ನಾಡಗೌಡರೇ, ನನ್ನ ತಾಳ್ಮೆಗೂ ಮೀತಿ ಇದೆ-ನಡಹಳ್ಳಿ ಹೇಳಿಕೆ ಅನುದಾನ ತಂದಿದ್ದರೆ ದಾಖಲೆ ಬಿಡುಗಡೆ ಮಾಡಿ-ಸವಾಲು

ನಾಡಗೌಡರೇ, ನನ್ನ ತಾಳ್ಮೆಗೂ ಮೀತಿ ಇದೆ-ನಡಹಳ್ಳಿ ಹೇಳಿಕೆ ಅನುದಾನ ತಂದಿದ್ದರೆ ದಾಖಲೆ ಬಿಡುಗಡೆ ಮಾಡಿ-ಸವಾಲು

ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಮತಕತ್ಷೇತ್ರದ ಅಭಿವೃದ್ಧಿಗೆ ಒಂದೇ ಒಂದು ಕೋಟಿ ರೂಪಾಯಿ ಅನುದಾನ ತಂದಿದ್ದರೆ ಅದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹಾಲಿ ಶಾಸಕ ಸಿ.ಎಸ್.ನಾಡಗೌಡರಿಗೆ ಸವಾಲು ಹಾಕಿದ್ದಾರೆ.

ಪಟ್ಟಣದ ದಾಸೋಹ ನಿಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜನ ಆತ್ಮಾವಲೋಕ ಮಾಡಿಕೊಳ್ಳಬೇಕು.ಮುದ್ದೇಬಿಹಾಳ ಅತೀ ಹಿಂದುಳಿದ ತಾಲ್ಲೂಕು ಎಂದು ಗೋವಿಂದರಾವ್ ವರದಿಯಲ್ಲಿ ತಿಳಿಸಲಾಗಿದೆ.ಜಗತ್ತೆಲ್ಲಾ ಅಭಿವೃದ್ದಿ ಹೊಂದಿದರೂ ಮುದ್ದೇಬಿಹಾಳ ಎಲ್ಲಿ ಇರಬೇಕೋ ಅಲ್ಲಿಯೇ ಇರಬೇಕಾಗುತ್ತದೆ.ಇದಕ್ಕಾಗಿ ಜನತೆ ಜಾಗೃತಿಯಾಗದಿದ್ದರೆ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಮಕ್ಕಳ ಶಾಪ ನಿಮಗೆ ತಟ್ಟುತ್ತದೆ.ನಿಷ್ಕಿçಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಹೋದರೆ ಭವಿಷ್ಯದಲ್ಲಿ ನಿಮ್ಮ ಮಕ್ಕಳು ಅನುಭವಿಸುತ್ತಾರೆ ಎಂದು ಹೇಳಿದರು.

ಒಳಚರಂಡಿಯಲ್ಲಿ ನೀವು ಕೂಡುವ ಶೌಚವೇ ನಿಮ್ಮ ಮನೆ ಮುಂದೆ ಚೇಂಬರ್ ಮೂಲಕ ಬುಗ್ಗೆಯಾಗಿ ಉಕ್ಕುತ್ತದೆ.ಅದರ ಸುವಾಸನೆ ತಗೆದುಕೊಳ್ಳುವ ಸ್ಥಿತಿ ನಿಮಗೆ ಬೇಕಾ ಎಂದು ಪ್ರಶ್ನಿಸಿದ ನಡಹಳ್ಳಿ, ನಮ್ಮ ಸರ್ಕಾರದ ಅವಧಿಯಲ್ಲಿ ಟೆಂಡರ್ ಮೂಲಕ ಕೆಲಸ ಕೊಟ್ಟಿದ್ದೇವೆ.ಆದರೆ ಇವರು ಮಾತ್ರ ಎಲ್ಲವೂ ಲ್ಯಾಂಡ್ ಆರ್ಮಿಗೆ ಕೆಲಸ ಕೊಡುತ್ತಿದ್ದಾರೆ.ಸುರೇಶ ನಾಡಗೌಡ ಒಬ್ಬರೇ ಈ ತಾಲ್ಲೂಕು ಆಳುತ್ತಿದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಕಷ್ಟ,ತೊಂದರೆ ಎಂದಾಗ ಸಹಾಯ,ಸಹಕಾರ ಮಾಡಿದ್ದೇನೆ.ಅದನ್ನೇ ಬೇರೊಂದು ಕ್ಷೇತ್ರದಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿದ್ದರೆ ಸಾಯೋತನಕ ನನ್ನನ್ನು ಎಂ.ಎಲ್.ಎ ಮಾಡುತ್ತಿದ್ದರು.ಆದರೆ ನೀವು ಆಯ್ಕೆ ಮಾಡಿ ಕಳಿಸುವ ಜನಪ್ರತಿನಿಧಿ ಜನಪರ,ಬುದ್ಧಿವಂತನಾಗಿದ್ದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ.ಆದರೆ ನಿದ್ದೆ ಮಾಡುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳಿಸಿದ್ದೀರಿ ಎಂದು ಹೇಳಿದರು.

