ನಂದವಾಡಗಿ: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಫೌಂಡೇಶನ್, ಗ್ರಾಮ ಪಂಚಾಯತ ನಂದವಾಡಗಿ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ ನಂದವಾಡಗಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. (Education)
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಂದವಾಡಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಮ್ಮಾರ, ಮಕ್ಕಳ ಸಂತಸ ಕಲಿಕೆಯಲ್ಲಿ ಹಾಗೂ ಸೃಜನಾತ್ಮಕತೆಗಾಗಿ ಗಣಿತ ವಿಷಯವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಗಣಿತ ವಿಷಯವು ಸುಲಭ, ಆಸಕ್ತಿದಾಯಕ ವಿಷಯ, ಮಕ್ಕಳ ಗಣಿತ ಕಲಿಕಾ ಮಟ್ಟ ಗುರುತಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮವು ಸಹಕಾರಿಯಾಗುತ್ತದೆ ಎಂದು ಶಾಲಾ ಪ್ರಭಾರಿ ಮುಖ್ಯ ಗುರುಮಾತೆ ವಿ ಬಿ ಕುಂಬಾರ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಮೈಬುಸಾಬ ಗುಡಿಹಾಳ, ರಮೇಶ ಭಜಂತ್ರಿ, ಎಸ್ ಡಿ ಎಂ ಸಿ ಸದಸ್ಯರು, ಮುದಕಪ್ಪ ಪಾಲ್ತಿ, ಚೌಡಪ್ಪ ಲೆಕ್ಕಿಹಾಳ ಅತಿಥಿಗಳಾಗಿ ಭಾಗವಹಿಸಿದ್ದರು.
ಮಕ್ಕಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಿಜಯಲಕ್ಷ್ಮೀ ನಾಗಲೋಟಿ ಸ್ಪರ್ಧೆಯ ಕುರಿತು ಮಾತನಾಡಿ, ವಿಜೇತರಾದ ಮಕ್ಕಳಿಗೆ ಶುಭ ಕೋರಿ ಪುರಸ್ಕಾರ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಾದ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಗಂಗಾ, ಶ್ರೀಕಾಂತ ಮಂಗಳೂರು, ಡಿ ಜಿ ಸಜ್ಜನ, ಎನ್ ಎಂ ಪಾಟೀಲ, ಬಸವರಾಜ ಬಲಕುಂದಿ, ಡಾ ವಿಶ್ವನಾಥ ತೋಟಿ, ಎಂ ಸಿ ನದಾಫ್, ಸಿ ಎಸ್ ಖೈರವಾಡಗಿ, ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ, ಶ್ರವಣಕುಮಾರ ಧೋತ್ರೆ, ಅತಿಥಿ ಶಿಕ್ಷಕ ರಾಜಶೇಖರ ಮೆದಿಕಿನಾಳ, ಉರ್ದು ಶಾಲೆಯ ಅತಿಥಿ ಶಿಕ್ಷಕಿಯರು, ಶಾಲಾ ಮಂತ್ರಿ ಮಂಡಲ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.
ವಿಜೇತರಾದ ಮಕ್ಕಳಿಗೆ ನಂದವಾಡಗಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶಾಂತಕುಮಾರ ಎಸ್ ಕೆ ಅಭಿನಂದನೆ ಸಲ್ಲಿಸಿ, ಶುಭಾಶಯ ಕೋರಿದರು.
ಇದನ್ನೂ ಓದಿ: Love story: ಪ್ರೀತಿಸಲು ಹುಡುಗಿ ಸಿಗಲಿಲ್ಲವೆಂದು ಡೆತ್ ನೋಟ್ ಬರೆದಿಟ್ಟ ಯುವಕ.. ತುಂಗಾ ನದಿಗೆ ಹಾರಿದ್ನಾ..?
ಬಸವರಾಜ ಬಲಕುಂದಿ ನಿರೂಪಿಸಿದರು. ವಿಶ್ವನಾಥ ತೋಟಿ ಸ್ವಾಗತಿಸಿದರು. ಚಂದ್ರಶೇಖರ ಹುತಗಣ್ಣ ವಂದಿಸಿದರು.