ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಮುದ್ದೇಬಿಹಾಳ : ಮತಕ್ಷೇತ್ರದ ರೈತರಿಂದ ಆಯ್ಕೆಯಾಗಿರುವ ನೀವು ಅವರ ಬದುಕಿಗೆ ಸಂಕಷ್ಟ ಎದುರಾದಾಗ ಸ್ಪಂದಿಸುವ ಕೆಲಸ ಮಾಡಬೇಕು.ಅದು ಬಿಟ್ಟು ಮೂವ್ವತ್ತು ವರ್ಷಗಳಿಂದ ಹಸಿ ಸುಳ್ಳುಗಳನ್ನೇ ಹೇಳುತ್ತಾ ರಾಜಕಾರಣ ಮಾಡಿಕೊಂಡು ಬಂದಿದ್ದೀರಿ.ಜನ ಇನ್ನು ಮುಂದೆ ನಿಮ್ಮನ್ನು ನಂಬುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಬರ ಘೋಷಣೆಗೆ ಆಗ್ರಹಿಸಿ ನಡೆದಿರುವ ಬಿಜೆಪಿಯ ಎರಡನೇ ದಿನದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಹೋರಾಟ ಎ.ಎಸ್.ಪಾಟೀಲ ನಡಹಳ್ಳಿಯ ಹೋರಾಟವಲ್ಲ.ಇದು ತಾಲ್ಲೂಕಿನ ರೈತರ ಬದುಕಿನ ಹೋರಾಟ.ತಾಲ್ಲೂಕಿನ ರೈತರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.ಸರ್ಕಾರದ ಕೊರಳುಪಟ್ಟಿ ಹಿಡಿದು ಕೇಳೋಣ.ಯಾಕೆ ಬರಗಾಲ ಎಂದು ತಾಲ್ಲೂಕನ್ನು ಘೋಷಣೆ ಮಾಡುತ್ತಿಲ್ಲ.ನಿಯಮಾವಳಿ ಪ್ರಕಾರ ಎಲ್ಲ ಅಂಶಗಳು ಬರಗಾಲಕ್ಕೆ ಅರ್ಹ ತಾಲ್ಲೂಕು ಎಂದು ಹೇಳುತ್ತಿದ್ದರೂ ರೈತರ ಬದುಕಿನೊಂದಿಗೆ ನಾಡಗೌಡರು ಯಾಕೆ ಚೆಲ್ಲಾಟ ಆಡುತ್ತಿದ್ದೀರಿ ? ಎಂದು ಪ್ರಶ್ನಿಸಿದರು.

ಉಸ್ತುವಾರಿ ಸಚಿವರು-ಕ್ಷೇತ್ರದ ಶಾಸಕರು ನಿಮ್ಮ ರಾಜಕೀಯ ಜಗಳವನ್ನು ರಾಹುಲ್ ಗಾಂಧಿ ,ಮುಖ್ಯಮಂತ್ರಿಗಳ ಮುಂದೆ ಮಾಡಿ.ರೈತರಿಗೆ ಪರಿಹಾರವನ್ನು ಕೊಡಿಸುವ ಕೆಲಸ ಮಾಡಬೇಕು.ಅದು ಉಸ್ತುವಾರಿ ಮಂತ್ರಿಗಳು,ಶಾಸಕರ ಜವಾಬ್ದಾರಿ ಆಗಿದೆ.ರೈತರ ಹೋರಾಟ ಆರಂಭವಾಗಿದೆಯೋ ಆಗ ಅಪ್ಪಾಜಿ ನಾಡಗೌಡರು ಹಸಿ ಸುಳ್ಳು ಹೇಳುತ್ತಾರೆ.ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ.ಆದಷ್ಟು ಶೀಘ್ರ ಬರಗಾಲ ಘೊಷಣೆ ಆಗುತ್ತದೆ ಎಂದು ಹೇಳಿಕೆ ಕೊಡುತ್ತಾರೆ.ಹಾಗಿದ್ದರೆ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದೇಕೆ ಎಂದು ಮಾಜಿ ಶಾಸಕ ನಡಹಳ್ಳಿ ಪ್ರಶ್ನಿಸಿದರು.

