ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿರುವ ನಟ ದರ್ಶನ್ (Actor Darshan) ಅವರನ್ನು ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಶನಿವಾರ ಬಳ್ಳಾರಿ ಜೈಲಿನಲ್ಲಿ ದರ್ಶನ್ (Actor Darshan) ರನ್ನು ಸಂದರ್ಶಕರ ಕೊಠಡಿಯಲ್ಲಿ ಭೇಟಿ ಯಾದ ವಿಜಯಲಕ್ಷ್ಮಿ, ತನ್ನ ಪತಿ ಕಿಂಧೆ ಯಂತಿರುವ ಪುಟ್ಟ ಸೆಲ್‌ನಲ್ಲಿ ಬಂಧಿಯಾಗಿರುವುದನ್ನು ತಿಳಿದು ಕಣ್ಣೀರಿಟ್ಟಿದ್ದಾರೆ.
ದರ್ಶನ್‌ರನ್ನು ನೋಡುತ್ತಿದ್ದಂತೆ ವಿಜಯ ಲಕ್ಷ್ಮಿ ಅವರ ಕಣ್ಣಾಲಿ ತುಂಬಿ ಬಂದಿದ್ದು, ಆರೋಗ್ಯ ಹೇಗಿದೆ? ನಿಮ್ಮನ್ನು ಈ ಸ್ಥಿತಿ ಯಲ್ಲಿ ನೋಡಲು ನನ್ನಿಂದಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಪತ್ನಿಯನ್ನು ಸಂತೈಸಿ ಧೈರ್ಯ ತುಂಬಿದ ದರ್ಶನ್, ಇದೊಂದು ಕೆಟ್ಟಘಳಿಗೆ ದೇವರಿದ್ದಾನೆ. ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದ್ದಾರೆ.
ಇಬ್ಬರೂ ಸುಮಾರು ಅರ್ಧಗಂಟೆ ಕಾಲ ಮಾತನಾಡಿದರು. ಇದೇ ವೇಳೆ, ವಕೀಲರ ಜತೆಗೂ ನಟ ದರ್ಶನ್ ಕೆಲ ಹೊತ್ತು ಮಾತುಕತೆ ನಡೆಸಿದರು.
ಇದನ್ನೂ ಓದಿ: Muda case: ನಾಳೆ ಸಿಎಂ ಸಿದ್ದರಾಮಯ್ಯ ಹಣೆಬರಹ ನಿರ್ಧಾರ
ವಿಜಯಲಕ್ಷ್ಮಿ ಅವರು ಎರಡು ಬ್ಯಾಗ್ ಜತೆ ದರ್ಶನ್‌ರನ್ನು ಭೇಟಿಯಾಗಲು ಆಗಮಿಸಿದ್ದರು. ಅವರು ನೀಡಿದ ಬಟ್ಟೆ, ಡೈಫ್ರಟ್ಸ್ ಹೊಂದಿರುವ ಬ್ಯಾಗ್‌ನ್ನು ದರ್ಶನ್‌ಗೆ ಕೊಡಲಾಯಿತು. ಬೆಡ್‌ಶೀಟ್ ಅನ್ನು ವಾಪಸ್ ಕಳುಹಿಸಲಾಯಿತು.