ಬೆಂಗಳೂರು: ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಲೇಬೇಕು ಎಂದು ಕುತಂತ್ರ ಹೆಣೆಯಲಾಗುತ್ತಿದ್ದು, ನಾನೂ ಎಲ್ಲದಕ್ಕೂ ಸಿದ್ಧನಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗಂಭೀರ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನೂ ಇಶ್ಯು ಇಲ್ಲದೇ ಇವರು ಸಿಎಂ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ದೋಸ್ತಿ ನಾಯಕರ ಪಾದಯಾತ್ರೆ ಬಗ್ಗೆ ಕುಟುಕಿದ ಡಿಕೆಶಿ ಅವರು, ಪಾದಯಾತ್ರೆಯಲ್ಲಿ ಏನಾದ್ರೂ ಸದ್ದು ಇದೆಯಾ?.. ಸುಮ್ಮನೇ ಹೋಗ್ತಾ ಇದ್ದಾರೆ. ಸಿಎಂ ಹಾಗೂ ನನ್ನ ವಿರುದ್ಧ ದಾಖಲೆಗಳಿಲ್ಲದೇ ವಿಪಕ್ಷದವರು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮಚ್ಚಿನಿಂದ ಹೊಡೆದಾಡಿಕೊಂಡು ಸತ್ತ ನವಜೋಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮೂರನೇ ವ್ಯಕ್ತಿ ಕೈವಾಡ ಶಂಕೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅವರ ಕುಟುಂಬದ ರಕ್ಷಣೆಗೆ ಅವರು,
(ದೇವೇಗೌಡರು) ಹೋಗಲೇ ಬೇಕಲ್ಲವಾ? ಅಷ್ಟೇ ಅಲ್ಲದೆ, ನಮ್ಮ ವಿರುದ್ಧ ಪಟ್ಟಿ ಕೊಡುವುದಕ್ಕೆ ಹೋಗಿರಬಹುದು ಎಂದು ವ್ಯಂಗ್ಯವಾಡಿದರು.
ದೇವೇಗೌಡರ ಕುಟುಂಬದ ದಾಖಲೆ ಬಿಚ್ಚಿಡುವ ಕೆಲಸ ಮಾಡಲೇಬೇಕಾಗುತ್ತದೆ. ಇದಕ್ಕೆಲ್ಲ ಒಳ್ಳೆಯ ಸಮಯ, ಮುಹೂರ್ತ ಬೇಕು. ಶುಭ ವಾರ, ಶುಭ ನಕ್ಷತ್ರ ನೋಡಬೇಕಾಗುತ್ತದೆ. ಮೊದಲು ಅವರಿಗೆ ಹೇಳಿದ್ದೇವೆ, ನಮ್ಮದೇನಜದೆ ಬಿಚ್ಚಿಡಿ, ನಿಮ್ಮದು ಬಿಚ್ಚಿ. ಟಿವಿಯಲ್ಲಿ ಬೇಡ, ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.