ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳ ಕ್ರಾಸ್‌ದಿಂದ ಹುನಕುಂಟಿ ಗ್ರಾಮದ ಕ್ರಾಸವರೆಗೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಜು.3 ರಿಂದ ಮುದ್ದೇಬಿಹಾಳ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಆ ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ.

ಈ ಕುರಿತು ಪೊಲೀಸ್ ಇಲಾಖೆಗೆ ಭದ್ರತೆ ಕೋರಿ ಮನವಿ ಕೊಟ್ಟಿರುವ ನೆರಬೆಂಚಿ, ಕೇಸಾಪೂರ, ಆಲೂರ,ಹುನಕುಂಟಿ ಗ್ರಾಮಗಳ ಗ್ರಾಮಸ್ಥರು, ಮುರಾಳ ಗ್ರಾಮದ ಕ್ರಾಸ್‌ದಿಂದ ನೆರಬೆಂಚಿ ಮೇಲೆ ಹುನಕುಂಟಿ ಕ್ರಾಸವರೆಗೂ ರಸ್ತೆ ಭೂಮಿಪೂಜೆ ಮಾಡಿ ಕೆಲಸ 8 ತಿಂಗಳು ಕಳೆದರೂ ಆರಂಭವಾಗಿಲ್ಲ.ಪ್ರತಿ ದಿನ ಇದೇ ರಸ್ತೆಯಲ್ಲಿ ಮರ‍್ನಾಲ್ಕು ಊರುಗಳ ಜನ ಸಂಚರಿಸುತ್ತಾರೆ.ರಸ್ತೆ ಮೇಲೆ ದ್ವಿಚಕ್ರವಾಹನ ಚಲಿಸುವಾಗ ಬಿದ್ದು ಕೈಕಾಲು ಮುರಿದುಕೊಂಡು ದವಾಖಾನೆ ಸೇರಿದ್ದಾರೆ.ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಲಾಗಿದೆ.

ಪೊಲೀಸ್ ಇಲಾಖೆಗೆ ಕೊಟ್ಟಿರುವ ಪತ್ರಕ್ಕೆ ಗ್ರಾಮಸ್ಥರಾದ ಗುರುನಾಥ ದೇಶಮುಖ, ಅಶೋಕ ಹಗರಗುಂಡ,ಆನAದ ದೇವೂರ,ವೀರೇಶ ನೆರಬೆಂಚಿ,ಸAಗಮೇಶ ಢವಳಗಿ,ಇಂತಿಹಾಜ ಆಲೂರ,ಸಚಿನ ಕೇಸಾಪೂರ ಮೊದಲಾದವರು ಸಹಿ ಮಾಡಿದ್ದಾರೆ.

Latest News

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ,ನಾಲತವಾಡ ಸರಕಾರಿ ಆಸ್ಪತ್ರೆಗಳ ಆಡಳಿತ ವೈದ್ಯರ ವರ್ಗಾವಣೆ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡರ ಶಿಫಾರಸ್ಸಿನ ಮೇರೆಗೆ ಮುದ್ದೇಬಿಹಾಳ ಹಾಗೂ ನಾಲತವಾಡ ಸಾರ್ವಜನಿಕ ಆಸ್ಪತ್ರೆಗಳ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಕಂದಗನೂರಿನಲ್ಲಿ ರೈತನ ಮೇಲೆ ಹುಚ್ಚನಾಯಿ ದಾಳಿ

ಮುದ್ದೇಬಿಹಾಳ : ಹುಚ್ಚು ನಾಯಿಯೊಂದು ಮನೆಯ ಮುಂದೆ ಮಲಗಿದ್ದ ರೈತನ ಮೇಲೆ ಭೀಕರವಾಗಿ ದಾಳಿ

ಐದು ವರ್ಷದ ಮಗು ಸೇರಿ ಮೂವರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ..!

ಐದು ವರ್ಷದ ಮಗು ಸೇರಿ ಮೂವರು ಮಕ್ಕಳಿಗೆ ಕಚ್ಚಿದ ಬೀದಿ ನಾಯಿ..!

ಮುದ್ದೇಬಿಹಾಳ : ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮೀತಿ ಮೀರಿದ್ದು ಭಾನುವಾರ ಪಿಲೇಕೆಮ್ಮ ನಗರದ

ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್’ಗೆ  ಉತ್ತಮ ಪ್ರತಿಕ್ರಿಯೆ;                                                                                ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷತ್ಯಾಗ

ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ; ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷತ್ಯಾಗ

ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿರುವ ರಾಜ್ಯದ ಅತ್ಯಂತ ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿ,ಯಾವುದೇ

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಪಟ್ಟಣದಲ್ಲಿ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೃತಪ್ಪಟ ಕಟ್ಟಡ ಕಾರ್ಮಿಕರಾದ ಶಕೀಲಅಹ್ಮದ್ ಕುಂಬಾರವಾಡಿ ಹಾಗೂ ಬಷಿರಅಹ್ಮದ್ ಕಡದರಾಳ ಅವರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಆರ್ಥಿಕ ನೆರವು ನೀಡಿದರು. ಇಬ್ಬರು ಸಂತ್ರಸ್ಥರ ಕುಟುಂಬಕ್ಕೆ ಭೇಟಿ ಮಾಡಿದ ಅಧ್ಯಕ್ಷ ಅಸ್ಕಿ ಅವರು ಸಾಂತ್ವನ ಹೇಳಿ ಒಂದು ಲಕ್ಷ ರೂ. ಧನ ಸಹಾಯ ಮಾಡಿದರು. ಈ ಸಮಯದಲ್ಲಿ ತಾಳಿಕೋಟಿ ಧಾರ್ಮಿಕ ಮುಖಂಡ ಸೈಯದ ಶಕೀಲಅಹ್ಮದ್ ಖಾಜಿ, ಗ್ಯಾರಂಟಿ ಸಮಿತಿ

17.17 ಲಕ್ಷ ರೂ.ಅನುದಾನ ದುರುಪಯೋಗ;                   ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

17.17 ಲಕ್ಷ ರೂ.ಅನುದಾನ ದುರುಪಯೋಗ; ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

ಮುದ್ದೇಬಿಹಾಳ : ಪ್ರಸ್ತುತ ಬಾಗಲಕೋಟ ತಾಪಂ ಅಧೀಕ್ಷಕಿಯಾಗಿ ಸೇವೆಯಲ್ಲಿರುವ ಹಿಂದಿನ ಮುದ್ದೇಬಿಹಾಳ ತಾಲ್ಲೂಕು ಯರಝರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ವೇಳೆ ಅನುದಾನ ದುರುಪಯೋಗದ ಆರೋಪದ ಮೇಲೆ ಅಧಿಕಾರಿ ವಿಜಯಾ ಮುದಗಲ್ ಅವರನ್ನು ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ ಆದೇಶಿಸಿದ್ದಾರೆ. ಪ್ರಕರಣವೇನು : ಸನ್ 2019-20 ರಿಂದ 2021-22ನೇ ಅವಧಿಯ ಯರಝರಿ ಗ್ರಾಮ ಪಂಚಾಯಿತಿ ವಿಜಯಪುರ ಜಿಲ್ಲೆಯಲ್ಲಿ ಎಸ್.ಸಿ/ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿರಿಸಿದ