತಿರ ತಾನು ಪಾಲು ಮಾಡಿರುವ ಮಹಾಂತೇಶ ಮಡಿವಾಳರ ಇವರ ಹೊಲದಲ್ಲಿ ಮೇ.13 ರಂದು ರಾತ್ರಿ 8 ಗಂಟೆಗೆ ಅವಳಿಗೆ ಹೊಡೆದು ಕೊಲೆ ಮಾಡಿ ಅವಳಿಗೆ ತನ್ನ ಮೋಟಾರ್ ಸೈಕಲ್ ಮೇಲೆ ತಂಗಡಗಿ ಸೇತುವೆ ಮೇಲೆ ತಂದು ಅವಳ ಶವವನ್ನು ಬ್ರಿಡ್ಜ್ದ ಮೇಲಿಂದ ಒಗೆಯಲು ಶವವನ್ನು ಇಳಿಸುವ ಸಮಯದಲ್ಲಿ ಅಲ್ಲಿ ಕೆಲವು ಜನರು ನೋಡಿ ಅವನ ಬೆನ್ನು ಹತ್ತಿ ಕೂಗಿದಾಗ ಆತನು ಆಕೆಯ ಶವವನ್ನು ಹಾಗೂ ಮೋಟಾರ್ ಸೈಕಲ್ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬoಧಿಸಿದoತೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಮೇಲೆ 8 ಕಿ.ಮೀ ದೂರ ಶವ ಹೊತ್ತು ತಂದ ಆರೋಪಿ:
ಆರೋಪಿ ಸಮ್ಮೇದ ತಾನು ಕೊಲೆ ಮಾಡಿದ ಗಂಗವ್ವಳ ಶವವನ್ನು ಮರೋಳದಿಂದ ತಂಗಡಗಿ ಗ್ರಾಮದ ಬ್ರಿಡ್ಜ್ವರೆಗೆ ಬೈಕ್ ಮೇಲೆ ತಂದಿದ್ದಾನೆ.ಮರೋಳದಿoದ ತಂಗಡಗಿ ಸೇತುವೆ ಸುಮಾರು 8 ಕಿ.ಮೀ ಅಂತರವಿದ್ದು ಅಲ್ಲಿಂದ ಒಬ್ಬನೇ ಬೈಕ್ ಮೇಲೆ ಆಕೆಯ ಶವವನ್ನು ಹೊತ್ತುಕೊಂಡು ತಂದಿರುವ ಆಘಾತಕಾರಿ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.







