ಮಂಡ್ಯ: ವ್ಯಕ್ತಿಯೊಬ್ಬರಿಗೆ ವಂಚಕರು ಯುವತಿಯ ಸೋಗಿನಲ್ಲಿ ಫೋಟೋ ಕಳಿಸಿ ಮದುವೆಯಾಗುವುದಾಗಿ ಲಕ್ಷಾಂತರ ರೂಪಾಯಿ ಲಪಟಾಯಿಸಿರುವ ಘಟನೆ (Cyber crime) ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ.
Join Our Telegram: https://t.me/dcgkannada
ಅರ್ಚಕನಾಗಿ ಕೆಲಸ ಮಾಡಿಕೊಂಡಿರುವ ವಿಜಯ್ ಕುಮಾರ್ ಮೋಸ ಹೋದ ವ್ಯಕ್ತಿ. ಅವರು ಸೈಬರ್ ಕ್ರೈಂ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.
ಪಾಂಡವಪುರದ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯ್ ಕುಮಾರ್ ಗೆ ಫೇಸ್ ಬುಕ್ ಮೂಲಕ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಆಕೆಯ ಪ್ರೊಫೈಲ್ ಫೋಟೋ ಹಾಗೂ ಇತರೆ ವಿವರಗಳನ್ನು ನೋಡಿ ವಿಜಯ್ ಮೋಸ ಹೋಗಿದ್ದಾರೆ. ಆಕೆಯೂ ಸಹ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಳಿಕ ಪ್ರೇಮ ನಿವೇದನೆ ಮಾಡಿಕೊಂಡಿದ್ದಳು!
ಬಳಿಕ ತಾನು ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದು ತನಗೆ ಫೀಸ್, ವಸತಿ ಹಾಗೂ ಊಟಕ್ಕೆ ಬೇಕೆಂದು ಹಣ ಪೀಕಲು ಶುರು ಮಾಡಿದ್ದಾಳೆ. ಹೀಗೆ, ಹಂತಹಂತವಾಗಿ (Cyber crime)1.38 ಲಕ್ಷ ರೂಪಾಯಿ ಕೊಟ್ಟು ವಿಜಯ್ ಕುಮಾರ್ ಕೈ ಖಾಲಿ ಮಾಡಿಕೊಂಡಿದ್ದರು.
ಇದನ್ನೂ ಓದಿ: Viral Video: ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನ..! ಕಾಮಾಂಧನನ್ನು ತಿವಿದು ಬಿಸಾಕಿದ ಕಾಮಧೇನು..! (ವಿಡಿಯೋ)
ತಾನುಬ್ಬಳು ಅನಾಥ ಹುಡುಗಿಯಾಗಿದ್ದು, ತನಗೆ ತಂದೆತಾಯಿ ಯಾರೂ ಇಲ್ಲ ಎಂದು ಸುಳ್ಳು ಹೇಳಿದ್ದ ವಂಚಕಿ, ನಿಮ್ಮನ್ನೇ ಮದುವೆಯಾಗುತ್ತೇನೆ ಎಂದು ವಿಜಯ್ ಕುಮಾರ್ ಅವರಿಗೆ ನಂಬಿಸಿದ್ದಾಳೆ.
ಜೊತೆಗೆ, ತಾನು ಓದು ಮುಗಿದ ಬಳಿಕ ನಿಮ್ಮ ಎಲ್ಲ ಹಣ ವಾಪಸ್ ಸಹ ನೀಡುತ್ತೇನೆ ಎಂದು ಅವರ ಬಳಿ ಸಾಲ ಮಾಡಿಸಿ ಹಾಗೂ ಅವರ ದ್ವಿಚಕ್ರ ವಾಹನ ಮಾರಿಸಿ ಆ ಹಣವನ್ನೂ ಪಡೆದಿದ್ದಾಳೆ.
ಈ ಪ್ರಕ್ರಿಯೆ ಕೊನೆಗಾಣದಿದ್ದಾಗ ತಾನು ಮೋಸ ಹೋಗಿರುವುದು ವಿಜಯ್ ಕುಮಾರ್ ಅವರಿಗೆ ಅರಿವಾಗಿತ್ತು. ಹೀಗಾಗಿ, 9676345605 ನಂಬರ್ ನಿಂದ ಕರೆ ಮಾಡಿ ತನಗೆ ವಂಚಿಸಿರುವ ವ್ಯಕ್ತಿಯಿಂದ ನ್ಯಾಯ ಕೊಡಿಸಬೇಕೆಂದು ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ.
ತಾನು ಬೆಂಗಳೂರಿನಲ್ಲಿರುವುದಾಗಿ ಹೇಳಿರುವ ಯುವತಿಯ ಸುಳಿವು ಹೈದರಾಬಾದ್ ನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಸೈಬರ್ ಕ್ರೈಂ ವಿಭಾಗದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.