ಮುದ್ದೇಬಿಹಾಳದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 2.86 ಕೋಟಿ ರೂ.ಕೈಕಾಲು ಬಿದ್ದು ಅನುದಾನ ಬಿಡುಗಡೆ ಮಾಡಿಸಿದ್ದೆ.ಆದರೆ ಅದು ಏನಾಯಿತು ಎಂದು ಗೊತ್ತಿಲ್ಲ.ಅದನ್ನು ಪೂರ್ತಿ ಲೂಟಿ ಹೊಡೆದಿದ್ದಾರೆ ಎನ್ನಿಸುತ್ತದೆ.ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿಸಿದ್ದೆ.ಉರ್ದು ಶಾಲೆಯ ಅಭಿವೃದ್ಧಿಗೆ 60 ಲಕ್ಷ ಹಣಕಾಸು ಮಂಜೂರಾತಿ ದೊರೆತಿತ್ತು. ಮುಸಲ್ಮಾನ ಬಂಧುಗಳ ಒಂದೇ ಒಂದು ಓಟು ಹಾಕಲಿಲ್ಲ. ಆದರೆ ಅಭಿವೃದ್ಧಿ ವಿಷಯ ಬಂದಾಗ ಜಾತಿ,ಮತ ಧರ್ಮ ನೋಡದೇ ಸಹಾಯ ಮಾಡಿದ್ದೇನೆ.ಉರ್ದು ಶಾಲೆಯ ಅಭಿವೃದ್ಧಿಗೆ ಕೊಟ್ಟ ಅನುದಾನ ಏನಾಯಿತು ಎಂದು ಮೌನವಾಗಿರುವ ಮುಸ್ಲಿಂ ಸಮಾಜದ ಕಾಂಗ್ರೆಸ್ ಮುಖಂಡರು ನಿದ್ದೆ ಮಾಡುತ್ತಿದ್ದೀರಾ. ನಿಮ್ಮ ನಾಯಕನನ್ನು ಕೊರಳುಪಟ್ಟಿ ಹಿಡಿದು ಕೇಳಿ ಎಂದು ಹೇಳಿದರು.

ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು.ಆದರೆ ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಜೀವನ ಪರ್ಯಂತ ರಾಜಕಾರಣ ಬಿಡುವುದಿಲ್ಲ ಎಂಬುದು ನನಗೆ ಗೊತ್ತಿದೆ.ಅಣ್ಣ,ಕಾಕಾ,ತಮ್ಮ ಎಂದರೆ ಸಾಕು ಕೆಲಸ ಮಾಡಿ ,ಬಿಡಿ ಬೆಂಗಳೂರಲ್ಲಿ ನಿದ್ದೆ ಮಾಡಿದರೂ ಯಾರೂ ಕೇಳುವವರಿಲ್ಲ.ತಾಲ್ಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕು.ಜಾತಿ ಧರ್ಮದ ಆಧಾರದ ಮೇಲೆ ಓಟು ಹಾಕುವುದನ್ನು ಬಿಡಿ.ಪುರಸಭೆ,ಜಿಪಂ, ತಾಪಂ ಚುನಾವಣೆಗಳಲ್ಲಿ ನನ್ನ ಜೊತೆಗೆ ಕೈ ಜೋಡಿಸಬೇಕು.ಜನರು ಎಚ್ಚೆತ್ತುಕೊಳ್ಳಿ ಎಂದು ಕೈ ಮುಗಿದು ಜನರಲ್ಲಿ ವಿನಂತಿಸುತ್ತೇನೆ.ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ ಎಂದು ನಡಹಳ್ಳಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಭು ಕಡಿ, ಸಂಜೀವ ಬಾಗೇವಾಡಿ, ಗಿರೀಶಗೌಡ ಪಾಟೀಲ,ಮದನಸ್ವಾಮಿ ಹಿರೇಮಠ, ಪರಶುರಾಮ ನಾಲತವಾಡ, ಬಸಯ್ಯ ನಂದಿಕೇಶ್ವರಮಠ,ಅಶೋಕ ಚಿನಿವಾರ, ಹುಲಗಪ್ಪ ಕಿಲಾರಟ್ಟಿ, ನಾಗೇಶ ಕವಡಿಮಟ್ಟಿ, ಪುನೀತ ಹಿಪ್ಪರಗಿ, ನಿಖಿಲ ಮಲಗಲದಿನ್ನಿ, ಶಿವು ಬಿರಾದಾರ,ಅನಿಲ ರಾಠೋಡ, ಶಿವು ಲದ್ದಿಮಠ, ಗೌರಮ್ಮ ಹುನಗುಂದ, ಕಾವೇರಿ ಕುಂಬಾರ, ಪ್ರೀತಿ ಕುಂಬಾರ ಮೊದಲಾದವರು ಇದ್ದರು.

