ಮುಧೋಳ : ನಗರದ ವೀರ ಜಡಗಣ್ಣ ಬಾಲಣ್ಣ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಜಡಗಣ್ಣ-ಬಾಲಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
9 ಅಡಿ ಎತ್ತರವಿರುವ ಮೂರ್ತಿಗಳನ್ನು ಬೆಳಗಾವಿಯಲ್ಲಿ ತಯಾರಿಸಲಾಗಿದೆ. ಶುಕ್ರವಾರ ಬೆಳಗಿನಜಾವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ವೃತ್ತದಲ್ಲಿ ಪ್ರತಿಷ್ಠಾಪಿಸಲಾಯಿತು.
ಕೆಲವೆ ದಿನಗಳಲ್ಲಿ ಅದ್ದೂರಿ ಕಾರ್ಯಕ್ರಮ ಮಾಡುವುದರೊಂದಿಗೆ ಮೂರ್ತಿ ಅನಾವರಣಗೊಳಿಸಲಾಗುವುದು ಎಂದು ವಾಲ್ಮೀಕಿ ಸಮಾಜದ ಮುಖಂಡರು ತಿಳಿಸಿದರು.
ಇದನ್ನೂ ಓದಿ: Mudhol: ಮಳೆಯ ಆರ್ಭಟಕ್ಕೂ ಮಣಿಯದ ನೆರೆ ಸಂತ್ರಸ್ತರ ಹೋರಾಟ; ಕ್ಯಾರೇ ಎನ್ನದ ಜಿಲ್ಲಾಡಳಿತ
ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ಭೀಮಪ್ಪ ತಳವಾರ, ಗೌವರಾಧ್ಯಕ್ಷ ಚನ್ನಬಸಪ್ಪ ಮುತ್ತೂರ, ಲಕ್ಷ್ಮಣ ಮಾಲಗಿ, ಶಿವಪ್ಪ ಡೊಳ್ಳಿ, ಸುಭಾಷ ಗಸ್ತಿ, ಶ್ರೀಶೈಲ ಕೋವಳ್ಳಿ, ರಾಘವೇಂದ್ರ ಮುಚಕನ್ನವರ, ವಿಠ್ಠಲ ಕೊಳನ್ನವರ, ಹನಮಂತ ಕಳಸಕೊಪ್ಪ, ವೀರಪ್ಪ ವಾಬನ್ನವರ, ಹನಮಂತ ಜಡಗಣ್ಣವರ, ವಿಠ್ಠಲ ದೊಡಮನಿ, ಸುಧೀರ ಸೀಮಿಕೇರಿ ಸೇರಿದಂತೆ ಇತರರು ಇದ್ದರು.