ನವದೆಹಲಿ: ಯಾವುದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದಾಗ ಅದರ ನಕಲು ಮಾಡಿ ಮಾರಾಟ ಮಾಡುವುದು ಅಪರಾಧ ಜಗತ್ತಿನಲ್ಲಿ ಹೊಸ ಬೆಳವಣಿಗೆ ಅಲ್ಲ. ಇಂಥದ್ದೇ ಆತಂಕಕಾರಿ ಬೆಳವಣಿಗೆಯೊಂದಲ್ಲಿ ಸಿಮೆಂಟ್‌ನಲ್ಲಿ ಬೆಳ್ಳುಳ್ಳಿ (Cement Garlic) ಪ್ರತಿಕೃತಿ ಮಾಡಿ, ಅದನ್ನು ನಿಜವಾದ ಬೆಳ್ಳುಳ್ಳಿ ಜೊತೆ ಮಾರಾಟ ಮಾಡುತ್ತಿರುವ ಪ್ರಕರಣ ಮಹಾರಾಷ್ಟ್ರದ ಹಲವು ಕಡೆ ಬೆಳಕಿಗೆ ಬಂದಿದೆ.
Join Our Telegram: https://t.me/dcgkannada
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆ.ಜಿ.ಗೆ 300-350 ರು. ತಲುಪಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಮಾರುಕಟ್ಟೆಗಳಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟದ ಪ್ರಕರಣಗಳು ಪತ್ತೆಯಾಗಿವೆ. ಆಕೋಲಾದಲ್ಲಿ ಬಿಕರಿಗೆ ಇಟ್ಟಿದ್ದ ನೈಜ ಬೆಳ್ಳುಳ್ಳಿ ನಡುವೆ ನೈಜ ಬೆಳ್ಳುಳ್ಳಿಯನ್ನೇ ಹೋಲುವ ಸಿಮೆಂಟ್ ಬೆಳ್ಳುಳ್ಳಿ (Cement Garlic) ಪತ್ತೆಯಾಗಿದೆ. ಸಿಮೆಂಟ್ ಬಳಸಿ ಪ್ರತಿಮೆಗಳನ್ನು ನಿರ್ಮಿಸುವಂತೆ ಬೆಳ್ಳುಳ್ಳಿ ಪ್ರತಿಕೃತಿ ಮಾಡಿ ಅದಕ್ಕೆ ಬಿಳಿಯ ಬಣ್ಣ ಹಚ್ಚಲಾಗಿದೆ.
ಸುಭಾಷ್ ಪಾಟೀಲ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಮಾರುಕಟ್ಟೆಯಿಂದ 250 ಗ್ರಾಂ ಬೆಳ್ಳುಳ್ಳಿ ಖರೀದಿಸಿ ಮನೆಗೆ ತಂದಿದ್ದರು. ಮನೆಯಲ್ಲಿ ಬೆಳ್ಳುಳ್ಳಿ ಸಿಪ್ಪೆ ಬಿಡಿಸಲು ಹೋದಾಗ ಆಗಿಲ್ಲ. ಬಳಿಕ ಚಾಕುವಿನಿಂದ ಕತ್ತರಿಸಿದಾಗ ಒಳಗೆ ಸಿಮೆಂಟ್ ಕಂಡುಬಂದಿದೆ. ಇದೇ ರೀತಿ ಹಲವು ಗ್ರಾಹಕರು ತಾವು ವಂಚನೆಗೆ ಒಳಗಾಗಿದ್ದರ ಕುರಿತು ಮಾಹಿತಿ ಹಂಚಿ ಕೊಂಡಿದ್ದಾರೆ.
ಇದನ್ನೂ ಓದಿ: Rape case: ಕರುನಾಡಿನಲ್ಲಿ ಮತ್ತೊಂದು ಕುಕೃತ್ಯ.. ತಾಯಿ ಕೊಲೆಗೈಯುವಾಗಿ ಹೆದರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ..!
ನೈಜ ಬೆಳ್ಳುಳ್ಳಿ ಜೊತೆಗೆ ಈ ನಕಲಿ ಬೆಳ್ಳುಳ್ಳಿ ಸೇರಿಸುವಮೂಲಕ ತೂಕ ಹೆಚ್ಚಿಸುವ ತಂತ್ರಕ್ಕೆ ವ್ಯಾಪಾರಿಗಳು ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಖರೀದಿಸಿದ ಹಲವು ವ್ಯಕ್ತಿಗಳು ನಕಲಿ ಬೆಳ್ಳುಳ್ಳಿ ಒಡೆದಾಗ ಒಳಗಿನಿಂದ ಸಿಮೆಂಟ್ ಪುಡಿ ಉದುರುತ್ತದೆ.