ಮುದ್ದೇಬಿಹಾಳ : ಭಕ್ತಾದಿಗಳ ಸಹಾಯ, ದಾನಿಗಳ ನೆರವಿನಿಂದ ಅಂದಾಜು 70 ಲಕ್ಷ ವೆಚ್ಚದಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ವಸತಿ ಕೊಠಡಿಗಳನ್ನು ಹೊಂದಿರುವ ಯಾತ್ರಿ ನಿವಾಸ ನಿರ್ಮಾಣ ಮಾಡಿದ್ದೇವೆ. ಕಮೀಟಿಯ ಅಧಿಕಾರ ವಹಿಸಿಕೊಂಡ ಒಂದೇ ವರ್ಷದಲ್ಲಿ ಭಕ್ತಾದಿಗಳಿಗೆ ಯಾತ್ರಿ ನಿವಾಸವನ್ನು ಮುಕ್ತಗೊಳಿಸಿದ್ದೇವೆ ಎಂದು ಕುಂಟೋಜಿ ದೇವಸ್ಥಾನ ಕಮೀಟಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹೇಳಿದರು
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ತಾಲ್ಲೂಕಿನ ಕುಂಟೋಜಿ ದೇವಸ್ಥಾನದ ನೂತನ ಯಾತ್ರಿ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಜಾತ್ರೆಯ ಕಾರ್ಯಕ್ರಮಗಳ ವಿವರ ನೀಡಿದರು.
ಯಾತ್ರಾ ನಿವಾಸದಲ್ಲಿರುವ ಕೊಠಡಿಗಳಲ್ಲಿ ದೇಶೀಯ, ವಿದೇಶಿಯ ಮಾದರಿಯ ಶೌಚಾಲಯವನ್ನು ನಿರ್ಮಾಣ ಮಾಡಿದ್ದು ಸ್ನಾನಕ್ಕೆ ಆಧುನಿಕ ಶೈಲಿಯ ವಿನ್ಯಾಸವನ್ನು ರೂಪುಗೊಳಿಸಲಾಗಿದೆ. ಜಾತ್ರೆಗೆ ದೂರು ಊರಿಂದ ಬರುವ ಭಕ್ತರು ನೆಮ್ಮದಿಯಿಂದ ಶುಚಿತ್ವ ಕಾಪಾಡಿಕೊಂಡು ಜಾತ್ರೆಯ ವೈಭವವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಕೆಲವು ದಾನಿಗಳು ಸ್ವಯಂಪ್ರೇರಣೆಯಿಂದ ದೇವಸ್ಥಾನದ ಯಾತ್ರಾ ನಿವಾಸಕ್ಕೆ ಸಹಾಯ, ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು, ಉದ್ಯಮಿದಾರರು, ಜನಪ್ರತಿನಿಧಿಗಳು, ದೇವಸ್ಥಾನ ಕಮಿಟಿ ಪದಾಧಿಕಾರಿಗಳು ನಡೆಸಿಕೊಡಲಿದ್ದಾರೆ.
ಮುಂದಿನ ವರ್ಷ ಬಾಗಲಕೋಟೆಯ ಭಕ್ತರು ದೇವಸ್ಥಾನಕ್ಕೆ ನೂತನ ಕಟ್ಟಿಗೆಯ ರಥ ಮಾಡಿಸಿಕೊಡುವ ಸಂಕಲ್ಪ ಮಾಡಿದ್ದಾರೆ ಎಂದು ತಿಳಿಸಿದರು.
ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಕುಂಟೋಜಿ ಬಸವೇಶ್ವರ ಜಾತ್ರಾ ಮಹೋತ್ಸವ ಸೆ.1 ರಿಂದ 5ರವರೆಗೆ ಹಮ್ಮಿಕೊಂಡಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮಗಳ ಮಾಹಿತಿ ಒದಗಿಸಿದರು.
ದೇವಸ್ಥಾನ ಸಮೀತಿ ಸದಸ್ಯ ಸಂತೋಷ ಬಿರಾದಾರ ಮಾತನಾಡಿ, ಜಾತ್ರೆಗೆ ಬರುವ ಭಕ್ತರಿಗೆ ಸಮಸ್ಯೆಯಾಗದಿರಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿವಿಧ ಊರುಗಳಿಂದ ಬರುವ ಸ್ಪರ್ಧಾಳುಗಳ ಅನುಕೂಲಕ್ಕೆ ಐದು ದಿನವೂ ಪ್ರಸಾದ ಸೇವೆ ಇರಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Love story: ಪ್ರೀತಿಸಲು ಹುಡುಗಿ ಸಿಗಲಿಲ್ಲವೆಂದು ಡೆತ್ ನೋಟ್ ಬರೆದಿಟ್ಟ ಯುವಕ.. ತುಂಗಾ ನದಿಗೆ ಹಾರಿದ್ನಾ..?
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಮಲ್ಲಿಕಾರ್ಜುನ ನಾಟೇಕಾರ, ಆನಂದ ಗಸ್ತಿಗಾರ, ಬಸನಗೌಡ ಬಿರಾದಾರ,ಬಸವರಾಜ ಹುಲಗಣ್ಣಿ,ಸಿದ್ದಪ್ಪ ಹೂಗಾರ, ಮಲ್ಲಿಕಾರ್ಜುನ ಹೆಬ್ಬಾಳ, ಬಸರಕೋಡ ಹೆಸ್ಕಾಂ ಶಾಖಾಧಿಕಾರಿ ಶಿವಪ್ಪ ಆರೇಶಂಕರ, ಸಂಗಯ್ಯ ಮಠ,ವೀರಬಸ್ಸು ಊರಾನ, ಬಸಯ್ಯ ಮಠ ಮೊದಲಾದವರು ಇದ್ದರು.