A life without sports is like a fruit eaten by an insect - A.C. Kerura

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ – ಎ.ಸಿ.ಕೆರೂರ

ಅಡವಿ ಹುಲಗಬಾಳ : ಅಹಿಲ್ಯದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲುಗಬಾಳದಲ್ಲಿ 2025-26 ನೇ ಸಾಲಿನ ನಾಲತವಾಡ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವು ಜರುಗಿದವು. ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ, ಮನುಷ್ಯ ಸದೃಢವಾಗಿ ಇರಬೇಕೆಂದರೆ ಪ್ರತಿದಿನ ಯೋಗ, ಕ್ರೀಡೆಯಲ್ಲಿ ಭಾಗವಹಿಸುವುದು ಅತಿ ಮುಖ್ಯ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎನ್ನುವಂತೆ, ದೇಹವನ್ನು ದಂಡಿಸಿದಾಗ ಮಾತ್ರ ಆರೋಗ್ಯದಿಂದಿರಲು ಸಾಧ್ಯ.

ಈಗ ಎಲ್ಲರೂ ಯಂತ್ರಗಳಿಗೆ ಮೊರೆ ಹೋಗುವುದರಿಂದ ದೇಹವನ್ನು ದಂಡಿಸಲು ಆಗುತ್ತಿಲ್ಲ. ಹಾಗಾಗಿ ರೋಗ-ರುಜಿನುಗಳಿಗೆ ಅಣಿ ಆಗುತ್ತಿದ್ದಾನೆ. ಸೋಲು ಗೆಲುವನ್ನು ಸಮಾನತೆಯಿಂದ ಕಾಣುವ ಗುಣವನ್ನು ಹೊಂದಿರಬೇಕು. ಕ್ರೀಡಾಪಟುಗಳೊಂದಿಗೆ ಬಂದಂತಹ ಹಿತೈಷಿಗಳು ಯಾವುದೇ ರೀತಿಯಾಗಿ ಜಗಳಕ್ಕೆ ಅಣಿಯಾಗದಂತೆ, ಕ್ರೀಡೆಯಲ್ಲಿ ಭಾಗವಹಿಸಬೇಕು. ಈ ವರ್ಷ ಅರ್ಹತಾ ಪ್ರಮಾಣ ಪತ್ರವನ್ನು ಆನ್ಲೈನ್ ಮುಖಾಂತರವಾಗಿ ತೆಗೆದುಕೊಳ್ಳುತ್ತಿರುವುದರಿಂದ ಬೇರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲು ಕಡಿವಾಣವನ್ನು ಸರಕಾರ ಹಾಕಿದ್ದು ತುಂಬಾ ಸಂತೋಷ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿರ್ಣಾಯಕರು ಕೊಟ್ಟಂತಹ ನಿರ್ಣಯಗಳಿಗೆ ಬದ್ಧರಾಗಬೇಕು. ನಿರ್ಣಾಯಕರು ಸಹ ನೀಡುವ ತೀರ್ಪು ಎಲ್ಲರೂ ಒಪ್ಪುವಂತಿರಬೇಕು. ಒಳ್ಳೆಯ ಮತ್ತು ನೈಜ ಪ್ರತಿಭಾವಂತ ಕ್ರೀಡಾಪಟುಗಳನ್ನು ವಲಯ, ತಾಲೂಕು, ಜಿಲ್ಲಾ , ವಿಭಾಗ, ರಾಜ್ಯ ಮಟ್ಟಕ್ಕೆ ಕಳಿಸುವರು ನಾವು ಆಗಬೇಕು. ಆಡಿಸುವರ ಕಣ್ಣು ಎರಡು ಆದರೆ ನೋಡುವವರ ಕಣ್ಣು ನೂರಾರು ಆಗಿರುತ್ತವೆ, ಹಾಗಾಗಿ ತೀರ್ಪು ನ್ಯಾಯ ಸಮ್ಮತವಾಗಿರಬೇಕು ಎಲ್ಲ ಮಕ್ಕಳು ನಮ್ಮ ಶಾಲೆಯ ಮಕ್ಕಳು ಎಂದು ನಿರ್ಣಯವನ್ನು ನೀಡಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಾರಿ ಗ್ರೇಡ್ -1 ದೈಹಿಕ ಶಿಕ್ಷಕರ ಸಂಘ,ಮುದ್ದೇಬಿಹಾಳ ಅಧ್ಯಕ್ಷರಾದ ಎ.ಸಿ.ಕೆರೂರ ಹೇಳಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ರಾಹುತ ಪೂಜಾರಿ ಅಧ್ಯಕ್ಷರು ದೈ.ಶಿ.ಶಿ. ಸಂಘ ತಾಳಿಕೋಟೆ ಎಲ್ಲಿ ಕ್ರೀಡಾಂಗಣಗಳು ಕ್ರೀಡಾಪಟುಗಳಿಂದ ತುಂಬಿರುತ್ತವೆ ಆ ಊರಲ್ಲಿ ಆಸ್ಪತ್ರೆಗಳು ಖಾಲಿ ಖಾಲಿ ಇರುತ್ತವೆ, ಕ್ರೀಡೆ, ಕ್ರೀಡಾ ಸ್ಪೂರ್ತಿಯಿಂದ ನ್ಯಾಯಯುತವಾಗಿ ಮಾಡಬೇಕು, ಆಟದಿಂದ ನಾಯಕತ್ವವನ್ನು ಹೊಂದಾಣಿಕೆ ಗುಣ ಬೆಳೆಸಿಕೊಳ್ಳಬೇಕು ಹೊರತು ಸಿಟ್ಟು, ದ್ವೇಷ, ಗುಣದಿಂದ ದೂರ ಇರಬೇಕು.

