17.17 ಲಕ್ಷ ರೂ.ಅನುದಾನ ದುರುಪಯೋಗ; ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

17.17 ಲಕ್ಷ ರೂ.ಅನುದಾನ ದುರುಪಯೋಗ; ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

ಮುದ್ದೇಬಿಹಾಳ : ಪ್ರಸ್ತುತ ಬಾಗಲಕೋಟ ತಾಪಂ ಅಧೀಕ್ಷಕಿಯಾಗಿ ಸೇವೆಯಲ್ಲಿರುವ ಹಿಂದಿನ ಮುದ್ದೇಬಿಹಾಳ ತಾಲ್ಲೂಕು ಯರಝರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ವೇಳೆ ಅನುದಾನ ದುರುಪಯೋಗದ ಆರೋಪದ ಮೇಲೆ ಅಧಿಕಾರಿ ವಿಜಯಾ ಮುದಗಲ್ ಅವರನ್ನು ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ ಆದೇಶಿಸಿದ್ದಾರೆ.

ಪ್ರಕರಣವೇನು : ಸನ್ 2019-20 ರಿಂದ 2021-22ನೇ ಅವಧಿಯ ಯರಝರಿ ಗ್ರಾಮ ಪಂಚಾಯಿತಿ ವಿಜಯಪುರ ಜಿಲ್ಲೆಯಲ್ಲಿ ಎಸ್.ಸಿ/ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನ 7,77,769 ರೂ. ಹಾಗೂ ವಿಶೇಷ ಚೇತನರ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನ 4,86,747 ರೂ.ಬಳಕೆ ಮಾಡುವಲ್ಲಿ ವಿಫಲರಾಗಿದ್ದು ಇವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಒಟ್ಟು 16,84,184 ರೂ. ಮತ್ತು ವರ್ಗ-1 ರಲ್ಲಿ ಒಟ್ಟು 32,931 ರೂ.ಒಟ್ಟಾರೆಯಾಗಿ 17,17,115 ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಾಪಂ ಇಒ ಮುದ್ದೇಬಿಹಾಳ ಇವರು ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುದಗಲ್ ಅವರನ್ನು ಆರ್‌ಡಿಪಿಆರ್ ಇಲಾಖೆಯ ಆಯುಕ್ತೆ ಅರುಂಧತಿ ಅಮಾನತುಗೊಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ನ್ಯಾಯಕ್ಕೆ ಸಿಕ್ಕ ಜಯ : ಈ ಕುರಿತು ಪ್ರತಿಕ್ರಿಯಿಸಿರುವ ಕಂದಗನೂರ ಗ್ರಾಮದ ವಿಕಲಚೇತನ ಒಕ್ಕೂಟದ ಮುಖಂಡ ರಾಜಭಕ್ಷ ಮೊಕಾಶಿ, ಪಿಡಿಒ ಅವರು ಅನುದಾನ ದುರ್ಬಳಕೆ ಮಾಡಿಕೊಂಡಿರುವ ಕುರಿತು ಮೇಲಧಿಕಾರಿಗಳಿಗೆ ಸಾಕ್ಷಾö್ಯಧಾರಗಳ ಸಮೇತ ದೂರು ಸಲ್ಲಿಸಿದ್ದೇವು.ಅಧಿಕಾರಿ ವರ್ಗಾವಣೆ ಆಗಿದ್ದರೂ ಸರ್ಕಾರದಿಂದ ಅಮಾನತುಗೊಳಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.ಸರ್ಕಾರ ಅಮಾನತುಗೊಳಿಸಿದರೆ ಸಾಲದು ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರಲ್ಲದೇ ಇದು ನ್ಯಾಯಕ್ಕೆ ಸಿಕ್ಕ ಜಯ ಎಂದು ತಿಳಿಸಿದ್ದಾರೆ.

