ತಾಜಮಹಲ್, ಕೆಂಪುಕೋಟೆ, ಇಡೀ ದೇಶ ವಕ್ಫ್ ಆಸ್ತಿ ಎಂದು ಘೋಷಿಸಿ: ಕೋರ್ಟ್ ಛಿಮಾರಿ

ತಾಜಮಹಲ್, ಕೆಂಪುಕೋಟೆ, ಇಡೀ ದೇಶ ವಕ್ಫ್ ಆಸ್ತಿ ಎಂದು ಘೋಷಿಸಿ: ಕೋರ್ಟ್ ಛಿಮಾರಿ

ಜಾಬಲಾಪುರ: ಮಧ್ಯಪ್ರದೇಶದ ಬುರಹಾನಪುರ ಜಿಲ್ಲೆಯ ಕೆಲವು ಪ್ರಸಿದ್ಧ ಸ್ಮಾರಕಗಳು ತನಗೆ ಎಂದು ರಾಜ್ಯದ ವಕ್ಫ್ ಮಂಡಳಿ 11 ವರ್ಷಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ. ಆ ಸ್ಥಳಗಳಿಂದ ಜಾಗ ಖಾಲಿ ಮಾಡುವಂತೆ ತಾಕೀತು ಮಾಡಿದೆ.

ಪ್ರಕರಣದ ವಿಚಾರಣೆ ವೇಳೆ ವಕ್ಫ್ ಮಂಡಳಿಯ ವಕೀಲರ ವಿರುದ್ಧ ಹರಿಹಾಯ್ದ ನ್ಯಾಯಪೀಠ, ‘ತಾಜ್ ಮಹಲ್, ಕೆಂಪುಕೋಟೆಯನ್ನೂ ವಕ್ಫ್ ಆಸ್ತಿ ಎಂದು ಘೋಷಿಸಿಬಿಡಿ. ನಿಮಗೆ ಮನಸ್ಸಿಗೆ ಬಂದಾಗ ಯಾವುದೇ ಆಸ್ತಿ ನಮ್ಮದೆಂದು ಘೋಷಿಸಿ ಬಿಡುತ್ತೀರಿ. ನಾಳೆ ನೀವು ಇಡೀ ದೇಶ ವಕ್ಫ್ ಆಸ್ತಿ ಎನ್ನುತ್ತೀರಿ. ಆಗ ಏನು ಮಾಡುವುದು? ನೀವು ಘೋಷಣೆ ಮಾಡಿ ಆಸ್ತಿ ನಮ್ಮದು ಎನ್ನುತ್ತೀರಿ. ಹೀಗೆ ಮಾಡಲು ಬಿಡಲ್ಲ’ ಎಂದು ಕಿಡಿಕಾರಿತು.

ಬುರ್ನಾನಪುರ ಕಟ್ಟೀಯೊಳಗೆ ಇರುವ ಅರಮನೆ, ಶಾ ಶುಜಾ, ನಾಡಿರ್‌ಶಾ ಅವರ ಗೋರಿ ಹಾಗೂ ಬೀಬಿ ಸಾಹೀಬ್ ಮಸೀದಿ ತಮಗೆ ಸೇರಿದ್ದು ಎಂದು 2013ರ ಜುಲೈ 19ರಂದು ಮಧ್ಯಪ್ರದೇಶ ವಕ್ಫ್ ಮಂಡಳಿ ಆದೇಶ ಹೊರಡಿಸಿತ್ತು.

ಇದರ ವಿರುದ್ಧ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸ್ಮಾರಕಗಳು ಕೇಂದ್ರ ಸರ್ಕಾರದ ಆಸ್ತಿಯಾಗಿವೆ. 1904ರ ಪುರಾತನ ಸ್ಮಾರಕ ಸಂರಕ್ಷಣಾ ಕಾಯ್ದೆಯಡಿ ಇವನ್ನು ತಾನು ಸಂರಕ್ಷಣೆ ಮಾಡುತ್ತಿರುವುದಾಗಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಾದಿಸಿತ್ತು. ಈ ವಾದಕ್ಕೆ ಮನ್ನಣೆ ನೀಡಿರುವ ಹೈಕೋರ್ಟ್‌ ನ್ಯಾ। ಜಿ.ಎಸ್. ಆಹ್ಲುವಾಲಿಯಾ ನೇತೃತ್ವದ ಏಕಸದಸ್ಯ ಪೀಠ, ವಕ್ಫ್ ಮಂಡಳಿ ಆದೇಶವನ್ನು ರದ್ದುಗೊಳಿಸಿದೆ.

ಏತನ್ಮಧ್ಯೆ ಇಂದು ವಕ್ಫ್ ಬೋರ್ಡ್ ನ 40 ನಿಯಮಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮಸೂದೆ ಮಂಡಿಸಲಿದೆ.

Latest News

ಮಾಜಿ ಶಾಸಕ ನಡಹಳ್ಳಿ ಆಗ್ರಹ:                                                           ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮಾಜಿ ಶಾಸಕ ನಡಹಳ್ಳಿ ಆಗ್ರಹ: ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ಸೆ.11 ರಂದು ಪೊಲೀಸರಿಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡ ಪವಾಡ ಬಸವೇಶ್ವರ ಸಂಸ್ಥೆಯ ವತಿಯಿಂದ ಸೆ.11 ರಂದು ಬೆಳಗ್ಗೆ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಸೆ.9 ರಂದು ಬರಪರಿಸ್ಥಿತಿ ಅವಲೋಕನಕ್ಕೆ ಟಾಸ್ಕಫೋರ್ಸ್ ಸಭೆ

ಸೆ.9 ರಂದು ಬರಪರಿಸ್ಥಿತಿ ಅವಲೋಕನಕ್ಕೆ ಟಾಸ್ಕಫೋರ್ಸ್ ಸಭೆ

ಮುದ್ದೇಬಿಹಾಳ : ಬರಪರಿಸ್ಥಿತಿ,ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ಚರ್ಚೆ ನಡೆಸಲು ಸೆ.9 ರಂದು ಬೆಳಗ್ಗೆ 9 ಕ್ಕೆ ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷರು, ಶಾಸಕ ಸಿ.ಎಸ್.ನಾಡಗೌಡ ಅಧ್ಯಕ್ಷತೆಯಲ್ಲಿ ಟಾಸ್ಕಫೋರ್ಸ್ ಸಭೆ ನಿಗದಿಪಡಿಸಲಾಗಿದೆ. ಟಾಸ್ಕಫರ‍್ಸ್ ಸಭೆಗೆ ಎಲ್ಲ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ತಹಶೀಲ್ದಾರ್‌ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ಷೇತ್ರದ ಅವಳಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡುವಂತೆ ಮಾಜಿ ಶಾಸಕ ಎ.ಎಸ್.ಪಾಟೀಲ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಶಾಸಕ ನಾಡಗೌಡರು ಹಸಿ ಸುಳ್ಳುಗಳ ಸರದಾರರು-ನಡಹಳ್ಳಿ

ಮುದ್ದೇಬಿಹಾಳ : ಮತಕ್ಷೇತ್ರದ ರೈತರಿಂದ ಆಯ್ಕೆಯಾಗಿರುವ ನೀವು ಅವರ ಬದುಕಿಗೆ ಸಂಕಷ್ಟ ಎದುರಾದಾಗ ಸ್ಪಂದಿಸುವ ಕೆಲಸ ಮಾಡಬೇಕು.ಅದು ಬಿಟ್ಟು ಮೂವ್ವತ್ತು ವರ್ಷಗಳಿಂದ ಹಸಿ ಸುಳ್ಳುಗಳನ್ನೇ ಹೇಳುತ್ತಾ ರಾಜಕಾರಣ ಮಾಡಿಕೊಂಡು ಬಂದಿದ್ದೀರಿ.ಜನ ಇನ್ನು ಮುಂದೆ ನಿಮ್ಮನ್ನು ನಂಬುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ಬರ ಘೋಷಣೆಗೆ ಆಗ್ರಹಿಸಿ ನಡೆದಿರುವ ಬಿಜೆಪಿಯ ಎರಡನೇ ದಿನದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು