ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಮುದ್ದೇಬಿಹಾಳ : ಪಕ್ಕದ ಲಿಂಗಸ್ಗೂರು ತಾಲ್ಲೂಕಿನ ಸುಣಕಲ್‌ನಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿರುವ ಆರ್.ಬಿ.ಶುಗರ‍್ಸಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಗೊoಡಿಲ್ಲ ಎಂದು ನಾಲತವಾಡ ಭಾಗದ ರೈತರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ತಮ್ಮ ಅನುಭವ ಹಂಚಿಕೊoಡಿರುವ ಕಬ್ಬು ಬೆಳಗಾರರಾದ ಮಲ್ಲಪ್ಪ ತಾತರೆಡ್ಡಿ,ಶರಣು ಕಾನಿಕೇರಿ,ಬಾಬು ಕ್ಷತ್ರಿ,ಅಮರೇಶ ಮುದಗಲ್,ಪವಾಡೆಪ್ಪ ಬಂಡಿವಡ್ಡರ,ದ್ಯಾಮಣ್ಣ ಕೋಳಿ,ಶಾಂತಗೌಡ ಪಾಟೀಲ,ಅಮರೇಶ ಪಾಟೀಲ ಮೊದಲಾದವರ ತಂಡ ಸುಣಕಲ್‌ದ ಆರ್.ಬಿ.ಶುಗರ‍್ಸಗೆ ಭೇಟಿ ನೀಡಿದ ಸಮಯದಲ್ಲಿ ಕಂಡು ಬಂದಿರುವ ವಾಸ್ತವ ಸ್ಥಿತಿಯ ಕುರಿತು ಮಾಹಿತಿ ಹಂಚಿಕೊoಡರು.

ಆರ್.ಬಿ.ಶುರ‍್ಸ್ನಲ್ಲಿ ಇನ್ನೂ ಕಾರ್ಖಾನೆಗೆ ನೀರಿನ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದ್ದು ಹಲವು ತಾಂತ್ರಿಕ ಕೆಲಸಗಳು ಬಾಕಿ ಇವೆ.ಈ ಹಿನ್ನೆಲೆಯಲ್ಲಿ ನ.20ರಂದು ಕೇನ್ ಕ್ಯಾರಿಯರ್ ಪೂಜೆ ಮಾತ್ರ ನೆರವೇರಿಸಿದ್ದು ಕಬ್ಬು ನುರಿಸುವ ಕಾರ್ಯ ಇನ್ನೂ ಆರಂಭವಾಗಿಲ್ಲ ಎಂಬುದನ್ನು ಕಾರ್ಖಾನೆಯವರು ನಮಗೆ ತಿಳಿಸಿದರು ಎಂದು ರೈತ ಮಲ್ಲಪ್ಪ ತಾತರೆಡ್ಡಿ ಮಾಹಿತಿ ನೀಡಿದರು.

