ಬೆಂಗಳೂರು: ಕೆಆರ್ ಎಸ್ (KRS Dam) ಡ್ಯಾಂನಲ್ಲಿಯೂ ಸಮಸ್ಯೆಯಿದೆ ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
“ಕುಮಾರಸ್ವಾಮಿಗೆ ರಾಜಕಾರಣ ಮಾತನಾಡುವುದು ಬಿಟ್ಟು ಬೇರೆ ಏನು ಗೊತ್ತು? ಕುಮಾರಸ್ವಾಮಿಗೆ ಕೆಆರ್ ಎಸ್ KRS Dam) ನಲ್ಲಿ ಏನು ಸಮಸ್ಯೆಯಿದೆ ಕಂಡಿದೆ” ಎಂದು ವಾಗ್ದಾಳಿ ನಡೆಸಿದರು.
Join Our Telegram: https://t.me/dcgkannada
“ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಸಮಿತಿ ರಚಿಸಿ ಅಣೆಕಟ್ಟುಗ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಯಾವುದೇ ರೈತರನ್ನು ಗಾಬರಿಪಡಿಸುವ ಅಗತ್ಯವಿಲ್ಲ” ಎಂದು ಸ್ಪಷ್ಟನೆ ನೀಡಿದರು.
ತುಂಗಭದ್ರಾ ಜಲಾಶಯದ 19ನೇ ಗೇಟ್ ನ ಕ್ರಷ್ಟರ್ ಕಟ್ ಆಗಿದ್ದರಿಂದ ಈಗ ತುಂಬಿರುವ ಜಲಾಶಯದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಅದೇ ರೀತಿ ಸಮಸ್ಯೆ ಮಂಡ್ಯದ ಕೆ ಆರ್ ಎಸ್ ನಲ್ಲಿಯೂ ಇದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ತೀರುಗೇಟು ನೀಡಿದ್ದಾರೆ.