ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಬರಪೀಡಿತ ಪಟ್ಟಿಯಿಂದ ಮುದ್ದೇಬಿಹಾಳ ಮತಕ್ಷೇತ್ರ ಔಟ್: ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ಶಾಸಕ ನಾಡಗೌಡರ ತೀವ್ರ ವಾಗ್ದಾಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಬರ ಘೋಷಣೆಗೆ ತಾಲೂಕನ್ನು ಕೈಬಿಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರೇ ನೇರ ಕಾರಣ ಎಂದು ಶಾಸಕ ಸಿ.ಎಸ್.ನಾಡಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ತಾಲೂಕಿಗೆ ಬರ ಘೋಷಣೆಗೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಪ್ರಥಮ ಆದ್ಯತೆಯಲ್ಲಿ ಸೇರ್ಪಡೆಯಾಗಬೇಕಿತ್ತು. ಈ ಕುರಿತು ಕಂದಾಯ ಮಂತ್ರಿ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಆದರೆ ಈಗ ಎರಡನೇ ಪಟ್ಟಿಯಲ್ಲೂ ಕ್ಷೇತ್ರವನ್ನು ಕಡೆಗಣಿಸುವ ಮೂಲಕ ತೀವ್ರ ನಿರಾಶೆಗೊಳಿಸಿದ್ದು ನೋವುಂಟು ಮಾಡಿದೆ ಎಂದು ಹೇಳಿದರು.

ಮುದ್ದೇಬಿಹಾಳ ಕ್ಷೇತ್ರಕ್ಕೆ ಅನ್ಯಾಯ ಮಾಡುವುದಿದ್ದರೆ,ನೀವು ರಾಜಕಾರಣ ಮಾಡುವುದಿದ್ದರೆ ಆ ಸ್ಥಾನ ತ್ಯಜಿಸಿ ರಾಜಕಾರಣ ಮಾಡೋಣ ಬನ್ನಿ ಎಂದು ಸಚಿವರಿಗೆ ಸವಾಲು ಎಸೆದ ನಾಡಗೌಡರು, ರೈತರಿಗೆ ಯಾವುದೇ ಪಕ್ಷವಿಲ್ಲ. ಅನ್ನದಾತರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ನಮ್ಮವರ ಕುತಂತ್ರದಿAದ ರೈತರಿಗೆ ಅನ್ಯಾಯ ಆಗುತ್ತಿದೆ.ಇದನ್ನು ಸಹಿಸುವುದಿಲ್ಲ ಎಂದು ನಾಡಗೌಡ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ಮುಖಂಡರಾದ ವಾಯ್.ಎಚ್.ವಿಜಯಕರ್,ಬಾಪುಗೌಡ ಪೀರಾಪೂರ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಮುಖAಡ ಸಿಕಂದರ್ ಜಾನ್ವೇಕರ್,ಪ್ರಶಾಂತ ಕಾಳೆ ಮೊದಲಾದವರು ಇದ್ದರು.