ಈಗಾಗಲೇ ಬೆಳೆದಿರುವ ಕಬ್ಬು ಹೊಲದಲ್ಲಿ ಒಣಗಲು ಶುರು ಮಾಡಿದ್ದು ಆದಷ್ಟು ಬೇಗನೇ ಕಬ್ಬು ನುರಿಸುವ ಕಾರ್ಯ ಆರಂಭವಾಗಬೇಕಿದೆ.ನಮ್ಮ ತಾಲ್ಲೂಕಿನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಗ್ಯಾಂಗ್‌ಗಳನ್ನು ಮೊದಲು ದೂರದಲ್ಲಿರುವ ಊರಿನ ಕಬ್ಬು ಕಟಾವು ಮಾಡಿಸಲು ಕಳಿಸಿರುತ್ತಾರೆ.ಹತ್ತಿರದಲ್ಲಿರುವ ಊರಿನವರ ಕಬ್ಬು ಕಟಾವು ಮಾಡಲು ವಿಳಂಬವಾಗುತ್ತದೆ.ಆದರೆ ಗ್ಯಾಂಗ್‌ನವರ ಅಲಭ್ಯತೆಯಿಂದ ತ್ವರಿತವಾಗಿ ಕಬ್ಬು ಸಾಗಾಣಿಕೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಆರoಭವಾಗದ ಕಾರ್ಖಾನೆಯಿಂದ ದರ ಘೋಷಣೆ ಅಸಾಧ್ಯ : ಆರ್.ಬಿ.ಶುಗರ‍್ಸ ಇನ್ನೂ ಕಬ್ಬು ನುರಿಸುವ ಕಾರ್ಯವೇ ಆರಂಭವಾಗಿಲ್ಲ.ದರ ಘೋಷಣೆ ಮಾಡಲು ಹೇಗೆ ಸಾಧ್ಯವಿದೆ ಎಂಬ ಮಾತುಗಳು ರೈತರಿಂದ ಕೇಳಿ ಬಂದಿವೆ.ರೈತರು ಪರ್ಯಾಯ ಕಾರ್ಖಾನೆಗಳನ್ನು ತಮ್ಮ ಹೊಲದಲ್ಲಿ ಬೆಳೆದಿರುವ ಕಬ್ಬನ್ನು ಸಾಗಿಸಲು ಹುಡುಕಾಟ ನಡೆಸುತ್ತಿದ್ದಾರೆ.ಆದಷ್ಟು ಬೇಗನೇ ಕೊಟ್ಟ ಮಾತಿನಂತೆ ಕಾರ್ಖಾನೆ ಆರಂಭವಾಗಲಿ ಎಂಬ ಆಶಯವನ್ನು ಕಬ್ಬು ಬೆಳೆಗಾರರು ಇಟ್ಟುಕೊಂಡಿದ್ದಾರೆ.

10 ದಿನ ವಿಳಂಬ : ಆರ್.ಬಿ.ಶುಗರ‍್ಸ ಪಿಆರ್‌ಓ ಅಮೀತ ನಲವಡೆ ಮಾತನಾಡಿ, ಚಾಲ್ತಿಯಲ್ಲಿರುವ ಕಾರ್ಖಾನೆಯಾಗಿದ್ದರೆ ಕಬ್ಬು ನುರಿಸುವ ಕಾರ್ಯ ಯಾವುದೇ ಆತಂಕವಿಲ್ಲದೇ ನಡೆಯುತ್ತಿತ್ತು.ಆದರೆ ನಮ್ಮ ಕಾರ್ಖಾನೆ ಹೊಸದು.ಎಲ್ಲವೂ ಆರಂಭಿಸುವ ವೇಳೆ ಒಂದಿಲ್ಲೊoದು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಆದ್ದರಿಂದ ಸುಮಾರು 10 ದಿನಗಳ ಕಾಲ ಬಾಕಿ ಕೆಲಸಗಳಿದ್ದು ಅವುಗಳನ್ನು ಪೂರ್ಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ.ನೀರಿನ ವ್ಯವಸ್ಥೆಗಾಗಿ ಬೋರವೆಲ್‌ಗಳನ್ನು ಕೊರೆಯಿಸಲಾಗಿದೆ.ಆದಷ್ಟು ಬೇಗನೇ ಕಾರ್ಖಾನೆ ಆರಂಭಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರಲ್ಲದೇ ಕಬ್ಬು ಕಡಿಯುವ ಗ್ಯಾಂಗ್‌ಗಳನ್ನು ಇನ್ನೂ ನಾವು ಯಾವುದೇ ಕಬ್ಬು ಬೆಳೆಗಾರರ ಹೊಲಕ್ಕೆ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Latest News

ಆರೋಗ್ಯ ಇಲಾಖೆ ತಂಡದಿoದ ಸಾಧನೆ :                  ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಆರೋಗ್ಯ ಇಲಾಖೆ ತಂಡದಿoದ ಸಾಧನೆ : ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಮುದ್ದೇಬಿಹಾಳ : ಪಟ್ಟಣದ ಎಂಜಿವಿಸಿ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಸ್ವಯಂಪ್ರೇರಿತ ರಕ್ತದಾನ

