ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ
ಸೋಮನಾಳ ಗ್ರಾಮದಲ್ಲಿನ ಮೃತ ಪಿಎಸ್ಐ ಪರಶುರಾಮ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ B.Y ವಿಜಯೇಂದ್ರ (B.Y Vijayendra) ತರಾಟೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಘಟನೆ ನಡೆದು 11 ದಿನವಾಗಿದೆ. ಆದ್ರೆ ಅಪರಾಧಿಗಳ ಬಂಧನವಾಗಿಲ್ಲ. ಅಪರಾಧಿ ಯಾರು ಅಂತ ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಶಾಸಕ ಚೆನ್ನರೆಡ್ಡಿಗೆ ಟಾಂಗ್ ಕೊಟ್ಟರು.
Join Our telegram: https://t.me/dcgkannada
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪೊಲೀಸ್ ಅಧಿಕಾರಿಗಳು ಕೂಡಾ ಒತ್ತಡಕ್ಕೊಳಗಾಗಿದ್ದಾರೆ. ಕೂಡಲೇ ಆರೋಪಿಗಳ ಬಂಧನವಾಗಬೇಕು. ಪರಶುರಾಮ್ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು. ಪರಶುರಾಮ್ ಪತ್ನಿಗೆ ಸರ್ಕಾರಿ ನೌಕರಿಯನ್ನು ಕೂಡಲೇ ನೀಡಬೇಕು ಎಂದು ವಿಜಯೇಂದ್ರ (B.Y. Vijayendra) ಆಗ್ರಹಿಸಿದರು.
ರಾಜ್ಯ ಸರ್ಕಾರ ಯಾವ ಪ್ರಕರಣವನ್ನೂ ಗಂಭೀರವಾಗಿ ತಗೆದುಕೊಳ್ಳುತ್ತಿಲ್ಲ. ನಾವು ರಾಜಕೀಯ ತೀಟೆ ತೀರಿಸಿಕೊಳ್ಳಲು ಬಂದಿಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು. ಇಲ್ಲದಿದ್ದರೆ ಪ್ರಕರಣ ಮುಚ್ಚಿ ಹಾಕೋ ಸಾಧ್ಯತೆ ಇದೆ ಎಂದು ಗುಡುಗಿದರು.
ತುಂಗಭದ್ರಾ ಜಲಾಶಯ ಮೂರು ರಾಜ್ಯಗಳ ರೈತರಿಗೆ ಅನುಕೂಲವಾಗುವ ಜಲಾಶಯವಾಗಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳ ರೈತರಿಗೆ ಅನುಕೂಲವಾಗಿದೆ. ಈ ಬಾರಿ ಸಾಕಷ್ಟು ಮಳೆಯಾಗಿ ಜಲಾಶಯ ಭರ್ತಿಯಾಗಿತ್ತು ಎಂದರು.
ಎರಡು ಬೆಳೆ ಬೆಳೆಯಬಹುದು ಎಂದು ರೈತರಿಗೆ ಖುಷಿಯಾಗಿತ್ತು. ನಾನು ಡಿಸಿಎಂ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳದ್ದಕ್ಕೆ ಈ ಘಟನೆಯಾಗಿದೆ. ಆದರೆ ಈ ಘಟನೆಗೆ ಯಾರೂ ಹೊಣೆಗಾರರಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಜಲಸಂಪನ್ಮೂಲ ಸಚಿವರಿಗೆ ಜಲ, ಮತ್ತು ರೈತರ ಬಗ್ಗೆ ಆಸಕ್ತಿ ಇಲ್ಲ. ಅವರಿಗೆ ಸಂಪನ್ಮೂಲದ ಬಗ್ಗೆ ಮಾತ್ರ ಆಸಕ್ತಿ. ಗೇಟ್ ಕಿತ್ತು ಹೋಗಿರೋದಕ್ಕೆ ರಾಜ್ಯ ಸರಕಾರವೇ ಹೊಣೆ ಹೊತ್ತುಕೊಳ್ಳಬೇಕು. ಪ್ರತಿ ಹೆಕ್ಟೇರ್ ಗೆ 50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಚೀಫ್ ಇಂಜಿನಿಯರ್ ನೇಮಕಾತಿ ಮಾಡಿಲ್ಲ. ನಾವು ರಾಜಕೀಯ ಮಾಡೋದಕ್ಕೆ ಅಲ್ಲ. ರಾಜ್ಯ ಸರಕಾರ ರೈತರ ನೆರವಿಗೆ ಬರಬೇಕು ಎಂಬುದು ಒತ್ತಾಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಹೇಳಿದರು.