ಮುದ್ದೇಬಿಹಾಳ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಶನಿವಾರ ಪಟ್ಟಣದ ವಿವಿಧ ಬೀದಿ ಬದಿ ಅಂಗಡಿಗಳಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ತಪಾಸಣೆಯನ್ನು ನಡೆಸಲಾಯಿತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ತಪಾಸಣೆ ನಡೆಸಿದ ಮಾಹಿತಿ ನೀಡಿದ ಆಹಾರ ಸುರಕ್ಷತಾ ಅಧಿಕಾರಿ ಶಂಕರಗೌಡ ಕಂತಲಗಾವಿ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಸೂಚನೆಯಂತೆ ಆ.30 ಹಾಗೂ 31 ರಂದು ತಾಲ್ಲೂಕು ಕೇಂದ್ರಗಳಲ್ಲಿನ ಬೀದಿ ಬದಿಯ ತಿಂಡಿ ತಿನಿಸು ವ್ಯಾಪಾರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ತಪಾಸಣೆ ನಡೆಸುವ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳುವಂತೆ ತಿಳಿಸಿದ್ದರು.ಅದರಂತೆ ತಪಾಸಣೆ ನಡೆಸಲಾಗಿದೆ.
ಮುದ್ದೇಬಿಹಾಳದಲ್ಲಿ 43 ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದು 17 ಕಡೆಗಳಲ್ಲಿ ತಪಾಸಣೆಗೆ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ: Crime news: ಕೋಳೂರು ಕ್ರಾಸ್‌ನಲ್ಲಿ ಉದ್ಯಮಿಯ ಸುಲಿಗೆ.. ಆರೋಪಿಗಳ ಬಂಧನ
17 ಸ್ಥಳಗಳಲ್ಲಿ ಬಳಸುತ್ತಿರುವ ಪದಾರ್ಥಗಳಲ್ಲಿ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಂಗಡಿಕಾರರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.