ಮಳೆಯ ಅಂಕಿ-ಅAಶ ಮುಂದಿಟ್ಟ ನಾಡಗೌಡ :
ಜೂನ್‌ನಲ್ಲಿ ಮುದ್ದೇಬಿಹಾಳ ತಾಲೂಕಿನಲ್ಲಿ ಶೇ.28ರಷ್ಟು ಮಳೆ ಕೊರತೆಯಾಗಿದೆ. ತಾಳಿಕೋಟಿಯಲ್ಲಿ ಶೇ.27ರಷ್ಟು ಕೊರತೆ ಕಂಡುಬAದಿದೆ. ಆಗಸ್ಟ್ನಲ್ಲಿಯೂ ಮಳೆಯ ಕೊರತೆ ತೀವ್ರವಾಗಿದೆ. ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ ಮುಂದುವರಿದಿದೆ. ಐದು ವಾರಗಳಿಂದ ಮಳೆಯಾಗದೇ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಬರ ಘೋಷಣೆ ಮಾಡದಿರುವುದು ಯಾವ ನ್ಯಾಯ ? ಎಂದು ನಾಡಗೌಡರು ಪ್ರಶ್ನಿಸಿದರು.
“ಟ್ರಿಗರ್-1 ಮತ್ತು ಟ್ರಿಗರ್-2ರ ಮಾನದಂಡಗಳಿವೆ. ಎಷ್ಟು ಬಿತ್ತನೆಯಾಗಿದೆ, ಭೂಮಿಯ ತೇವಾಂಶ ಹೇಗಿದೆ, ಅಂತರ್ಜಲ ಪರಿಸ್ಥಿತಿ ಏನಿದೆ, ಬೆಳೆಯ ಇಳುವರಿ ಎಷ್ಟಿದೆ ಎಂಬುದನ್ನು ಪರಿಶೀಲಿಸಿ ವರದಿ ಆಧಾರದಲ್ಲಿ ಸಂಪುಟದಲ್ಲಿ ಬರ ಘೋಷಣೆ ಮಾಡಲಾಗುತ್ತದೆ. ಈಗ ಹೇಳಿರುವ ಅಂಶಗಳು ನಮ್ಮ ತಾಳಿಕೋಟಿ,ಮುದ್ದೇಬಿಹಾಳ ತಾಲ್ಲೂಕುಗಳು ಒಳಗೊಳ್ಳುತ್ತಿದ್ದರೂ ಕೈಬಿಟ್ಟಿರುವುದು ಏಕೆ? ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಉಸ್ತುವಾರಿ ಸಚಿವರು ಕಣ್ಣು ಮುಚ್ಚಿಕೊಂಡಿದ್ದಾರೆಯೇ :
ಕೆರೆ ತುಂಬುವ ಯೋಜನೆ ಇರುವ ಪ್ರದೇಶಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಅಲ್ಲಿ ಶೇ.65ರಿಂದ 70ರಷ್ಟು ನೀರಾವರಿ ಇದೆ. ಅಲ್ಲಿ ಬರ ಘೋಷಣೆ ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ.ಆದರೆ ನಮ್ಮ ಕ್ಷೇತ್ರದಲ್ಲಿ ಶೇ.30ರಷ್ಟು ನೀರಾವರಿ ಕೂಡ ಇಲ್ಲ. ಹಾಗಿದ್ದರೂ ಬರ ಘೊಷಣೆ ಮಾಡದೇ ಈ ತಾರತಮ್ಯ ಏತಕ್ಕೆ ?.ಎಲ್ಲೆಡೆ ಮಳೆಯಿಲ್ಲ. ನಾಟಿ ಮಾಡಿದರೂ ಬೆಳೆ ಇಲ್ಲ. ರೈತರ ನೋವು ಇವರಿಗೆ ಕಾಣಿಸುತ್ತಿಲ್ಲವೇ ? ಇವರು ಕಣ್ಣು ಮುಚ್ಚಿಕೊಂಡಿದ್ದಾರೆಯೇ? ಎಂದು ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.

