ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು ಲಕ್ಷಗಳವರೆಗಿನ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಪಟ್ಟಣದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಮುದ್ದೇಬಿಹಾಳ ತಾಲ್ಲೂಕು ಮಾತ್ರ ಬರಪಟ್ಟಿಗೆ ಸೇರ್ಪಡೆಯಾದರೆ ಸುಮ್ಮನಾಗುವುದಿಲ್ಲ.ಕ್ಷೇತ್ರದ ತಾಳಿಕೋಟಿ ತಾಲ್ಲೂಕು, ಜಿಲ್ಲೆಯ ದೇವರಹಿಪ್ಪರಗಿ ಹಾಗೂ ಇನ್ನುಳಿದ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡುವವರೆಗೆ ಬಿಡುವುದಿಲ್ಲ.ರಾಜ್ಯದ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಗುಡುಗಿದರು.
ಪ್ರತಿ ಎಕರೆಗೆ 50 ಸಾವಿರ ರೂ. 5 ಎಕರೆಯವರೆಗೆ ಪರಿಹಾರ ನೀಡಬೇಕು.ರೈತನಿಗೆ ಉದ್ಯೋಗ ಕೊಡಬೇಕು.ವಿಬಿ ಜಿ ರಾಮ ಜೀ ಅಡಿ ರೈತನ ಹೊಲದಲ್ಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಇವರು ಹಳ್ಳಿಗಳಿಗೆ ಹೋಗಿ ಸರ್ವೆ ಮಾಡಲಿಲ್ಲ.ಮೂರುವರೆ ತಿಂಗಳಿನಿAದ ಬರ ಪರಿಸ್ಥಿತಿ ಇದೆ.ಒಂದನೇ ಪಟ್ಟಿಯಲ್ಲೂ ಇರಲಿಲ್ಲ,ಎರಡನೆ ಪಟ್ಟಿಯಲ್ಲಿ ಬರಪೀಡಿತ ತಾಲ್ಲೂಕು ಎಂದು ಮುದ್ದೇಬಿಹಾಳದ ಹೆಸರು ಘೋಷಣೆ ಆಗಲಿಲ್ಲ.ಅಪ್ಪಾಜಿ ನಾಡಗೌಡ ಅವರು ಮಹಾನ್ ನಾಟಕಕಾರ ಎಂದು ಜರಿದರು.ಸರಕಾರದ ಒಂದು ಭಾಗ ಆಗಿರುವ ನೀವು ತಾಲ್ಲೂಕಿನ ರೈತರ ಪರವಾಗಿ ವಿಧಾನಸೌಧದ ಮುಂದೆ ಧರಣಿ ಕೂಡಬೇಕು.ಬರಗಾಲ ಘೋಷಣೆ ಮಾಡಿಸಲು ಆಗದ ಅಸಹಾಯಕ ಶಾಸಕರು ನಾಡಗೌಡರು ಎಂದು ನಡಹಳ್ಳಿ ಟೀಕಿಸಿದರು.
