ತಂಗಡಗಿ ಕೃಷ್ಣಾ ನದಿ ಸೇತುವೆ ಬಳಿಕ ಘಟನೆ ಬೆಳಕಿಗೆ: ತನ್ನ ಮದುವೆಗೆ ವಿರೋಧಿಸಿದ ಪ್ರಿಯತಮೆಯ ಕೊಲೆಗೈದ ಪ್ರಿಯಕರ

ತಂಗಡಗಿ ಕೃಷ್ಣಾ ನದಿ ಸೇತುವೆ ಬಳಿಕ ಘಟನೆ ಬೆಳಕಿಗೆ: ತನ್ನ ಮದುವೆಗೆ ವಿರೋಧಿಸಿದ ಪ್ರಿಯತಮೆಯ ಕೊಲೆಗೈದ ಪ್ರಿಯಕರ

ಮುದ್ದೇಬಿಹಾಳ : ತನ್ನೊಂದಿಗೆ ಅನೈತಿಕ ಸಂಬoಧವಿಟ್ಟುಕೊoಡಿದ್ದ ಮಹಿಳೆ ತನ್ನ ಮದುವೆಗೆ ವಿರೋಧಿಸಿದೆಳೆನ್ನುವ ಕಾರಣಕ್ಕಾಗಿ ಆಕೆಯನ್ನು ಕೊಲೆಗೈದು ಶವವನ್ನು ಕೃಷ್ಣಾ ನದಿಗೆ ಎಸೆಯಲು ಮುಂದಾಗಿದ್ದ ವೇಳೆ ಸಾರ್ವಜನಿಕರನ್ನು ಕಂಡು ಶವ ಅಲ್ಲಿಯೇ ಬಿಟ್ಟು ವ್ಯಕ್ತಿಯೋರ್ವ ಪರಾರಿಯಾಗಿರುವ ಘಟನೆ ತಾಲ್ಲೂಕಿನ ತಂಗಡಗಿ ಕೃಷ್ಣಾ ನದಿ ಬಳಿ ಮೇ.13 ರಂದು ಮಧ್ಯರಾತ್ರಿ ಜರುಗಿದೆ.

ಘಟನೆ ವಿವರ : ಮೂಲತಃ ತೇರದಾಳದ ಸದ್ಯಕ್ಕೆ ಹುನಗುಂದ ತಾಲ್ಲೂಕು ಮರೋಳದಲ್ಲಿ ವಾಸಿಸುತ್ತಿದ್ದ ಸಮ್ಮೇದ ವಿಜಯ ಸಾಬಣ್ಣವರ ಹಾಗೂ ಸವದತ್ತಿ ತಾಲ್ಲೂಕು ಅರ್ಟಗಲ್ ಗ್ರಾಮದ ವಿವಾಹಿತೆ ಮಹಿಳೆ ಗಂಗವ್ವ ಸುನೀಲ ತ್ಯಾಪಿ ಮಧ್ಯೆ ಅನೈತಿಕ ಸಂಬoಧ ಬೆಳೆದಿತ್ತು.
ಆರೋಪಿತ ಸಮ್ಮೇದನು ಬೇರೆ ಹುಡುಗಿಗೆ ಮದುವೆ ಮಾಡಿಕೊಳ್ಳಲು ಆತ ಪ್ರೀತಿಸುತ್ತಿದ್ದ ಗಂಗವ್ವ ತಕರಾರು ಮಾಡಿದ್ದನ್ನು ಸಹಿಸಲಾಗದೇ ಆಕೆಯನ್ನು ಮರೋಳ ಗ್ರಾಮದ ಹತ್ತಿರ ತಾನು ಪಾಲು ಮಾಡಿರುವ ಮಹಾಂತೇಶ ಮಡಿವಾಳರ ಇವರ ಹೊಲದಲ್ಲಿ ಮೇ.13 ರಂದು ರಾತ್ರಿ 8 ಗಂಟೆಗೆ ಅವಳಿಗೆ ಹೊಡೆದು ಕೊಲೆ ಮಾಡಿ ಅವಳಿಗೆ ತನ್ನ ಮೋಟಾರ್ ಸೈಕಲ್ ಮೇಲೆ ತಂಗಡಗಿ ಸೇತುವೆ ಮೇಲೆ ತಂದು ಅವಳ ಶವವನ್ನು ಬ್ರಿಡ್ಜ್ದ ಮೇಲಿಂದ ಒಗೆಯಲು ಶವವನ್ನು ಇಳಿಸುವ ಸಮಯದಲ್ಲಿ ಅಲ್ಲಿ ಕೆಲವು ಜನರು ನೋಡಿ ಅವನ ಬೆನ್ನು ಹತ್ತಿ ಕೂಗಿದಾಗ ಆತನು ಆಕೆಯ ಶವವನ್ನು ಹಾಗೂ ಮೋಟಾರ್ ಸೈಕಲ್‌ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬoಧಿಸಿದoತೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಮೇಲೆ 8 ಕಿ.ಮೀ ದೂರ ಶವ ಹೊತ್ತು ತಂದ ಆರೋಪಿ:
ಆರೋಪಿ ಸಮ್ಮೇದ ತಾನು ಕೊಲೆ ಮಾಡಿದ ಗಂಗವ್ವಳ ಶವವನ್ನು ಮರೋಳದಿಂದ ತಂಗಡಗಿ ಗ್ರಾಮದ ಬ್ರಿಡ್ಜ್ವರೆಗೆ ಬೈಕ್ ಮೇಲೆ ತಂದಿದ್ದಾನೆ.ಮರೋಳದಿoದ ತಂಗಡಗಿ ಸೇತುವೆ ಸುಮಾರು 8 ಕಿ.ಮೀ ಅಂತರವಿದ್ದು ಅಲ್ಲಿಂದ ಒಬ್ಬನೇ ಬೈಕ್ ಮೇಲೆ ಆಕೆಯ ಶವವನ್ನು ಹೊತ್ತುಕೊಂಡು ತಂದಿರುವ ಆಘಾತಕಾರಿ ಸಂಗತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,