ರೈತರ ಹೋರಾಟ ಕಂಡು ನಾಡಗೌಡರಿಗೆ ನಡುಕ ಶುರುವಾಗಿದೆ.ರೈತರು ಸಾಲ ಕಟ್ಟಲು ಹೋಗಬೇಡಿ.ಬೆಳೆ ಬೆಳೆಯುವುದಕ್ಕೆ ನಮ್ಮ ರೈತ ಸಾಲ ಮಾಡಿದ್ದಾನೆ.ಅದನ್ನು ಕಟ್ಟುವ ಅವಶ್ಯಕತೆ ಇಲ್ಲ.ಸರಕಾರ ಐದು ಲಕ್ಷದವರೆಗೆ ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.ರೈತರಿಗೆ ಐವತ್ತು ಸಾವಿರಗಳಂತೆ ಹೆಕ್ಟೇರ್‌ಗೆ ಪರಿಹಾರ ನೀಡಬೇಕು ಎಂದು ನಡಹಳ್ಳಿ ಹೇಳಿದರು.

ತಾಲ್ಲೂಕಿನ ದುರದೃಷ್ಟ ನಾನಿಗ ವಿಧಾನಸಭೆಯ ಒಳಗಿಲ್ಲ.ನಾನು ಶಾಸಕನಿದ್ದ ಸಮಯದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇನೆ.ಅಭಿವೃದ್ಧಿ ಕೆಲಸ ಮಾಡಿಸಿದ್ದೇವೆ.ಈ ಕಷ್ಟದ ಸಮಯದಲ್ಲಿ ನನಗೆ ಆಶೀರ್ವಾದ ಮಾಡಬೇಕಿತ್ತು.ಕೊರೊನಾ,ಅತಿವೃಷ್ಟಿ ಸಮಯದಲ್ಲಿ ನಮ್ಮ ಕುಟುಂಬದಿoದ ಹಗಲಿರುಳು ನೊಂದವರ,ಸAಕಷ್ಟಕ್ಕೀಡಾದವರಿಗೆ ನೆರವಿನ ಸಹಾಯಹಸ್ತ ಚಾಚಿದ್ದೇವೆ ಎಂದು ನಡಹಳ್ಳಿ ಹೇಳಿದರು. ಮುಖಂಡರಾದ ಮಲಕೇಂದ್ರಗೌಡ ಪಾಟೀಲ,ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ,ಪ್ರೇಮಸಿoಗ ಚವ್ಹಾಣ,ಸೋಮನಗೌಡ ಬಿರಾದಾರ ಕವಡಿಮಟ್ಟಿ,ಅಕ್ಷಯ ನಾಡಗೌಡ,ನಿಖಿಲ್‌ಗೌಡ ಪಾಟೀಲ, ಗಿರೀಶಗೌಡ ಪಾಟೀಲ,ಮದನ್‌ಸ್ವಾಮಿ ಹಿರೇಮಠ,ಸಂಗನಗೌಡ ಪಾಟೀಲ,ಬಸವರಾಜ ನಂದಿಕೇಶ್ವರಮಠ,ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ,ಗೌರಮ್ಮ ಹುನಗುಂದ,ಸುಭಾಷ ಕಟ್ಟಿಮನಿ,ಸಂಗು ಹತ್ತಿ,ಗುರುನಾಥ ದೇಶಮುಖ ಮತ್ತಿತರರು ಪಾಲ್ಗೊಂಡಿದ್ದರು.

ಹೋರಾಟದಲ್ಲಿ ಯುವಕರು ಭಾಗಿಯಾಗಲು ಭರತಗೌಡ ಕರೆ:
ಬೆಂಗಳೂರಿನಿoದ ಆಗಮಿಸಿದ್ದ ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ದೇಶದ ಬೆನ್ನೆಲುಬು ರೈತ.ಅವರಿಗೆ ಸಂಕಷ್ಟ ಎದುರಾದಾಗ ನಾವೆಲ್ಲ ಅವರ ಬೆನ್ನಿಗೆ ನಿಲ್ಲುವ ಕಾರ್ಯ ನಾವೆಲ್ಲ ಯುವ ಸಮೂಹ ಮಾಡಬೇಕು.ಕ್ಷೇತ್ರದ ಶಾಸಕರು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.ಸರ್ಕಾರವನ್ನು ಎಚ್ಚರಿಸಲು ಯುವ ಸಮೂಹ ರೈತರ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಯುವ ಉದ್ಯಮಿ ಭರತಗೌಡ ಕರೆ ನೀಡಿದರು. ಹೋರಾಟದಲ್ಲಿ ಭಾಗಿಯಾದ ರೈತರಿಗೆಲ್ಲ ಪಲಾವ್ ವ್ಯವಸ್ಥೆಯನ್ನು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಭಿಮಾನಿ ಬಳಗದಿಂದ ಕೈಗೊಳ್ಳಲಾಗಿತ್ತು.ಅಲ್ಲದೇ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೆಂಟ್ ಹಾಗೂ ಕುಡಿವ ನೀರಿನ ವ್ಯವಸ್ಥೆಯನ್ನು ಹೋರಾಟದ ಸ್ಥಳದಲ್ಲಿ ಕೈಗೊಳ್ಳಲಾಗಿದೆ.ಇಂದಿನ ರಕ್ಕಸಗಿ ಜಿಪಂ ವ್ಯಾಪ್ತಿಯ ರೈತರು,ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