ಬಸರಕೋಡದಲ್ಲಿ ಹಬ್ಬದ ಸಂಭ್ರಮ:                                         ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಬಸರಕೋಡದಲ್ಲಿ ಹಬ್ಬದ ಸಂಭ್ರಮ: ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಬಸರಕೋಡ ಗ್ರಾಮದಲ್ಲಿ ಮಂಗಳವಾರ ಗೌರಿ ಹುಣ್ಣಿಮೆಯ ದಿನದಂದು

ರವಿ ಹಂಜ್ ಚಿತ್ರಕ್ಕೆ ಬೆಂಕಿ:                                                                ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ರವಿ ಹಂಜ್ ಚಿತ್ರಕ್ಕೆ ಬೆಂಕಿ: ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ಮುದ್ದೇಬಿಹಾಳ : ವೀರಶೈವ ಲಿಂಗಾಯತರ ಹೆಗಲ ಮೇಲೆ ಬಂದೂಕು ಇಟ್ಟು ಬಸವ ಪರಂಪರೆಯನ್ನು ಹಾಳು

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ:                       ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ತನಿಖೆಗೆ ಶಾಸಕ ಸಿ.ಎಸ್.ನಾಡಗೌಡರ ಸೂಚನೆ: ನಾಗರಬೆಟ್ಟ ಏತ ನೀರಾವರಿ ಯೋಜನೆ ಪೈಪಲೈನ್ ಕಾಮಗಾರಿ ಕಳಪೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯಡಿ ಅಳಡಿಸಿರುವ ಪೈಪಲೈನ್ ಕಳಪೆ ಗುಣಮಟ್ಟದ್ದಾಗಿದೆ ಎಂಬ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ ಪತ್ತೆಗೊಂಡು ನಾಲ್ಕು ತಿಂಗಳ ಬಳಿಕ ಮರಳಿ ತಮ್ಮೂರಿಗೆ ಆಗಮಿಸಿದ ಪವಾಡ ಬಸವೇಶ್ವರ ದೇವರ ನೂತನ ಮೂರ್ತಿಯನ್ನು ಕಂಡ ಗ್ರಾಮಸ್ಥರು,ಭಕ್ತರು ಆನಂದಪರವಶರಾಗಿ ಜೈಕಾರ ಹಾಕಿದರು. ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿಯನ್ನು ಶನಿವಾರ ವಿಜಯಪುರದಿಂದ ನಿಡಗುಂದಿ-ಮುದ್ದೇಬಿಹಾಳ ಮಾರ್ಗವಾಗಿ ಬಸರಕೋಡದ ಸರಕಾರಿ ಪಿಯು ಕಾಲೇಜಿಗೆ ಪೊಲೀಸರ ಭದ್ರತೆಯಲ್ಲಿ ಕರೆತಂದಾಗ ಭಕ್ತಾದಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಊರಿನ

ಸಹಕಾರ ಸಪ್ತಾಹ ಸಮಾರೋಪ:                                                   ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಸಹಕಾರ ಸಪ್ತಾಹ ಸಮಾರೋಪ: ಸಹಕಾರ ತತ್ವದಿಂದ ಗ್ರಾಮೀಣರ ಆರ್ಥಿಕಾಭಿವೃದ್ಧಿ-ಬಿರಾದಾರ

ಮುದ್ದೇಬಿಹಾಳ : ಸಹಕಾರ ಚಳುವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು,ದುರ್ಬಲ ವರ್ಗದವರ ಏಳ್ಗೆಗೆ ಆಸರೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮನಗೌಡ ಬಿರಾದಾರ ಹೇಳಿದರು. ತಾಲ್ಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ನಿಯಮಿತ,ಜಿಲ್ಲಾ ಸಹಕಾರಿ ಯೂನಿಯನ್ ವಿಜಯಪುರ,ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಡಲಗೇರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಹಕಾರ ಚಳವಳಿಯನ್ನು ಮುಂಚೂಣಿಗೆ