ಚಿಕ್ಕಬಳ್ಳಾಪುರ: ಹೆಣ್ಣು ಮಗು ಹುಟ್ಟಿತು ಎಂಬ ಏಕೈಕ ಕಾರಣಕ್ಕೆ ಪ್ರಿಯತಮಗೆ ಕೈಕೊಟ್ಟು ಯುವಕ ಪರಾರಿಯಾಗಿದ್ದಾನೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಹೌದು, ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ರಹಮತ್ತುಲ್ಲ ಎನ್ನುವ ಯುವಕ, ಬಾಗೇಪಲ್ಲಿ ತಾಲೂಕಿನ ಚೆಂಡೂರು ಗ್ರಾಮದ ಯುವತಿಯೊಬ್ಬಳ ಜತೆ ಹತ್ತು ವರ್ಷಗಳಿಂದ ಜೀವನ ನಡೆಸುತ್ತಿದ್ದ. ಆದರೆ, ಮದುವೆಗೆ ನಿರಾಕರಿಸಿದ ಕಾರಣ ಯುವತಿ ಬೇರೆ ಮದುವೆ ಮಾಡಿಕೊಂಡಿದ್ದಳು. ಆದರೂ ಬಿಡದ ಪಾಪಿ ರಹಮತ್, ಆಕೆಯ ಮನವೋಲಿಸಿ ಆಕೆಯ ಪತಿಗೆ ಡೈವೊರ್ಸ್ ಕೊಡಿಸಿ ಮತ್ತೆ ತಾನೂ ಐದು ವರ್ಷ ಸಂಸಾರ ನಡೆಸಿದ್ದಾನೆ.
ಆದರೆ, ಈಗ ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: Rameshwaram cafe blast: ಬಿಜೆಪಿ ಕಚೇರಿ ಸ್ಫೋಟಕ್ಕೆ ಯತ್ನ!
ಇದರಿಂದ ನೊಂದ ಮಹಿಳೆ ಪೆರೇಸಂದ್ರ ಪೊಲೀಸರಿಗೆ ದೂರು ನೀಡಿದ್ದಾಳೆ.