Latest News

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ

ಪಾಲಕರು,ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಅನ್ನದಾತರು-ಅಮೀತಗೌಡ ಪಾಟೀಲ್

ಪಾಲಕರು,ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ಅನ್ನದಾತರು-ಅಮೀತಗೌಡ ಪಾಟೀಲ್

ಮುದ್ದೇಬಿಹಾಳ : ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಮೇಲಿನ ಪೈಪೋಟಿ ಹೆಚ್ಚಾಗಿದ್ದು, ಆಕ್ಸ್ಫರ್ಡ್ ಸಂಸ್ಥೆಯಲ್ಲಿ ವ್ಯಾಸಂಗ

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ

ಎರಡು ಅಂಬ್ಯುಲೆನ್ಸ್ ಜನಸೇವೆಗೆ ಲೋಕಾರ್ಪಣೆ:                     70 ಸಾವಿರ ಹುದ್ದೆಗಳ ಭರ್ತಿಗೆ ಕಾನೂನು ತೊಡಕು-ಶಾಸಕ ನಾಡಗೌಡ

ಎರಡು ಅಂಬ್ಯುಲೆನ್ಸ್ ಜನಸೇವೆಗೆ ಲೋಕಾರ್ಪಣೆ: 70 ಸಾವಿರ ಹುದ್ದೆಗಳ ಭರ್ತಿಗೆ ಕಾನೂನು ತೊಡಕು-ಶಾಸಕ ನಾಡಗೌಡ

ಮುದ್ದೇಬಿಹಾಳ : ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಸಿಎಸ್‌ಆರ್ ಅನುದಾನದಲ್ಲಿ ಮುದ್ದೇಬಿಹಾಳ ಹಾಗೂ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ ಸಂಸ್ಥೆಯಾಗಿದೆ.ಆಯ್ಕೆಯಾಗಿರುವ ಎಲ್ಲ ಸದಸ್ಯರು ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಉದ್ಯಮಿ ಅಯೂಬ್ ಮನಿಯಾರ್ ಹೇಳಿದರು. ಪಟ್ಟಣದ ಬೆಂಗಳೂರು ಬೇಕರಿ ಹಾಲ್‌ನಲ್ಲಿ ಮಂಗಳವಾರ ಅಂಜುಮನ್ ಹಿತರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಂಜುಮನ್ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಗೆ ಯುವ ಉತ್ಸಾಹಿ ಸದಸ್ಯರು ಆಯ್ಕೆಯಾಗಿದ್ದೀರಿ.ಅಂಜುಮನ್ ಸಂಸ್ಥೆಗೆ ಇದ್ದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಗಿದೆ.ಅಧ್ಯಕ್ಷ,ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ಅಲ್ಲಾಭಕ್ಷö್ಯ ದೇಸಾಯಿ, ಕಾರ್ಯದರ್ಶಿಯಾಗಿ ನೂರೇಹುಸೇನ್ ನದಾಫ,ಖಜಾಂಚಿಯಾಗಿ ಲಾಲಸಾಬ ಮೋಮಿನ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಸುಲೇಮಾನ ಮಮದಾಪೂರ ಹಾಗೂ ಇರ್ಫಾನ್ ಕೂಡಗಿ ಮಧ್ಯೆ ಪೈಪೋಟಿ ನಡೆಯಿತು.ಇದರಲ್ಲಿ ಕೈ ಎತ್ತುವ ಮೂಲಕ ಮತದಾನ ಮಾಡಲಾಯಿತು.16 ಮತಗಳ