ಬೆಂಗಳೂರು: ತರಳುಬಾಳು ಬೃಹನ್ಮಠದ ಆಸ್ತಿ ಕಬಳಿಸುವ ಪ್ರಯತ್ನದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ ಶಿವಮೂರ್ತಿ ಶಿವಾಚಾರ್ಯರ ನಿವೃತ್ತಿ ಹಾಗೂ ಟ್ರಸ್ಟ್ ಡೀಡ್ ವಿಚಾರ ಪ್ರಶ್ನಿಸಿದವರನ್ನು ಕುಡುಕರು ಎಂದು ತೇಜೋವಧೆ ಮಾಡಿದ ಶ್ರೀಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1977ರಲ್ಲಿ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಗಳು ಶ್ರೀ ಮತ್ ಸಾಧು ಸದ್ದರ್ಮ ವೀರಶೈವ ಸಂಘ ನೋಂದಣಿ ಮಾಡಿದ್ದರು. ಶ್ರೀಗಳು 60 ವರ್ಷಕ್ಕೆ ಪೀಠತ್ಯಾಗ ಮಾಡಿ ಅಧಿಕಾರ ಹಸ್ತಾಂತರಿಸಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಕಾರಿಗೆ ಸಿಲುಕಿದ ಶವವನ್ನು 1 ಕಿ.ಮೀ ಎಳೆದೊಯ್ದ ಭೂಪ!
1979ರಲ್ಲಿಇದೇನಿಯಮದಡಿ ಶಿವಮೂರ್ತಿಗಳಿಗೆ ಪಟ್ಟಕಟ್ಟಿದ್ದರು. ನಿಯಮದಂತೆ ಶ್ರೀಗಳು ಒಪ್ಪದಿದ್ದರೂ ಜಗದ್ಗುರುಗಳು ಯಾರಾಗಬೇಕು ಎಂಬುದನ್ನು ಭಕ್ತರು ತೀರ್ಮಾನಿಸಬೇಕು ಎಂದಿದೆ. ಆದರೆ ಶಿವಮೂರ್ತಿಗಳು ಅದಕ್ಕೆ ಅವಕಾಶವಿಲ್ಲದಂತೆ ಭಕ್ತರ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿದರು.