ಮುದ್ದೇಬಿಹಾಳ : ಅನುಮತಿ ಪಡೆದುಕೊಂಡು ಕಳೆದ ನಲವತ್ತು ವರ್ಷಗಳಿಂದ ಮೀನುಗಾರಿಕೆ ನಡೆಸುತ್ತಿದ್ದರೂ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ತಮಗೆ ತೊಂದರೆ ಕೊಡುತ್ತಿದ್ದು ಅವರ ವಿರುದ್ದ ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಬಲದಿನ್ನಿ ಮೀನುಗಾರರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಕೀರ್ತಿ ಚಾಲಕ್ ಅವರಿಗೆ ಈಚೇಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಮೀನುಗಾರರು, ಮೀನುಗಾರಿಕೆ ಇಲಾಖೆ ಅಧಿಕಾರಿ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಬಲದಿನ್ನಿ ಗ್ರಾಮಕ್ಕೆ ಬಂದು ಕಳೆದ 40 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದು ಇರುತ್ತದೆ.ಅದಕ್ಕೆ ಸಂಬAಧಿಸಿದ 50 ಮನೆಗಳು ಮೀನುಗಾರಿಕೆ ಇಲಾಖೆಯಿಂದ ಆಶ್ರಯ ಮನೆಗಳನ್ನು ಪಡೆದಿದ್ದು ಹಕ್ಕುಪತ್ರ ಸಹಿತ ಇರುತ್ತವೆ.100 ಜನ ಮೀನು ಹಿಡಿಯುವವರು ಆಧಾರ್ ಕಾರ್ಡ ಅಧಿಕೃತವಾಗಿ ಪಡೆದುಕೊಂಡಿದ್ದು ಇರುತ್ತದೆ.150 ಜನರು ಭಾರತದ ಚುನಾವಣಾ ಗುರುತಿನ ಚೀಟಿ ಹೊಂದಿದ್ದೇವೆ.ಸರ್ಕಾರದಿAದ 60 ಜನರು ಮೀನು ಹಿಡಿಯುವ ಲೈಸೆನ್ಸ್ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಅಧಿಕಾರಿ ಶರಣಗೌಡ ಬಿರಾದಾರ ಎಲ್ಲ ಮೀನುಗಾರರಿಗೆ ತೊಂದರೆ ಕೊಡುತ್ತಿದ್ದು ಬಡ ಮೀನುಗಾರರ ಸಂಘದ ಅಧ್ಯಕ್ಷರ ಮೇಲೆ ಖೊಟ್ಟಿ ಕೇಸು ದಾಖಲಿಸಿ ಪೊಲೀಸರಿಂದ ಹೊಡೆಸಿ ಜೈಲಿಗೆ ಕಳುಹಿಸಿದ್ದು ಇರುತ್ತದೆ.ಮೀನು ಹಿಡಿಯಲು ಸರ್ಕಾರದಿಂದ ಅನುಮತಿ ಪತ್ರ ಇದ್ದರೂ ಒಂದು ಪುಟ್ಟಿ ಇಂಜನ್‌ಗೆ 5000 ರೂ.ಲಂಚ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಲಾಗಿದೆ.
ಲಂಚ ಕೊಡದೇ ಹೋದರೆ ನಿಮ್ಮ ಅನುಮತಿ ಪತ್ರ ರದ್ದು ಮಾಡುತ್ತೇನೆ ಮತ್ತು ನೀವು ನಮ್ಮ ರಾಜ್ಯ ಬಿಟ್ಟು ಹೋಗಬೇಕು ಎಂದು ರಾಜಕೀಯ ವ್ಯಕ್ತಿಗಳ ಸಹಾಯದಿಂದ ಒತ್ತಡ ಹೇರುತ್ತಿದ್ದಾರೆ. ಸರ್ಕಾರದಿಂದ ಮೀನುಗಾರರಿಗೆ ಬರುತ್ತಿರುವ ಸೌಲಭ್ಯಗಳನ್ನು ಬೇರೊಬ್ಬರಿಗೆ ಹಣ ಪಡೆದುಕೊಂಡು ಮಾರಾಟ ಮಾಡಿದ್ದು ಸಾಕಷ್ಟು ಉದಾಹರಣೆಗಳು ಇದ್ದು ಈ ಅಧಿಕಾರಿ ವಿರುದ್ದ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಗೆ ಬಲದಿನ್ನಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಅಬ್ರಾಹಮು, ಗ್ರಾಪಂ ಸದಸ್ಯ ಅಕ್ಷಯ ನಾಡಗೌಡ,ಮಂಜುನಾಥ ಮುಂದಿನಮನಿ, ರಾಹುಲ ಜಾಗಿರದಾರ,ಗಂಗಾಧರ ಮುಂದಿನಮನಿ, ಯಲ್ಲಪ್ಪ ಮಾದರ, ರಾಜು, ಕೆ.ಎಂ.ಮಾಸೆನು, ಸಿ.ಎಚ್.ಬಂಗಾರಿ, ರಾಜಣ್ಣ ಮೊದಲಾದವರು ಸಹಿ ಮಾಡಿದ್ದಾರೆ.