ಅವನ್ಯಾವನೋ ಪಟ್ಟಿ ಕೊಡುತ್ತಾ ತಿರುಗಾಡುತ್ತಿದ್ದಾನೆ ; ನಡಹಳ್ಳಿ ಲೇವಡಿ
ಮುದ್ದೇಬಿಹಾಳ ಬಜಾರ್‌ದ ವ್ಯಾಪಾರಸ್ಥರು ರಸ್ತೆ ಧೂಳುಮಯವಾಗಿತ್ತು.ಈಗ ರಸ್ತೆ ಧೂಳುಮುಕ್ತವಾಗಿದೆ. ಅಂಬೇಡ್ಕರ್ ಮೂರ್ತಿ ಸ್ಥಾಪನೆ ಮಾಡಿದ್ದು ಅಲ್ಲಿ ಕೆಲಸ ಮಾಡಿದವರಿಗೆ ಬಿಲ್ ಕೊಟ್ಟಿಲ್ಲ.ನನ್ನ ತಾಳ್ಮೆಗೂ ಮಿತಿ ಇದೆ ನಾಡಗೌಡರೆ ? ಕಾಲ ಹೀಗೆ ಇರಲ್ಲ.ಇಡೀ ಊರು ಹಾಳಾಗಿದೆ.ಪುರಸಭೆ,ಪೊಲೀಸ್ ಠಾಣೆಯಂತೂ ಏನು ಉಳಿದಿಲ್ಲ.ಕಳಪೆ ಕಾಮಗಾರಿ ನಿಲ್ಲಿಸಬೇಕು. ನಾಲತವಾಡ ಭಾಗದಲ್ಲಿ 90 ಸಾವಿರ ರೂ.ಕಂಬದ ಎಸ್ಟಿಮೇಟ್ ಇತ್ತು,ಆದರೆ 10 ಸಾವಿರ ರೂ.ಕಂಬ ಹಾಕಿಸಿದ್ದೀರಿ.ಅವನ್ಯಾವನೋ ಪಟ್ಟಿ ಕೊಡುತ್ತಾ ತಿರುಗಾಡುತ್ತಿದ್ದಾನೆ.ನಾಲತವಾಡ ಕೆಇಬಿಯಿಂದ ಊರೊಳಕ್ಕೆ ಹಾಕಿರುವ ಕಂಬಗಳ ಗುಣಮಟ್ಟ ನೋಡಿ ಎಂದು ನಡಹಳ್ಳಿ ಹೇಳಿದರು.

Latest News

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ

ಅಂತರ್‌ರಾಜ್ಯ ಕಳ್ಳರ ಬಂಧನ :                                       ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಈವರೆಗೆ ಶೇ.82.47ರಷ್ಟು ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮೇಲ್ವಿಚಾರಕರು,ಬಿಎಲ್‌ಓಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗೈರು ಹಾಜರಿ 1483, ಶಾಶ್ವತವಾಗಿ ಸ್ಥಳಾಂತರಗೊAಡವರು 16331,8505 ಮತದಾರರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಬಿಎಲ್‌ಓಗಳ ಸಹಕಾರದಿಂದ ಉತ್ತಮ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಆ.8 ರಿಂದ ಸೆ.26ರವರೆಗೆ ಕೈಗೊಳ್ಳಲಿದ್ದಾರೆ ಎಂದು ಮಹೋತ್ಸವ ಸಮೀತಿ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ ಹೇಳಿದರು. ಪಟ್ಟಣದ ಪಟ್ಟಣದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಪ್ತಮ ಚಾತುರ್ಮಾಸ್ಯದ ಕುರಿತು ಅವರು ವಿವರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