ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ ಹೇಳಿಕೆಯನ್ನು ತಗೆದುಕೊಂಡರೋ ಗೊತ್ತಿಲ್ಲ.ಸದ್ಯಕ್ಕೆ ಮುಖ್ಯಮಂತ್ರಿಗಳು ಪತ್ರವ್ಯವಹಾರ ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದೇನೆ.ನನ್ನದು ಸಿದ್ಧಾಂತದ ಮೇಲೆ ಹೋರಾಟ ನಡೆಯುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ತಮ್ಮನ್ನು ಎದುರಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನನ್ನ ಮಾನಸಿಕ ಸ್ಥಿತಿ ಹೇಗಿದೆ ? ಎಂಬುದನ್ನು ಮತ್ತೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ.ಮಾನಸಿಕ ಚಿಕಿತ್ಸೆಯ ಬಗ್ಗೆ ಕೊಟ್ಟಿರುವ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ.ಅವರು ಆವೇಶದಲ್ಲಿ ಹೇಳಿರಬಹುದು ಎಂದು ನಾಡಗೌಡರು ಹೇಳಿದರು. ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ.ಮುಖ್ಯಮಂತ್ರಿಗಳು ಅದನ್ನು ಇನ್ನೂ ಅಂಗೀಕರಿಸಿಲ್ಲ.ನಾಳೆ ಬೆಂಗಳೂರಿಗೆ ಹೋಗಿ ಸಿಎಂ ಅವರನ್ನು ಭೇಟಿ ಮಾಡುತ್ತೇನೆ.ಒಂದು ವೇಳೆ ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ ಎಂದು ಹೇಳಿದರು.

ತಾಲ್ಲೂಕುಮಟ್ಟದ ಸಭೆ ನಡೆಸಿದ ಶಾಸಕ ನಾಡಗೌಡರು:
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆ ಹಾಗೂ ಇನ್ನೀತರ ಬರದ ಮೇಲಿನ ವಿಷಯಗಳ ಕುರಿತು ಶಾಸಕ ಸಿ.ಎಸ್.ನಾಡಗೌಡ ತಾಲ್ಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ಫೋರ್ಸ್ ಸಭೆ ನಡೆಸಿದರು.ವರದಿ ಸಂಗ್ರಹಿಸಿ ಕೊಡುವ ಕೆಲಸವಲ್ಲ.ಸ್ಯಾಟಲೈಟ್ ಮೂಲಕ ಅಂಕಿ ಅಂಶಗಳು ಸಿಗುತ್ತವೆ. ಬರಗಾಲದ ಸಮಯದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿವ ನೀರಿನ ನಿರ್ವಹಣೆ ಸರಿಯಾಗಿ ಮಾಡಬೇಕು.ಗ್ರಾಮೀಣ ಭಾಗದಲ್ಲಿ ಎಲ್ಲಿಲ್ಲಿ ಮುಖ್ಯಪೈಪಲೈನ್ ಕತ್ತರಿಸುವರು ಕಂಡು ಬರುತ್ತಾರೆಯೋ ಅವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು.ತೊಂದರೆ ಕೊಡುವವರ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು ಎಂದು ಸೂಚಿಸುರುವುದಾಗಿ ತಿಳಿಸಿದರು.
ಬೆಳೆಗಳು ಹತ್ತಿ,ಸೂರ್ಯಕಾಂತಿ,ಸಜ್ಜೆ,ಮೆಕ್ಕೆಜೋಳ ಸೇರಿದಂತೆ ಎಲ್ಲ ಬೆಳೆಗಳು ಶೇ.70-80ರಷ್ಟು ಬೆಳೆ ನಾಶವಾಗಿದೆ.ಬರಗಾಲ ಘೋಷಣೆ ಆಗಬೇಕು ಎಂದು ಹೇಳಿದಾಗ ಸಂಬAಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿದ್ದು ನಮ್ಮ ತಾಲ್ಲೂಕು ಮೊದಲ ಆದ್ಯತೆ ಪಟ್ಟಿಯಲ್ಲಿದೆ ಎಂದಿದ್ದಾರೆ ಎಂದು ತಿಳಿಸಿದರು.ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ಆನಂದ ಕೋಲಾರ,ಪ್ರಭಾರ ತಾಪಂ ಇಓ ಸಂಗನಗೌಡ ಬಿರಾದಾರ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ,ತೋಟಗಾರಿಕೆ ಇಲಾಖೆ ಅಧಿಕಾರಿ ರಾಘವೇಂದ್ರ ದೇಶಪಾಂಡೆ ಸೇರಿದಂತೆ ಹಲವರು ಇದ್ದರು

Latest News

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಮುದ್ದೇಬಿಹಾಳ : ಮತಕ್ಷೇತ್ರದ ರೈತರಿಂದ ಆಯ್ಕೆಯಾಗಿರುವ ನೀವು ಅವರ ಬದುಕಿಗೆ ಸಂಕಷ್ಟ ಎದುರಾದಾಗ ಸ್ಪಂದಿಸುವ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು

ಮುದ್ದೇಬಿಹಾಳ : ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಕುಟುಂಬದವರು ಪರಿಶ್ರಮದಿಂದ ಗಳಿಸಿದ ಆಸ್ತಿಯನ್ನು ದಾನ ಮಾಡುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಸರ್ಕಾರಿ ಕೈಗಾರಿಕಾ ಹಾಗೂ ಉದ್ಯೋಗ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಗಂಗಮ್ಮ ಚಿನಿವಾರ ಅವರು ಬಂಥನಾಳ ಶಿವಯೋಗಿಗಳ ಮಾತಿನಿಂದ ಪ್ರೇರಿತರಾಗಿ ಶಿಕ್ಷಣಕ್ಕಾಗಿ ತಮ್ಮ ಇಡೀ ಆಸ್ತಿಯನ್ನು ದಾನ

ಮುದ್ದೇಬಿಹಾಳಕ್ಕೆ ಸರ್ಕಾರಿ ಐಟಿಐ ತಂದ ಶಾಸಕರು:                      ಸೆ.3 ರಂದು 8.63 ಕೋಟಿ ರೂ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳಕ್ಕೆ ಸರ್ಕಾರಿ ಐಟಿಐ ತಂದ ಶಾಸಕರು: ಸೆ.3 ರಂದು 8.63 ಕೋಟಿ ರೂ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಬಿಟ್ಟರೆ ಮತ್ತೊಂದು ಅಂತಹ ತಾಂತ್ರಿಕ ನೈಪುಣ್ಯತೆಯ ಕಾಲೇಜು ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಇರಲಿಲ್ಲ.ಇದೀಗ ಶಾಸಕ ಸಿ.ಎಸ್.ನಾಡಗೌಡ ಅವರು ವಿಶೇಷ ಮುತುವರ್ಜಿ ವಹಿಸಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವನ್ನು ತಂದಿದ್ದು ಯುವಜನರು,ಮಧ್ಯಮ ವರ್ಗದವರಿಗೆ ಈ ಕಾಲೇಜು ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಪಟ್ಟಣದ ಪುರಸಭೆ,ಲೋಕೋಪಯೋಗಿ, ಕೆ.ಆರ್.ಐ.ಡಿ.ಎಲ್ ಹಾಗೂ ಕೆ.ಎಸ್.ಡಿ.ಎಲ್. (ಸಿ.ಎಸ್.ಆರ್) ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆಯಲ್ಲಿ ಸೆ.3