ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು ಬಂಕ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಹಲವು ಪೆಟ್ರೋಲ್ ಬಂಕ್‌ಗಳ ಮುಂದೆ ಅಡ್ಡಲಾಗಿ ಹಗ್ಗ ಕಟ್ಟಿ ನೋ ಸ್ಟಾಕ್ ಬೋರ್ಡ್ ಹಾಕಿದ್ದರೆ ಡಿಸೇಲ್ ಲಭ್ಯವಿರುವ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಸವಾರರು,ಖಾಲಿ ಕ್ಯಾನ್‌ಗಳೊಂದಿಗೆ ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು.

ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ನಾಗಠಾಣ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ಬೆಳಗ್ಗೆ ಲೋಡ್ ಬಂದಿದ್ದರಿAದ ಹೆಚ್ಚಿನ ಜನಸಂದಣಿ ಕಂಡು ಬಂದಿತು.ವಿಜಯಪುರ ರಸ್ತೆಯಲ್ಲಿರುವ ಗುರಡ್ಡಿ ಪೆಟ್ರೋಲಿಯಂ ಬಂಕ್ ಮುಂದೆಯೂ ಸಾಕಷ್ಟು ಜನ ಜಮಾಯಿಸಿದ್ದರು.ಡಿಸೇಲ್ ಲಭ್ಯ ಇರುವವರೆಗೂ ಗ್ರಾಹಕರಿಗೆ ಮಾರಾಟ ಮಾಡಿದ ಬಂಕ್‌ನವರು ಮತ್ತಷ್ಟು ಡಿಸೇಲ್,ಪೆಟ್ರೋಲ್‌ಗಾಗಿ ಬೇಡಿಕೆ ಸಲ್ಲಿಸಿದ್ದಾರೆ.ಕೆಲವು ಬಂಕ್‌ಗಳಲ್ಲಿ ಸರದಿಯಲ್ಲಿ ನಿಲ್ಲದ ಯುವಕರು ಡಿಸೇಲ್ ಪಡೆದುಕೊಳ್ಳಲು ಮುಂದಾದಾಗ ಸರದಿಯಲ್ಲಿದ್ದವರು ತೀವ್ರ ವಾಗ್ವಾದ ನಡೆಸಿ ಹಿಂದಕ್ಕೆ ಕಳಿಸಿದ ಘಟನೆಗಳು ನಡೆದಿವೆ.

ಆಹಾರ,ನಾಗರಿಕರ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಸದ್ಯಕ್ಕೆ ಜಿಲ್ಲೆಯಲ್ಲಿ ಡಿಸೇಲ್,ಪೆಟ್ರೋಲ್‌ಗೆ ಕೊರತೆ ಇಲ್ಲವೆಂದು ಮಾರಾಟಾಧಿಕಾರಿಗಳು ಹೇಳುತ್ತಿದ್ದಾರೆ.ಆದರೆ ಬಂಕ್‌ನವರು ಬೇಡಿಕೆಯನ್ನು ಮುಂಗಡಪಾವತಿಯೊAದಿಗೆ ಬುಕ್ ಮಾಡಿದರೆ ಮಾತ್ರ ಇಂಧನ ಪೂರೈಕೆ ಮಾಡಲು ಕಂಪನಿಗಳು ಮುಂದಾಗುತ್ತಿವೆ.ಹೀಗಾಗಿ ಕೆಲವು ಬಂಕ್‌ನವರು ಖಾಲಿ ಆಗಿದೆ ಎಂಬ ನಾಮಫಲಕ ಹಾಕುತ್ತಿದ್ದಾರೆ.ಆದಾಗ್ಯೂ ಯಾವ ಬಂಕನವರು ಮುಂಗಡವಾಗಿ ಹಣ ಪಾವತಿಸಿ ಇಂಧನಕ್ಕಾಗಿ ಬೇಡಿಕೆ ಸಲ್ಲಿಸುತ್ತಾರೆಯೋ ಅವರಿಗೆ ಆದಷ್ಟು ತ್ವರಿತವಾಗಿ ಇಂಧನ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಕಂಪನಿಯ ಮಾರಾಟಾಧಿಕಾರಿಗಳಿಗೆ ತಿಳಿಸಿದ್ದೇವೆ.ಈ ಸಂಬAಧ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಆರಂಭಿಸಿದ್ದೇವೆ ಎಂದು ಹೇಳಿದರು.

