ಮುದ್ದೇಬಿಹಾಳ : ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ತಡೆಯಲು (Otoscope) ಓಟೋಸ್ಕೋಪ್ ಮೂಲಕ (ಟಾರ್ಚ್ ಹಾಕಿ) ಅಭ್ಯರ್ಥಿಗಳ ಶ್ರವಣೇಂದ್ರಿಯಗಳನ್ನು ಕೂಲಂಕಷವಾಗಿ ಪರೀಕ್ಷಿಸಲಾಯಿತು.
ಮುದ್ದೇಬಿಹಾಳದ ಅಭ್ಯುದಯ, ಎಸ್.ಎಸ್.ಶಿವಾಚಾರ್ಯ, ಶಾ ಎಸ್.ಪಿ.ಓಸ್ವಾಲ್ ಪ್ರಥಮ ದರ್ಜೆ ಕಾಲೇಜು, ನಾಗರಬೆಟ್ಟದ ಎಕ್ಸಪರ್ಟ್ ಸೈನ್ಸ್ ಕಾಲೇಜು, ಆಕ್ಸ್ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಾಗರಬೆಟ್ಟದ ಪಿಯು ಸೈನ್ಸ್ ಕಾಲೇಜು, ಎಂ.ಜಿ.ಎಂ.ಕೆ, ಜ್ಞಾನಭಾರತಿ, ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ನಡೆಸಲಾಯಿತು.
ಯಾವುದೇ ವಿದ್ಯುನ್ಮಾನ ಯಂತ್ರಗಳಾದ ಬ್ಲೂಟೂತ್ ಹಾಗೂ ಇಯರ್-ಫೋನ್ಗಳನ್ನು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ತಜ್ಞ ವೈದ್ಯರು, ಶ್ರವಣಶಾಸ್ತ್ರಜ್ಞರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ. ಸತೀಶ ತಿವಾರಿ , ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ, ಪಿಎಸ್ ಐ ಸಂಜಯ ತಿಪರಡ್ಡಿ ಸೇರಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಯದಂತೆ ನೋಡಿಕೊಂಡರು.
ಒಟ್ಟು 3532 ಅಭ್ಯರ್ಥಿಗಳು ಮುದ್ದೇಬಿಹಾಳದಲ್ಲಿ ಪರೀಕ್ಷೆ ಬರೆದರು ಎಂದು ಸರ್ಕಾರ. ಪಪೂ ಕಾಲೇಜು ಪ್ರಾಚಾರ್ಯ ಎಸ್.ಎಸ್.ಅಂಗಡಿ ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಪರೀಕ್ಷೆ : ಅಭ್ಯರ್ಥಿಗಳ ಕಿವಿಗಳ ತಪಾಸಣೆಗೆ ಓಟೋಸ್ಕೋಪ್ ಬಳಕೆ..
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಪರೀಕ್ಷೆ : ಅಭ್ಯರ್ಥಿಗಳ ಕಿವಿಗಳ ತಪಾಸಣೆಗೆ ಓಟೋಸ್ಕೋಪ್ ಬಳಕೆ..
Latest News
S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ
ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್ಓಗಳು,ಮೇಲ್ವಿಚಾರಕರು,ಬಿಎಲ್ಎಗಳ ಹಾಗೂ ಮತದಾರರ
ಎನ್ರೋಲ್ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ
ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ
32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ
ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು
ಮುದ್ದೇಬಿಹಾಳ S.I.R ; 1,56,657 ಗಣತಿ ನಮೂನೆ ವಿತರಣೆ
ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವೆಡೆ
ಜು.3 ರಂದು ಮುದ್ದೇಬಿಹಾಳ P.W.D ಇಲಾಖೆ ಮುಂದೆ ಧರಣಿ
ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳ ಕ್ರಾಸ್ದಿಂದ ಹುನಕುಂಟಿ ಗ್ರಾಮದ ಕ್ರಾಸವರೆಗೆ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ ಜು.3 ರಿಂದ ಮುದ್ದೇಬಿಹಾಳ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಆ ಗ್ರಾಮಗಳ ವ್ಯಾಪ್ತಿಯ ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಗೆ ಭದ್ರತೆ ಕೋರಿ ಮನವಿ ಕೊಟ್ಟಿರುವ ನೆರಬೆಂಚಿ, ಕೇಸಾಪೂರ, ಆಲೂರ,ಹುನಕುಂಟಿ ಗ್ರಾಮಗಳ ಗ್ರಾಮಸ್ಥರು, ಮುರಾಳ ಗ್ರಾಮದ ಕ್ರಾಸ್ದಿಂದ ನೆರಬೆಂಚಿ ಮೇಲೆ ಹುನಕುಂಟಿ ಕ್ರಾಸವರೆಗೂ ರಸ್ತೆ
ಸಿಲಿಂಡರ್ ಸೋರಿಕೆ : ತಪ್ಪಿದ ಭಾರೀ ಅನಾಹುತ
ಮುದ್ದೇಬಿಹಾಳ : ರೆಗ್ಯೂಲೆಟರ್ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ದಿನಬಳಕೆ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಅವಟಿ ಗಲ್ಲಿಯಲ್ಲಿ ನಡೆದಿದೆ. ಪಟ್ಟಣದ ಅವಟಿಗಲ್ಲಿ ನಿವಾಸಿ ಹುಸೇನಸಾಬ ನಾಗರಾಳ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.ಸಿಲಿಂಡರ್ ಸೋರಿಕೆಯಾಗುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.ಬೆAಕಿಗೆ ಮನೆಯಲ್ಲಿದ್ದ ಪ್ರಿಡ್ಜ್,ಕುಕ್ಕರ್,ಬಟ್ಟೆಗಳು ಸೇರಿದಂತೆ ದಿನಬಳಕೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಝಳಕ್ಕೆ







