ಗದಗ: ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ.
ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯೆ ಬೆಂಕಿ ಹಚ್ಚಿ, ಟೈರ್ ಸುಡಲು ಯತ್ನಿಸಿದರು.
ಪೊಲೀಸರು ಟೈರ್ ಅನ್ನು ಕುಸಿದುಕೊಂಡಾಗ ನೂಕಾಟ ಉಂಟಾಯಿತು. ಕಾರ್ಯಕರ್ತರು ಒಮ್ಮೆಲೆ ನುಗ್ಗಿದ್ದರಿಂದ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಅಲ್ಪ ಪ್ರಮಾಣದಲ್ಲಿ ಬೆಂಕಿ ತಾಗಿದ್ದರಿಂದ ಯಾವುದೇ ಆಪಾಯ ಸಂಭವಿಸಲಿಲ್ಲ.