Latest News

ಕಾನ್ಪುರ ಐಐಟಿಗೆ ಆಯ್ಕೆಯಾದ ವಿದ್ಯಾರ್ಥಿನಿಗೆ ಬಂಪರ್ ಕೊಡುಗೆ

ಕಾನ್ಪುರ ಐಐಟಿಗೆ ಆಯ್ಕೆಯಾದ ವಿದ್ಯಾರ್ಥಿನಿಗೆ ಬಂಪರ್ ಕೊಡುಗೆ

ಮುದ್ದೇಬಿಹಾಳ(ಜಿಲ್ಲೆ : ವಿಜಯಪುರ) : ದೇಶದ ಪ್ರತಿಷ್ಠಿತ ಐಐಟಿ ಕಾಲೇಜುಗಳಲ್ಲಿ ಒಂದಾಗಿರುವ ಕಾನ್ಪುರದ ಐಐಟಿ

ಮುದ್ದೇಬಿಹಾಳ ಗ್ರಾಮೀಣ ಪೊಲೀಸ್ ಠಾಣೆ ಶೀಘ್ರ ಕಾರ್ಯಾರಂಭಗೊಳಿಸಿ

ಮುದ್ದೇಬಿಹಾಳ ಗ್ರಾಮೀಣ ಪೊಲೀಸ್ ಠಾಣೆ ಶೀಘ್ರ ಕಾರ್ಯಾರಂಭಗೊಳಿಸಿ

ಮುದ್ದೇಬಿಹಾಳ : ಸಿಎಂ ಸಿದ್ಧರಾಮಯ್ಯನವರ ಅವಧಿಯಲ್ಲಿ ಕಳೆದ ಬಜೆಟ್‌ನಲ್ಲಿ ಮುದ್ದೇಬಿಹಾಳ ಗ್ರಾಮಾಂತರ ಪೊಲೀಸ್ ಠಾಣೆ

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಕವಚ ಕಳ್ಳತನ ಪ್ರಕರಣಕ್ಕೆ

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ:                          ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಪುನೀತ ಹಿಪ್ಪರಗಿ ಅಧ್ಯಕ್ಷರಾಗಿ ಆಯ್ಕೆ: ಮುದ್ದೇಬಿಹಾಳ : ಕಾರ್ಗಿಲ್ ಸ್ಮಾರಕ ಸಮಿತಿಗೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಪುನೀತ ಹಿಪ್ಪರಗಿ, ಉಪಾಧ್ಯಕ್ಷರಾಗಿ ಸೋಮನಗೌಡ ಬಿರಾದಾರ ಹಾಗೂ ಕಾರ್ಯದರ್ಶಿಯಾಗಿ ಕಾಶಿನಾಥ ಹುಗ್ಗಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ನೂತನ ಪದಾಧಿಕಾರಿಗಳು ಕಾರ್ಗಿಲ್ ಸಮಿತಿಯ ಉದ್ದೇಶಗಳನ್ನು ಮತ್ತಷ್ಟು ಬಲಪಡಿಸಿ, ದೇಶಭಕ್ತಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೆಸರು ಹೇಳಿ ಬ್ಲಾಕ್‌ಮೇಲ್ ಆರೋಪ

ಮುದ್ದೇಬಿಹಾಳ : ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರ ಹೆಸರು ಹೇಳಿಕೊಂಡು ಸ್ಥಳೀಯ ಯುವಕನೋರ್ವ ಕರ್ತವ್ಯಕ್ಕೆ ಅಡ್ಡಿ ಪಡಿಸುವುದಲ್ಲದೆ, ಕಳೆದ ಒಂದು ವರ್ಷದಿಂದ ಉದ್ದೇಶಪೂರ್ವಕವಾಗಿ ತನ್ನ ವಿಡಿಯೋ,ಪೋಟೋ ಚಿತ್ರೀಕರಣ ಮಾಡಿ ಅಧಿಕಾರಿಗಳಿಗೆ ಹರಿ ಬಿಡುತ್ತಿದ್ದಾನೆ ಎಂದು ಆರೋಪಿಸಿದ ತಾಲ್ಲೂಕಿನ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಹೊರ ಗುತ್ತಿಗೆ ಮಹಿಳಾ ಸಿಬ್ಬಂದಿಯೋರ್ವರು ಮಂಗಳವಾರ ಆಸ್ಪತ್ರೆಯಲ್ಲೇ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.ಏತನ್ಮಧ್ಯೆ ಘಟನೆ ಖಂಡಿಸಿ ಆಸ್ಪತ್ರೆಯ ಹೊರಗೆ