ಬೆಂಗಳೂರು: ಮುಖ್ಯಮಂತ್ರಿಗಳ ವಿರುದ್ಧದ ಆರೋಪ ಪ್ರಕರಣದಲ್ಲಿ (Muda case) ಸಂಪುಟದ ಸಲಹೆ ಒಪ್ಪಬೇಕಿಲ್ಲ. ಮಂತ್ರಿಗಳನ್ನು ಸಿಎಮ್ಮೆ ಆಯ್ಕೆಮಾಡಿರುವಾಗ ಅಂಥ ಸಂಪುಟದ ನಿರ್ಣಯ, ಸಲಹೆಯನ್ನು ರಾಜ್ಯಪಾಲರು ಒಪ್ಪಬೇಕಾಗಿಲ್ಲ ಎಂದು ರಾಜ್ಯಪಾಲರ ಪರ ಸಾಲಿಸಿಟರ್ ಜನ ರಲ್ ತುಷಾರ್ ಮೆಹ್ರಾ ಪ್ರಬಲವಾಗಿ ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲರು ಸಂಬಂಧಪಟ್ಟ ಪ್ರತಿ ದಾಖಲೆ ಪರಿಶೀಲಿಸಿ, ಟಿಪ್ಪಣಿ ಮಾಡಿಕೊಂಡು ತಮ್ಮ ವಿವೇಚನೆ ಬಳಸಿ ನಿರ್ಧಾರ ಮಾಡಿದ್ದಾರೆ.
ಮುಡಾ (Muda case) ವಿಚಾರದಲ್ಲಿ ಸಿಎಂ ಯಾವುದೇ ನಿರ್ಣಯ ಮಾಡಿಲ್ಲ, ಶಿಫಾರಸು ಮಾಡಿಲ್ಲ ಎಂದಾದರೆ ಅವರಿಗೇಕೆ ಚಿಂತೆ ಎಂದು ಪ್ರಶ್ನಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ಪ್ರಾಸಿಕ್ಯೂ ಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾ| ಎಂ.ನಾಗಪ್ರಸನ್ನ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಮೆಹ್ರಾ ವಾದ ಮಂಡಿಸಿದ ನಂತರ ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್, ಮತ್ತೊಬ್ಬ ದೂರುದಾರ ಪ್ರದೀಪ್ ಪರ ಪ್ರಭುಲಿಂಗ ನಾವದಗಿ ಹಾಗೂ ಟಿ.ಜೆ.ಅಬ್ರಹಾಂ ಪರ ರಂಗನಾಥ ರೆಡ್ಡಿ ಅವರೂ ತಮ್ಮ ವಾದ ಮಂಡಿಸಿದರು. ಎಲ್ಲರವಾದಆಲಿಸಿದನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: Love story: ಪ್ರೀತಿಸಲು ಹುಡುಗಿ ಸಿಗಲಿಲ್ಲವೆಂದು ಡೆತ್ ನೋಟ್ ಬರೆದಿಟ್ಟ ಯುವಕ.. ತುಂಗಾ ನದಿಗೆ ಹಾರಿದ್ನಾ..?
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಖಾಸಗಿ ದೂರಿಗೆ ಸಂಬಂಧಿಸಿದ ವಿಚಾರಣೆಯನ್ನು ಮುಂದೂಡಬೇಕು ಮತ್ತು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂಬ ಈ ಹಿಂದಿನ ಆದೇಶವನ್ನು ಸೆ.2ರವರೆಗೆ ವಿಸ್ತರಿಸಿತು.