Come tomorrow Adapurakka.. Rajugowda Patil rants in one sentence

ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತ್ತಿದ್ದೇನೆ.. ಬಾ ನಾಳೆ ಆದಾಪೂರಕ್ಕ.. ಏಕ ವಚನದಲ್ಲಿಯೇ ರಾಜುಗೌಡ ಪಾಟೀಲ್ ವಾಗ್ದಾಳಿ (ವಿಡಿಯೋ ನೋಡಿ)

ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತ್ತಿದ್ದೇನೆ.. ಬಾ ನಾಳೆ ಆದಾಪೂರಕ್ಕ.. ಏಕ ವಚನದಲ್ಲಿಯೇ ರಾಜುಗೌಡ ಪಾಟೀಲ್ ವಾಗ್ದಾಳಿ (ವಿಡಿಯೋ ನೋಡಿ)

ಇಳಕಲ್: “** ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತ್ತಿದ್ದೇನೆ” ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ಮಗನಾದ ರಾಜುಗೌಡ ಪಾಟೀಲ್ ಅವರು ಸವಾಲು ಹಾಕಿದರು.

Join Our Telegram: https://t.me/dcgkannada

ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ “ಕಿಲಾಡಿ ರಂಗಣ್ಣ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

“ಇಂದು ನಾನು ರಾಜಕೀಯ ಮಾತನಾಡಲು ಬಂದಿರಲಿಲ್ಲ. ಆದರೆ, ಇಳಕಲ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ನಮ್ಮ ತಂದೆಯವರಿಗೆ ದೊಡ್ಡನಗೌಡ ನೀ ದಡ್ಡ ಎಂದು ನಿಂದಿಸಿದ ಕಾರಣ ರಾಜಕೀಯ ಮಾತನಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ” ಎಂದು ಮಾತು ಆರಂಭಿಸಿದರು.

“ನಾವು ಇಳಕಲ್ ನಲ್ಲಿ ಇರುವವರು. ಬಾಯಿಗೆ ಬಂದಂಗ ಮಾತನಾಡಿದರೆ ಸುಮ್ಮನೆ ಕೂರಲು ಆಗಲ್ಲ. ಇನ್ನು ಮುಂದೆ ನೀ ಬೊಗಳು.. ನಾನು ನೋಡ್ತಿನಿ…” ಎಂದು ಎಚ್ಚರಿಕೆ ರೀತಿ ಮಾತನಾಡಿದರು.

“ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಬಾಯಿಗೆ ಬಂದಂಗ ಮಾತನಾಡುತ್ತಾ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿಯಾ? ನಾಳೆ‌ ಚಿಕ್ಕ ಆದಾಪೂರ ಗ್ರಾಮಕ್ಕೆ ಬರ್ತಿಯಲ್ಲ… ಬಾ.. ಏನು ಮಾಡ್ತಿ ನೋಡ್ತಿವಿ” ಎಂದು ಗುಡುಗಿದರು.

ವಾಗ್ವಾದಕ್ಕೆ ಕಾರಣ ಏನು?

ಇಳಕಲ್ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಂತರ ಶಾಸಕರು ಮತ್ತು ಮಾಜಿ‌ ಶಾಸಕರ ನಡುವಿನ ವಾಕ್ಸಮರ ಜೋರಾಗಿದೆ. ಈಗ ಮಾಜಿ ಶಾಸಕ ದೊಡ್ಡನಗೌಡ ಅವರ ಮಗನೂ ಮಾತಿನ ಮಲ್ಲ ಯುದ್ಧಕ್ಕೆ ಮತ್ತೆ ಪ್ರವೇಶವನ್ನು ಚಿಕ್ಕ ಆದಾಪೂರ ಗ್ರಾಮದಿಂದ‌ ಮಾಡಿದ್ದಾರೆ.

ಬಿಜೆಪಿ ನಾಯಕತ್ವ ಯಾರದ್ದು?

ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೂ ಹೀಗೆ ಮಾತಿನ ಯುದ್ಧ ನಡೆಸಿದ್ದ ಕಾಶಪ್ಪನವರ ಮತ್ತು ದೊಡ್ಡನಗೌಡ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದರು. ಈಗ ತಾಲೂಕು ಬಿಜೆಪಿ ನಾಯಕತ್ವ ಚರ್ಚೆ ಜೋರಾಗಿರುವಾಗಲೇ ಮಾಜಿ ಶಾಸಕರು ತಮ್ಮ ಮಗನನ್ನು ಮತ್ತೆ ಮುನ್ನೆಲೆಗೆ ತರಲು ಮುಂದಾಗಿದ್ದಾರಾ ಎಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಏತನ್ಮಧ್ಯೆ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿಸಿದ ನಂತರ ಎಸ್. ಆರ್. ನವಲಿಹಿರೇಮಠ ಅವರೂ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿ ನಾಯಕತ್ವ ಯಾರ ಬಳಿ ಉಳಿಯುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

Latest News

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಮುದ್ದೇಬಿಹಾಳ : ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ತಾವು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಮ್ಮ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲೂಕಾ ದಸ್ತು ಬರಹಗಾರರ ಸಂಘದ ನೂತನ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು.

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಮುದ್ದೇಬಿಹಾಳ : ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ಮುದ್ದೇಬಿಹಾಳ : ಗ್ರಾಮದ ದೇವತೆ ಜಾತ್ರೆಯ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಮುದ್ದೇಬಿಹಾಳ : ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ.12 ರಂದು ನಡೆಸಲು ಊರಿನ ದೈವದವರು ನಿರ್ಣಯ ಕೈಗೊಂಡಿದ್ದಾರೆ. ಪಟ್ಟಣದ ಕುಂಬಾರ ಓಣಿಯಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಕುರಿತ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ವೇ.ಆಯ್.ಬಿ.ಹಿರೇಮಠ ಮಾತನಾಡಿ, ಆ.12 ರಂದು ದೇವರನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು,9ಕ್ಕೆ ಪಿಲೇಕೆಮ್ಮ ದೇವಸ್ಥಾನದಿಂದ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಮಾದರಿ ಎಸ್.ಸಿ.ಎಸ್.ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿತ್ಯವೂ ವಿದ್ಯಾರ್ಥಿಗಳ ಓಡಾಟಕ್ಕೆ ನಗರ ಸಾರಿಗೆ ಬಸ್‌ನ್ನು ಮಂಗಳವಾರದಿಂದ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಸ್.ಎಲ್.ಪಾಟೀಲ್ ತಿಳಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜಿಗೆ ಸುಮಾರು 1.50 ಕಿ.ಮೀ ದೂರವಿದ್ದು ವಿದ್ಯಾರ್ಥಿಗಳು, ಉಪನ್ಯಾಸಕರ ಓಡಾಟಕ್ಕೆ ಸಮಸ್ಯೆಯಾಗಿದ್ದನ್ನು ಸಾರಿಗೆ ಘಟಕದ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ನಗರ ಸಾರಿಗೆ ಬಸ್ ಆರಂಭಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು