ಬಸವ ಬಾಲಭಾರತಿ ಶಾಲೆಯಲ್ಲಿ ದತ್ತಿ ಉಪನ್ಯಾಸ : ಶರಣರ ವಚನಗಳ ಸಂದೇಶ ಪಾಲಿಸೋಣ-ಬಿರಾದಾರ

ಬಸವ ಬಾಲಭಾರತಿ ಶಾಲೆಯಲ್ಲಿ ದತ್ತಿ ಉಪನ್ಯಾಸ : ಶರಣರ ವಚನಗಳ ಸಂದೇಶ ಪಾಲಿಸೋಣ-ಬಿರಾದಾರ

ಮುದ್ದೇಬಿಹಾಳ : ಬಸವಾದಿ ಶರಣರು ನಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಮಾರ್ಗದರ್ಶನವನ್ನು ವಚನಗಳಲ್ಲಿ ನೀಡಿದ್ದು ಅವುಗಳನ್ನು ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಢವಳಗಿ ಬಸವ ಬಾಲಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಸಿದ್ಧನಗೌಡ ಬಿರಾದಾರ ಹೇಳಿದರು.

ತಾಲ್ಲೂಕು ಢವಳಗಿ ಬಸವ ಬಾಲಭಾರತಿ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್,ಯುವ ಘಟಕ ಹಾಗೂ ಕದಳಿ ವೇದಿಕೆ ಆಶ್ರಯದಲ್ಲಿ ಲಿಂ.ಯುಮುನಾಬಾಯಿ ಕಲಕೇರಿ, ದಿ.ಎಚ್.ಆರ್.ಕಲಕೇರಿ ಹಾಗೂ ಗಿರಿಜಾಬಾಯಿ ಕಲಕೇರಿ ಅವರ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣರು ಸಮಾಜದಲ್ಲಿ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀವಂತ ಇರುವ ಅನಿಷ್ಟ ಆಚರಣೆಗಳನ್ನು ತೊಡೆದು ಹಾಕಲು ನಿತ್ಯವೂ ನಾವು ಶರಣರ ವಚನಗಳನ್ನು ಅಧ್ಯಯನ ಮಾಡಬೇಕು.ದಿ.ಎಚ್.ಆರ್.ಕಲಕೇರಿ ಅವರು ಶಿಕ್ಷಕರಾಗಿದ್ದುಕೊಂಡು ಶರಣ ತತ್ವವನ್ನು ಅನುಸರಿಸಿದವರು.ಅವರ ಪುತ್ರ ಐಎಎಸ್ ಉತ್ತೀರ್ಣರಾಗಿ ದೇಶದ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವುದನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರಿಗೆ ದೈವ ಕರುಣಿಸಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ಸಿ.ಜಿ.ನಾಗರಾಳ, ಆಯುರ್ವೇದ ವೈದ್ಯ ರಾಜಶೇಖರ ಚಿರ್ಚನಕಲ್ ಮಾತನಾಡಿ, ಕಲಕೇರಿ ಅವರ ಜೀವನ ಹಾಗೂ ಆಯುರ್ವೇದದಿಂದ ಆಗುವ ಪ್ರಯೋಜನಗಳ ಅರಿವು ಮೂಡಿಸಿದರು.ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ್, ಕಾರ್ಯದರ್ಶಿ ಜಿ.ಎಸ್.ಕೋರಿ, ಬಾಪುಗೌಡ ಪಾಟೀಲ್, ಮಲ್ಲಿಕಾರ್ಜುನ ಕೋರಿ,ಮಡಿವಾಳಪ್ಪಗೌಡ ಬಿರಾದಾರ,ಶಂಕರಗೌಡ ಬಿರಾದಾರ, ಕದಳಿ ವೇದಿಕೆ ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ಮಹಾದೇವಿ ಕಂಠಿ, ಭಾರತಿ ಪಾಟೀಲ್ ,ಶಾಲೆಯ ಮಖ್ಯಗುರು ರಮೇಶ ಮೂಲಿಮನಿ ಮೊದಲಾದವರು ಇದ್ದರು.ನಾನಾಗೌಡ ಕೊಣ್ಣೂರ ಬಸವಭಾವ ಪೂಜೆ ಮಾಡಿದರು.ಎಸ್.ಎ.ಬೇವಿನಗಿಡದ ಸ್ವಾಗತಿಸಿದರು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