ಬೆಂಗಳೂರು: ಗಣೇಶ ಚತುರ್ಥಿ ಹಬ್ಬದಂದೇ ಆಭರಣ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಹೌದು, ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಅದರಂತೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ ಆಭರಣದ ಬೆಲೆ 10 ಗ್ರಾಂಗೆ ₹400 ಇಳಿಕೆಯಾಗಿ 66,800 ರೂಪಾಯಿಗೆ ಮಾರಾಟವಾಗಲಿದೆ.
ಇನ್ನು, 24 ಚಿನ್ನವು 10 ಗ್ರಾಂಗೆ ₹440 ಇಳಿಕೆಯಾಗಿ 72,870 ರೂಪಾಯಿಗೆ ತಲುಪಿದೆ. ಕಳೆದ 10 ದಿನಗಳಲ್ಲಿ ಹೋಲಿಸಿದರೆ ಬಂಗಾರದ ಬೆಲೆಯಲ್ಲಿ ಏರಿಳಿತ ಕಂಡು 1 ಗ್ರಾಂಗೆ ಸರಾಸರಿ 44 ರೂಪಾಯಿ ಇಳಿಕೆಯಾಗಿದೆ.
ಇದನ್ನೂ ಓದಿ: Accident news: ಗಣಪನ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ಕೊಪ್ಪಳದಲ್ಲಿ ಲಾರಿ ಡಿಕ್ಕಿ: ನಾಲ್ವರ ಸ್ಥಿತಿ ಗಂಭೀರ!
ಒಟ್ಟಾರೆ, ಗಣೇಶ ಚತುರ್ಥಿಯಂದು ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.
ವಿದ್ಯಾರ್ಥಿಗಳಿಗೆ GOOD NEWS ಇಲ್ಲಿದೆ.. ಈಗಲೇ ಅರ್ಜಿ ಸಲ್ಲಿಸಿ..
ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯೊಂದು ಇಲ್ಲಿದೆ.
ಆನ್ಸೆನ್ ಮೂಲಕ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರಿ, ಅನುದಾನ, ಅನುದಾನ ರಹಿತ, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ಪೂರ್ವ (1ರಿಂದ 10ನೇ ತರಗತಿ) ಮತ್ತು ಮೆಟ್ರಿಕ್ ನಂತರದ ಪಿಯುಸಿ ನಿಂದ ವಿವಿಧ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಆನೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ಅಧಿಕೃತ ಜಾಲತಾಣ https://ssp.postmatric.karnataka.gov.in/sspp re/ ಅಥವಾ URL:https://ssp.postmatric.karnataka.gov.in/ CA/ ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080- 29535045 ಸಂಪರ್ಕಿಸಿ.