ಕ್ಷುಲ್ಲಕ ರಾಜಕಾರಣ ಮಾಡಬೇಡಿ :
ಬರ ಘೋಷಣೆ ಮಾಡದೇ ಕ್ಷೇತ್ರದ ಕೆಲವು ಬಿಜೆಪಿ ಮುಖಂಡರನ್ನು ಕರೆಸಿಕೊಂಡು ಮನವಿ ಸಲ್ಲಿಸಿದಂತೆ ಮಾಡಿ ಇತ್ತ ಸರ್ಕಾರಕ್ಕೂ ಹಾಗೂ ಕ್ಷೇತ್ರದ ಶಾಸಕನಿಗೂ ಕೆಟ್ಟ ಹೆಸರು ತರಬೇಕು ಎಂಬುದು ಇವರ ದುರುದ್ದೇಶವಾಗಿದೆ.ಇದು ಕೇವಲ ರಾಜಕೀಯ ನಾಟಕ ಎಂದು ಟೀಕಿಸಿದ ನಾಡಗೌಡ, ಇಂತಹ ಕ್ಷುಲ್ಲಕ ರಾಜಕಾರಣದಿಂದ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸವಾಗುತ್ತದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿರುವವರ ವಿರುದ್ಧ ಸಿಎಂ,ಡಿಸಿಎA ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಮುಂದಿನ ಕ್ಯಾಬಿನೆಟ್‌ನಲ್ಲಿ ಘೋಷಣೆಯಾಗದಿದ್ದರೆ ಹೋರಾಟ:
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮುದ್ದೇಬಿಹಾಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿದ್ದರೆ ರೈತರನ್ನು ಕರೆದುಕೊಂಡು ಪಕ್ಷಾತೀತ ಹೋರಾಟ ನಡೆಸುವುದಾಗಿ ಶಾಸಕ ಸಿ.ಎಸ್.ನಾಡಗೌಡ ಎಚ್ಚರಿಕೆ ನೀಡಿದರು. ಒಂದು ವಾರದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆ ಮಾಡದಿದ್ದರೆ ತಹಶೀಲ್ದಾರ್ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ನಾನು ಯಾವುದೇ ಕಾರ್ಯಕರ್ತರನ್ನು ಕರೆಯುವುದಿಲ್ಲ. ರೈತರ ಪರವಾಗಿ ನಾನೊಬ್ಬನೇ ಕುಳಿತು ಹೋರಾಟ ಮಾಡುತ್ತೇನೆ. ಅಗತ್ಯವಿದ್ದರೆ ರೈತರನ್ನು ಕರೆದುಕೊಂಡು ಸತ್ಯಾಗ್ರಹ ನಡೆಸುತ್ತೇನೆ ಎಂದು ನಾಡಗೌಡರು ಘೋಷಿಸಿದರು.
ರೈತರ ಜತೆ ನಾನಿದ್ದೇನೆ. ಅವರಿಗೆ ಸಿಗಬೇಕಾದ ಸಬ್ಸಿಡಿ, ಇನ್‌ಪುಟ್ ಪರಿಹಾರ ಸೇರಿದಂತೆ ಅಗತ್ಯ ನೆರವು ದೊರೆಯಬೇಕು. ಕಣ್ಣೊರೆಸುವ ಕೆಲಸ ಮಾಡದೆ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು

Latest News

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಮುದ್ದೇಬಿಹಾಳ : ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಕುಟುಂಬದವರು ಪರಿಶ್ರಮದಿಂದ ಗಳಿಸಿದ ಆಸ್ತಿಯನ್ನು ದಾನ ಮಾಡುವ

ಮುದ್ದೇಬಿಹಾಳಕ್ಕೆ ಸರ್ಕಾರಿ ಐಟಿಐ ತಂದ ಶಾಸಕರು:                      ಸೆ.3 ರಂದು 8.63 ಕೋಟಿ ರೂ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳಕ್ಕೆ ಸರ್ಕಾರಿ ಐಟಿಐ ತಂದ ಶಾಸಕರು: ಸೆ.3 ರಂದು 8.63 ಕೋಟಿ ರೂ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಬಿಟ್ಟರೆ ಮತ್ತೊಂದು

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ವಾಲಿಬಾಲ್ ಪ್ರಥಮ, ರಿಲೇ ಪ್ರಥಮ, ಥ್ರೋಬಾಲ್ ಪ್ರಥಮ, ಖೋ-ಖೋ ದ್ವಿತೀಯ, 400 ಮೀ. ಓಟದಲ್ಲಿ ಪ್ರಥಮ, 600

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ ಆಗಿಲ್ಲ.ಇದೊಂದು ಧಾರ್ಮಿಕ ಸಂಸ್ಥೆ. ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಈ ಸಂಸ್ಥೆಯಲ್ಲಿ ಹಸ್ತಕ್ಷೇಪ ನಾನು ಮಾಡುವುದರಿಂದ ಉಪಯೊಗ ಏನಿದೆ.ಅಲ್ಲಿ ನನ್ನ ಮಕ್ಕಳೇನಾದರೂ ಕಲಿಯುತ್ತಾರಾ ? ಅಲ್ಲಿ ಮಳಿಗೆ ಕೇಳಿದ್ದೀನಾ ? ಎಂದು ಶಾಸಕ ಸಿ.ಎಸ್.ನಾಡಗೌಡ ಪ್ರಶ್ನಿಸಿದರು. ಪಟ್ಟಣದ ಹುಡ್ಕೋದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬಸರಕೋಡ ಪವಾಡ ಬಸವೇಶ್ವರ ದೇವಸ್ಥಾನದ