ಗುರಡ್ಡಿ ಪೆಟ್ರೋಲಿಯಂ ಮಾಲೀಕ ಜಿ.ಜಿ.ಗುರಡ್ಡಿ ಮಾತನಾಡಿ, ಮುದ್ದೇಬಿಹಾಳ ಪಟ್ಟಣದ ವ್ಯಾಪ್ತಿಯಲ್ಲಿ 11 ಬಂಕ್‌ಗಳಿವೆ.ಅದರಲ್ಲಿ ನನಗೆ ತಿಳಿದ ಮಟ್ಟಿಗೆ ಮೂರು ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್ ಲಭ್ಯವಿತ್ತು.ನಮ್ಮಲ್ಲಿ ಇಂದು ಒಂದೆ ದಿನ 5200 ಲೀಟರ್ ಮಾರಾಟ ಮಾಡಿದ್ದೇವೆ.ನಮಗೆ ಬೇಕಾದಷ್ಟು ಇಂಧನ ಅಧಿಕಾರಿಗಳು ಪೂರೈಸುತ್ತಿದ್ದಾರೆ.ಯುದ್ಧದ ಸನ್ನಿವೇಶದ ಸಮಯದಲ್ಲಿ ಯಾರೂ ಈ ವಿಷಯದಲ್ಲಿ ಏನೂ ಮಾಡಲು ಅಸಾಧ್ಯ ಎನ್ನುವಂತಾಗಿದೆ.ಎಲ್ಲರಿಗೂ ಡಿಸೇಲ್ ದೊರೆಯಬೇಕು ಎಂಬ ಉದ್ದೇಶದಿಂದ ಒಬ್ಬರಿಗೆ 2000 ರೂ.ಗಳಷ್ಟು ಸಿಮೀತವಾಗಿ ಇಂಧನ ನೀಡುತ್ತಿದ್ದೇವೆ ಎಂದು ಹೇಳಿದರು.

ಐಒಸಿಎಲ್ ಮಾರಾಟಾಧಿಕಾರಿ ಶರಣಬಸವ ಕಳಸದ ಮಾತನಾಡಿ, ವಿಜಯಪುರ ಜಿಲ್ಲೆಯ ಐಓಸಿಎಲ್ ಪ್ಲಾಂಟ್‌ನಿAದ ನಿತ್ಯವೂ 150-160 ಟ್ಯಾಂಕ್ ಬೆಳಗಾವಿ,ವಿಜಯಪುರ,ಬಾಗಲಕೋಟ ಜಿಲ್ಲೆಯ ಬಂಕ್‌ಗಳಿಗೆ ಕಳಿಸುವ ಕೆಲಸ ಮಾಡುತ್ತಿದ್ದೇವೆ.ಯುದ್ಧದ ಸನ್ನಿವೇಶದ ಕಾರಣವೊಡ್ಡಿ ಕೆಲವು ಕಂಪನಿಯವರು ಇಂಧನ ಮಾರಾಟವನ್ನು ಕೈ ಬಿಟ್ಟಿದ್ದಾರೆ.ಇದರಿಂದ ನಮ್ಮ ಕಂಪನಿಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ.ಅಧಿಕಾರಿಗಳಿಗೆ ನಾವು ಮನವಿ ಮಾಡಿದ್ದು ಇನ್ನುಳಿದ ಬಂಕ್‌ನವರು ಡಿಸೇಲ್,ಪೆಟ್ರೋಲ್ ಮಾರಾಟಕ್ಕೆ ಮುಂದಾಗಬೇಕು.ಬAಕ್‌ಗಳನ್ನು ಬಂದ್ ಮಾಡಿಕೊಂಡು ಕೂಡದಂತೆ ಆಯಾ ಮಾಲೀಕರಿಗೆ ತಿಳಿಸಬೇಕು ಎಂದು ಕೋರಿದ್ದೇವೆ.ಎಲ್ಲರಿಗೂ ಸಮಾನವಾಗಿ ಡಿಸೇಲ್ ,ಪೆಟ್ರೋಲ್ ದೊರೆಯಬೇಕು ಎಂಬುದು ನಮ್ಮ ಉದ್ದೇಶ.ಒಬ್ಬರಿಗೆ ಒಂದೆ ತಾಲ್ಲೂಕಿಗೆ ಕೇಳಿದಷ್ಟು ಇಂಧನ ಈ ಸಮಯದಲ್ಲಿ ಪೂರೈಕೆ ಮಾಡುವುದು ಅಸಾಧ್ಯದ ಸಂಗತಿ ಎಂದು ಹೇಳಿದರು.

Latest News

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ:                                        ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ

ನಾಗರಬೆಟ್ಟ ಏತ ನೀರಾವರಿ ಯೋಜನೆ:                                ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ನಾಗರಬೆಟ್ಟ ಏತ ನೀರಾವರಿ ಯೋಜನೆ: ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು. ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ:                     ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ: ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ ಮಾಡಿಕೊಳ್ಳಬೇಕು ಎಂದು ಕೆಬಿಜೆಎನ್‌ಎಲ್ ಎಎಲ್‌ಬಿಸಿ ಉಪವಿಭಾಗ ನಂ.2ದ ಅಧಿಕಾರಿ ನಮ್ಮ ರೈತರಿಗೆ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ ಎಂದು ನಾಲತವಾಡದ ಯುವ ರೈತ ಮುಖಂಡ ಸಂಗಮೇಶ ಮೇಟಿ ಆರೋಪಿಸಿದರು. ತಾಲ್ಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಲ್ಯಾಟರಲ್ ನಂ.10ರ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ಹುಡ್ಕೋದಲ್ಲಿರುವ ಸಂಬAಧಿಸಿದ