ಮುದ್ದೇಬಿಹಾಳ : ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಮೇಲಿನ ಪೈಪೋಟಿ ಹೆಚ್ಚಾಗಿದ್ದು, ಆಕ್ಸ್ಫರ್ಡ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೆಡಿಕಲ್ ಕನಸು ನನಸಾಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ್ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸನ್ 2025-26ನೇ ಸಾಲಿನಲ್ಲಿ ಮೊದಲ ಸುತ್ತಿನಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಂಡ 170ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ವರ್ಷದಿಂದ ಆರಂಭಗೊAಡಿರುವ ಬಾಗಲಕೋಟದ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ನಿಯಮಿತವಾಗಿ ವ್ಯಾಸಂಗ ಮಾಡುತ್ತಿದ್ದಾರೆ.ಮೊದಲ ಸುತ್ತಿನಲ್ಲೇ 170–180 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. ಅಡ್ಮಿಷನ್ ಸಂದರ್ಭದಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳು ಸಂಸ್ಥೆಯ ಮೇಲೆ ಇಡುವ ವಿಶ್ವಾಸವೇ ನಮ್ಮ ಶಕ್ತಿಯಾಗಿದೆ. ಆ ವಿಶ್ವಾಸಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶ ನೀಡುವುದು ಸಂಸ್ಥೆಯ ಬದ್ಧತೆಯಾಗಿದೆ.ಹೊರಗೆ ನೀವು ಯಾವುದೇ ಕ್ಷೇತ್ರದವರಿದ್ದರೂ ಆಕ್ಸಫರ್ಡ್ ಸಂಸ್ಥೆಯೊಳಗಡೆ ಬಂದಾಗ ನಮ್ಮ ಪ್ರೀತಿಯ ಪಾಲಕರು, ವಿದ್ಯಾರ್ಥಿಗಳು ಎಂದು ಪಾಟೀಲರು ಹೇಳಿದರು.
ಪ್ರತಿವರ್ಷವೂ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಸುಮಾರು ರೂ.4 ಲಕ್ಷದವರೆಗೆ ಶುಲ್ಕವನ್ನು ಸಂಸ್ಥೆಯೇ ಭರಿಸಿ, ಅವರ ಶಿಕ್ಷಣಕ್ಕೆ ನೆರವು ನೀಡುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಂಡಿರುವ ಕನಸನ್ನು ನನಸಾಗಿಸುವುದು ಹಾಗೂ ಅವರ ಸಾಧನೆಯನ್ನು ಗೌರವಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕೆಲವೊಮ್ಮೆ ಭಾವೋದ್ವೇಗದಲ್ಲಿ ಮಾತನಾಡಿದರೂ ಅದನ್ನು ಅನ್ಯಥಾ ಭಾವಿಸಬಾರದು. ಪಾಲಕರು ನಮ್ಮ ಸಂಸ್ಥೆಯ ಅನ್ನದಾತರು ಹಾಗೂ ಆಸ್ತಿಯಾಗಿದ್ದಾರೆ. ಅವರು ನೀಡುವ ಪ್ರತಿಯೊಂದು ರೂಪಾಯಿಗೂ ಮೌಲ್ಯ ನೀಡುವ ಮೂಲಕ ಉತ್ತಮ ಫಲಿತಾಂಶ ನೀಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕರ್ನಾಟಕದಲ್ಲಿರುವ ಹಲವು ನೀಟ್ ಅಕಾಡೆಮಿಗಳ ಪೈಕಿ ಆಕ್ಸ್ಫರ್ಡ್ ಸಂಸ್ಥೆ ಉತ್ತಮ ಫಲಿತಾಂಶ ನೀಡುವ ಮೂಲಕ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಓದುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರ ಜೊತೆಗೆ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ನೀಡುವ ಮಾರ್ಗದರ್ಶನವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಮಾರ್ಗದರ್ಶಕರಾದ ಪ್ರೊ.ಎನ್.ಎ.ಬಿರಾಜದಾರ ಮಾತನಾಡಿ, ಆಕ್ಸಫರ್ಡ್ ಸಂಸ್ಥೆಯ ಬೆಳವಣಿಗೆಯಲ್ಲಿ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲರ ಪಾತ್ರ ಅಗಾಧವಾಗಿದೆ.ಪ್ರತಿ ವಿದ್ಯಾರ್ಥಿಯ ಕಾಳಜಿಯನ್ನು ಅವರು ಮಾಡುತ್ತಾರೆ.ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಅವರ ದೂರದೃಷ್ಟಿ ಆಲೋಚನೆಗಳು ಕಾರಣವಾಗಿದೆ.ವಿದ್ಯಾರ್ಥಿಗಳು ನಿಶ್ಚಿತ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರೇವಣಸಿದ್ದ ಮುರಾಳ(ಚಲವಾದಿ),ಇಸ್ಮಾಯಿಲ್ ಮನಿಯಾರ್,ಶಿಕ್ಷಕ ಸಂಗಮೇಶ ಹೂಗಾರ ಮಾತನಾಡಿದರು.ಪ್ರೊ.ಪ್ರಕಾಶ,ಪ್ರೊ.ಪ್ರಭಾಕರ,ಪ್ರಸಾದ,ಪ್ರೊ.ಹಣಮಂತರಾವ,ಪ್ರೊ.ನರೇಶ,ಪ್ರೊ.ಕ್ರಾoತಿ ಸೇರಿದಂತೆ ಹಲವರು ಇದ್ದರು.ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಎಂಬಿಬಿಎಸ್ ಸೀಟು ಸಿಕ್ಕಿದೆ ಎಂದು ಹಗುರವಾಗಿ ಪರಿಗಣಿಸಬೇಡಿ:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ದೂರದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಬಾಗಲಕೋಟ ನಗರದಲ್ಲಿ ಸುಮಾರು 450 ಆಸ್ಪತ್ರೆಗಳಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದಂತೆ ಪೈಪೋಟಿಯು ಹೆಚ್ಚಿದೆ. ಆದ್ದರಿಂದ ಎಂಬಿಬಿಎಸ್ ಸೀಟು ದೊರೆತಿದೆ ಎಂದು ಹಗುರವಾಗಿ ಪರಿಗಣಿಸಬಾರದು. ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆತಿದ್ದರೂ ಕೆಲ ವಿದ್ಯಾರ್ಥಿಗಳು ತಮ್ಮ ಆಸಕ್ತಿಯಂತೆ ಎಂಜಿನಿಯರಿAಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಉದಾಹರಣೆಗಳಿವೆ ಎಂದು ಅವರು ಹೇಳಿದರು.







