ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆಯ ವತಿಯಿಂದ ಸೆ.11 ರಂದು ಬೆಳಗ್ಗೆ 9ಕ್ಕೆ ದೇವಸ್ಥಾನದ ಬೆಳ್ಳಿ ಮೂರ್ತಿ ಕಳ್ಳತನ ಮಾಡಿದ ಕಳ್ಳರನ್ನು ಬಂಧಿಸಿದ ಪೊಲೀಸರಿಗೆ,ಪೊಲೀಸ್ ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಪ್ಪತ್ತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಜ್ಯೋತಿ ಬೆಳಗಿಸುವರು.ಸಂಸ್ಥೆ ಅಧ್ಯಕ್ಷ ಕೆ.ವಾಯ್.ಬಿರಾದಾರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ನಾಡಗೌಡ್ರ,ಪ್ರಧಾನ ಕಾರ್ಯದರ್ಶಿ ಸಿಂಧುಬಲ್ಲಾಳರಾಜ ನಾಡಗೌಡ್ರ,ಸಮಾಜ ಸೇವಕಿ ಮಂಗಳಾದೇವಿ ಬಿರಾದಾರ,ಮಾಜಿ ಮಂಡಳ ಪ್ರಧಾನ ಶ್ರೀಶೈಲ ಸೂಳಿಭಾವಿ,ಬಾಲಾಜಿ ಶುಗರ‍್ಸ್ ಅಧ್ಯಕ್ಷ ಹಣಮಂತಗೌಡ ಪಾಟೀಲ,ಗಣ್ಯ ವ್ಯಾಪಾರಸ್ಥ ಬಿ.ಸಿ.ಮೋಟಗಿ,ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ,ಗಣ್ಯ ವ್ಯಾಪಾರಸ್ಥ ಸಂಗಣ್ಣ ಬಿರಾದಾರ,ಐಜಿಪಿ ಸಂದೀಪ ಪಾಟೀಲ,ಎಸ್ಪಿ ಲಕ್ಷö್ಮಣ ನಿಂಬರಗಿ,ಡಿವೈಎಸ್ಪಿ ಚಂದ್ರಕಾoತ ನಂದರೆಡ್ಡಿ,ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ,ಅಪರಾಧ ವಿಭಾಗದ ಪಿಎಸ್‌ಐ ರಂಗಪ್ಪ ಭಂಗಿ,ಸಿಪಿಐಗೆ ಪದೋನ್ನತಿ ಹೊಂದಿದ ರಾಮನಗೌಡ ಸಂಕನಾಳ,ಬೆoಗಳೂರಿನ ಪಿಎಸ್‌ಐ ಬಸವರಾಜ ವಣಕಿಹಾಳ ಅವರು ಆಗಮಿಸುವರು ಎಂದು ಸಂಸ್ಥೆಯ ನಿರ್ದೇಶಕ ಶ್ರೀಶೈಲ ಮೇಟಿ ತಿಳಿಸಿದ್ದಾರೆ.