ಇವರು ನಿಗಮದ ಕಾರು ಕಸಿದುಕೊಂಡಿದ್ದಕ್ಕೆ ಅಸಮಾಧಾನಗೊಂಡು ಎಂ.ಬಿ.ಪಾಟೀಲರ ವಿರುದ್ಧ ಮಾತನಾಡಿ ಜವಾಬ್ದಾರಿಯಿಂದ ನುಣಚಿಕೊಳ್ಳುವ ಷಡ್ಯಂತ್ರ ನಡೆಸಿದ್ದಾರೆ.ರೈತರ ಹೋರಾಟದ ಎಫೆಕ್ಟ್ಗೆ ಟಾಸ್ಕ್ಪೋರ್ಸ್ ಮೀಟಿಂಗ್ ಮಾಡಿದ್ದಾರೆ.ಮಳೆ ಮಾಪನ ಕೇಂದ್ರಗಳು ಕೆಟ್ಟಿವೆ.ಇವರು ಮಾತ್ರ ಎರಡು ತಿಂಗಳಿನಿAದ ನಿದ್ದೆ ಮಾಡುತ್ತಿದ್ದಾರೆ ಎಂದು ನಾಡಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಬರಗಾಲದಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರ ನಿರ್ಲಕ್ಷö್ಯ ವಹಿಸಿದೆ.ಯುವಕರು ಸರ್ಕಾರದ ವಿರುದ್ಧ ಸಿಡಿದೇಳಬೇಕು ಎಂದು ಕರೆ ನೀಡಿದರು.ಮುಖಂಡರಾದ ಮಲಕೇಂದ್ರಗೌಡ ಪಾಟೀಲ, ಸೋಮನಗೌಡ ಬಿರಾದಾರ ಕವಡಿಮಟ್ಟಿ,ಗುರುನಾಥಗೌಡ ಬಿರಾದಾರ,ಗಿರೀಶಗೌಡ ಪಾಟೀಲ,ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ,ಮಲ್ಲಿಕಾರ್ಜುನ ಬಿರಾದಾರ,ಸಂಗಮ್ಮ ದೇವರಳ್ಳಿ,ಗೌರಮ್ಮ ಹುನಗುಂದ,ಸAಗು ಹತ್ತಿ ಸೇರಿದಂತೆ ಹಿರೇಮುರಾಳ ಜಿಪಂ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು,ರೈತರು ಪಾಲ್ಗೊಂಡಿದ್ದರು.ಗುರುವಾರದ ಹೋರಾಟದಲ್ಲಿ ಎತ್ತಿನ ಚಕ್ಕಡಿಗಳೊಂದಿಗೆ ಆಗಮಿಸಿದ್ದ ರೈತರೊಂದಿಗೆ ನಡಹಳ್ಳಿ ಅವರು ಹಲಿಗೆ ಬಾರಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು ವಿಶೇಷವಾಗಿತ್ತು.
ನಾನು ನೀರು ಬಿಡಿಸಲು ಗೂಂಡಾಗಿರಿ ಮಾಡಿದ್ದೇನೆ: ಈ ಹಿಂದೆ ಹೊಕ್ರಾಣಿ,ಜಕ್ಕೇರಾಳ ಗ್ರಾಮದ ರೈತರು ಕೆರೆಗಳಿಗೆ ನೀರು ತುಂಬಿಸಲು ಮನವಿ ಮಾಡಿದಾಗ ಆಗ ಪೊಲೀಸರನ್ನು ಮುಂದೆ ಬಿಟ್ಟು ಹೆದರಿಸುವ ತಂತ್ರ ಅನುಸರಿಸಿದ್ದರು.ಆದರೆ ಯಾರದ್ದೇ ಭಯಕ್ಕೆ ಒಳಗಾಗದೇ ರೈತರ ಜಮೀನುಗಳಿಗೆ ನೀರು ಹರಿಸಲು ಸಂಕಲ್ಪ ತೊಟ್ಟು ಕೆಬಿಜೆಎನ್‌ಎಲ್ ಅಧಿಕಾರಿಗಳೊಂದಿಗೆ ಜಟಾಪಟಿ ನಡೆಸಿದ್ದೇನೆ.ಅದನ್ನೆ ಕೆಲವು ಮಾಧ್ಯಮದವರು ನಡಹಳ್ಳಿ ಗೂಂಡಾಗಿರಿ ಎಂದೆಲ್ಲ ಪ್ರಸಾರ ಮಾಡಿದರು.ಆದರೆ ನಾನು ನಮ್ಮ ರೈತರಿಗಾಗಿ ಗೂಂಡಾಗಿರಿ ಮಾಡಿದ್ದೇನೆ ಎಂದು ನಡಹಳ್ಳಿ ಹೇಳಿದರು.







