ವಿಜಯಪುರ: ಬೈಕ್ ಸವಾರನಿಗೆ ರಭಸವಾಗಿ ಡಿಕ್ಕಿ ಹೊಡೆದ ಕಾರು ಚಾಲಕನೊಬ್ಬ ಕಾರಿನ ಬೋನಟ್‌ನಲ್ಲಿ ಸಿಕ್ಕಿಕೊಂಡ ಬೈಕ್ ಸವಾರನ ಮೃತದೇಹವನ್ನು 1 ಕಿ.ಮೀ.ಗೂ ಅಧಿಕ ದೂರು ಎಳೆದೊಯ್ದ ದುರ್ಘಟನೆ ನಗರದ ಮನಗೂಳಿ ಅಗಸಿ ಬಳಿ ಗುರುವಾರ ನಡೆದಿದೆ.
ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ನಿವಾಸಿ, ವಕೀಲ ರವಿ ಮೇಲಿನಮನಿ ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.
ವಿಜಯಪುರದ ಬಸವನಗರದಲ್ಲಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ರವಿಗೆ ವೇಗವಾಗಿ ಬಂದ ಇನೋವಾ ಕಾರು ಡಿಕ್ಕಿ ಹೊಡೆದಿದ್ದು, ರಭಸಕ್ಕೆ ರವಿಯ ಶವ ಕಾರಿನಡಿ ಸಿಲುಕಿದೆ. ರಸ್ತೆಯಲ್ಲಿದ್ದ ಜನರು ಕೂಗಿದರೂ ಕಾರು ನಿಲ್ಲಿಸಿದರೆ ಸುಮಾರು 1 ಕಿಲೋ ಮೀಟರ್‌ಗೂ ಅಧಿಕ ಮೃತದೇಹವನ್ನು ಎಳೆದೊಯ್ದು ಕಾರು ಚಾಲಕವಿಕೃತಿ ಮೆರೆದಿದ್ದಾನೆ.
ಇದನ್ನು ಓದಿ: Mudhol: ಸ್ವಾತಂತ್ರ್ಯ ಹೋರಾಟಗಾರ ಜಡಗಣ್ಣ-ಬಾಲಣ್ಣ ಮೂರ್ತಿ ಪ್ರತಿಷ್ಠಾಪನೆ
ದೂರದವರೆಗೆ ಹೋಗಿ ಶವವನ್ನು ಬಿಟ್ಟು ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಕಾರಿಗೆ ಯಾವುದೇ ನಂಬರ್‌ಪ್ಲೇಟ್ ಮತ್ತು ಟಿಂಟೆಡ್ ಗ್ಲಾಸ್ ಇರಲಿಲ್ಲ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.