Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಸೋಮವಾರ ಜರುಗಿತು.

ಫೈನಲ್‌ನಲ್ಲಿ ಆಲಮಟ್ಟಿ ಸುಶಾಂತ-11 ತಂಡ ಹಾಗೂ ಬೂದಿಹಾಳ ಆರ್.ಕೆ ರಾಕೆಟ್ ತಂಡಗಳು ಮುಖಾಮುಖಿಯಾದವು.ಅದರಲ್ಲಿ ಮೊದಲು ಬ್ಯಾಟ್ ಮಾಡಿದ ಆಲಮಟ್ಟಿ ಸುಶಾಂತ ತಂಡ ನಿಗದಿತ ಹತ್ತು ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತು.ಬಳಿಕ ಬ್ಯಾಟ್ ಮಾಡಿದ ಬೂದಿಹಾಳ ಆರ್.ಕೆ.ರಾಕೆಟ್ ತಂಡ ಆರು ವಿಕೆಟ್ ಕಳೆದುಕೊಂಡು 106 ರನ್ ಗಳಿಸಿ ಗೆಲುವು ಸಾಧಿಸಿತು.
ಪ್ರಶಸ್ತಿ ವಿಜೇತ ತಂಡಗಳಿಗೆ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಸಂಘಟಕರಾದ ಕಾಮರಾಜ ಬಿರಾದಾರ,ಹುಸೇನ್ ಮುಲ್ಲಾ, ರಂಜಾನ್ ನದಾಫ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಯಲ್ಲಪ್ಪ ಮ್ಯಾಗೇರಿ,ಸಂಗಣ್ಣ ಮೇಲಿನಮನಿ,ಹುಲಗೇಶ ಈಳಗೇರ,ಪತ್ರಕರ್ತ ಶಂಕರ ಹೆಬ್ಬಾಳ,ಬಸವರಾಜ ಕುಂಬಾರ,ಸಿದ್ದು ಚಲವಾದಿ,ಯಾಸೀನ್ ಸೋಠೆ,ನಜೀರ ದಾಂಡಿಯಾ,ಸೋಹೇಬ ಪಟೇಲ್,ಅಡವಯ್ಯ ಹಿರೇಮಠ, ಯಾಸೀನ ಮಕಾನದಾರ ಮೊದಲಾದವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ, ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಸ್ಪರ್ಧಾತ್ಮಕ ಮನೋಭಾವ ಎಲ್ಲರಲ್ಲೂ ಅಗತ್ಯವಾಗಿದೆ.ಕ್ರಿಕೆಟ್‌ಗೆ ಹಣ ಪ್ರಾಯೋಜಕತ್ವ ಮಾಡುವುದು ಯುವಕರ ದೈಹಿಕ ಸಾಮರ್ಥ್ಯ ಸದೃಢವಾಗಿರಬೇಕು.ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಸದುದ್ದೇಶ ಅಡಗಿದೆ ಎಂದರು. ಮುಖoಡ ಕಾಮರಾಜ ಬಿರಾದಾರ ಮಾತನಾಡಿ, ಕ್ರಿಕೆಟ್ ಟೂರ್ನಾಮೆoಟ್ ಯಶಸ್ವಿಗೆ ಸಹಕರಿಸಿದ ದಾನಿಗಳಿಗೆ ಅಭಿನಂದಿಸಿದರು.ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ನಾಮನಿರ್ದೇಶಿತ ಸದಸ್ಯ ಮಹ್ಮದರಫೀಕ ಶಿರೋಳ ಕಾರ್ಯಕ್ರಮ ನಿರೂಪಿಸಿದರು.

ಪ್ರಶಸ್ತಿ ಪಡೆದುಕೊಳ್ಳಲು ಆಟಗಾರರ ನಿರಾಸಕ್ತಿ:
ಫೈನಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಆಲಮಟ್ಟಿ ಹಾಗೂ ಬೂದಿಹಾಳ ತಂಡದ ಆಟಗಾರರು ಪಂದ್ಯ ಮುಗಿದು ಫಲಿತಾಂಶ ಬರುತ್ತಿದ್ದಂತೆ ಅಲ್ಲಲ್ಲಿ ಚದುರಿದರು.ಪ್ರಥಮ ಬಹುಮಾನದ ಪ್ರಾಯೋಜಕತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸೇರಿದಂತೆ ಸಂಘಟಕರು,ಮುಖAಡರು ಬಹುಮಾನ ಸ್ವೀಕರಿಸಲು ಬರುವಂತೆ ಹತ್ತಾರು ಸಲ ಮೈಕ್‌ನಲ್ಲಿ ಕೂಗಿದರು ಬೇಗನೇ ಆಟಗಾರರು ಪ್ರಶಸ್ತಿ ಸ್ವೀಕರಿಸಲು ಬರಲಿಲ್ಲ.ಕಡೆಗೆ ಪ್ರಶಸ್ತಿ ಕೊಡುವ ಅತಿಥಿಗಳು ವೇದಿಕೆ ಬಿಟ್ಟು ಕೆಳಗಿಳಿದರೆ ಪ್ರಶಸ್ತಿ , ನಗದು ಹಣ ನಮ್ಮ ಜವಾಬ್ದಾರಿಯಲ್ಲ ಎಂದಾಗ ಆಟಗಾರರು ಪ್ರಶಸ್ತಿ ಸ್ವೀಕರಿಸಲು ಮುಂದೆ ಬಂದು ಬಹುಮಾನ ಪಡೆದುಕೊಂಡರು.

Latest News

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವೆಡೆ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳ ಕ್ರಾಸ್‌ದಿಂದ ಹುನಕುಂಟಿ ಗ್ರಾಮದ ಕ್ರಾಸವರೆಗೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಜು.3 ರಿಂದ ಮುದ್ದೇಬಿಹಾಳ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಆ ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಗೆ ಭದ್ರತೆ ಕೋರಿ ಮನವಿ ಕೊಟ್ಟಿರುವ ನೆರಬೆಂಚಿ, ಕೇಸಾಪೂರ, ಆಲೂರ,ಹುನಕುಂಟಿ ಗ್ರಾಮಗಳ ಗ್ರಾಮಸ್ಥರು, ಮುರಾಳ ಗ್ರಾಮದ ಕ್ರಾಸ್‌ದಿಂದ ನೆರಬೆಂಚಿ ಮೇಲೆ ಹುನಕುಂಟಿ ಕ್ರಾಸವರೆಗೂ ರಸ್ತೆ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ

ಮುದ್ದೇಬಿಹಾಳ : ರೆಗ್ಯೂಲೆಟರ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಅವಟಿ ಗಲ್ಲಿಯಲ್ಲಿ ನಡೆದಿದೆ. ಪಟ್ಟಣದ ಅವಟಿಗಲ್ಲಿ ನಿವಾಸಿ ಹುಸೇನಸಾಬ ನಾಗರಾಳ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.ಸಿಲಿಂಡರ್ ಸೋರಿಕೆಯಾಗುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಬೆAಕಿಗೆ ಮನೆಯಲ್ಲಿದ್ದ ಪ್ರಿಡ್ಜ್,ಕುಕ್ಕರ್,ಬಟ್ಟೆಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಝಳಕ್ಕೆ