ಈ ವಲಯದ ಕ್ರೀಡಾಪಟುಗಳು ರಾಜ್ಯಮಟ್ಟದವರೆಗೆ ಆಡಿ ನಮ್ಮ ವಲಯದ ಕೀರ್ತಿಯನ್ನು ತರಬೇಕು ಎಂದು ಅಧ್ಯಕ್ಷತೆ ವಹಿಸಿದ ಕಿರಣ್ ಮದರಿ , ಅಧ್ಯಕ್ಷರು ಅಹಿಲ್ಯ ದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಅಡವಿ ಹುಲಗಬಾಳ ಶುಭವನ್ನು ಕೋರಿದರು . ಕ್ರೀಡಾ ಧ್ವಜಾರೋಹಣವನ್ನು ಅಂಬರೀಶ್ ಮದರಿ, ನಿರ್ದೇಶಕರು ಅಹಿಲ್ಯ ದೇವಿ ಶಿಕ್ಷಣ ಸಂಸ್ಥೆ ಅಡವಿ ನಿರ್ವಹಿಸಿದರು, ವೇದಿಕೆ ಮೇಲಿದ್ದ ಕಿರಣ್ ಮದರಿ , ಎ.ಸಿ.ಕೆರೂರ, ಎಂ.ಎಸ್.ಗುಡಗುಂಟಿ ಮುಖ್ಯ ಗುರುಗಳು ಸರ್ಕಾರಿ ಪ್ರೌಢಶಾಲೆ ಅಡವಿ ಹುಲುಗಬಾಳ, ಬಿ.ಬಿ.ಪೂಜಾರಿ, ರಾಹುತ್ ಪೂಜಾರಿ, ಮಲ್ಲಿಕಾರ್ಜುನ ರಾಯಗೊಂಡ, ಪಾರಿವಾಳಗಳನ್ನು ಹಾರಿ ಬಿಡುವುದರಿಂದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು .
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ.ರೇಖಾ ಹಿರೇಮಠ, ಸ್ವಾಗತವನ್ನು ಬಿ.ಕೆ.ಪೂಜಾರಿ ಮುಖ್ಯ ಗುರುಗಳು ಅಭ್ಯುದಯ ಪ್ರೌಢಶಾಲೆ ಅಡವಿ ಹುಳಗಬಾಳ, ನಿರೂಪಣೆ ಬಿ.ಬಿ.ತಳವಾರ ಶಿಕ್ಷಕರು ಅಭ್ಯುದಯ ಪ್ರೌಢಶಾಲೆ ಅಡವಿಹುಲಗಬಾಳ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಲಯದ ಕ್ರೀಡಾಪಟುಗಳು ತಂಡದ ವ್ಯವಸ್ಥಾಪಕರು ಮತ್ತು ನಿರ್ಣಾಯಕರಾಗಿ, ವೀರೇಶ್ ಗದಗ, ಮೋಹನ್ .ಬಿ.ಪಾಟೀಲ್, ಬಲಭೀಮ ಮಾದರ್, ಎಸ್. ಎಸ್.ಹಿರೇಮಠ್ , ಎಸ್.ಪಿ.ಹಂಡರಗಲ್, ಪ್ರಕಾಶ್ ಜಂಬಿಗಿ, ಎನ್.ವಿ. ಪತ್ತಾರ್, ಎಚ್.ಎಲ್. ಭಜಂತ್ರಿ, ಎಚ್.ಕೆ.ನಾಟಿಕರ್, ವಿಶ್ವನಾಥ್ ಪಾಟೀಲ್, ಬಸವರಾಜ್ ಚಳ್ಳಗಿ, ಡಿ.ಎ.ಜಾವೂರ್, ಡಿ.ಎ.ಮಂಕಣಿ, ಶ್ರೀಮತಿ ಗೀತಾ ಯರಂತಲಿಮಠ, ಶ್ರೀಮತಿ ಡಿ.ಬಿ.ಪೂಜಾರಿ, ಮುಂತಾದವರು ಭಾಗವಹಿಸಿದ್ದರು.

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