ಬೆಂಗಳೂರು: ರೈತರಿಗೆ ಸರ್ಕಾರದಿಂದ ಶುಭ ಸುದ್ದಿಯೊಂದು ಹೊರಬಿದ್ದಿದ್ದು, ಗಂಗಾ ಕಲ್ಯಾಣ ಯೋಜನೆಯ (Ganga kalyana scheme) ಅಡಿಯಲ್ಲಿ ರೈತರಿಗೆ ಉಚಿತ ಬೋರ್‌ವೆಲ್ ಕೊರೆಸಲು ಸಹಾಯಧನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.
Join Our Telegram: https://t.me/dcgkannada
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ಸಿಗುತ್ತದೆ.
ಒಟ್ಟು 4 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಈ ಯೋಜನೆ ಅಡಿ ಪಡೆಯಬಹುದಾಗಿದೆ.
ಯಾವೆಲ್ಲ ರೈತರು ಅರ್ಹರು?
ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. ವ್ಯವಸಾಯ ನಿರತರಾಗಿಬೇಕು. ಕನಿಷ್ಠ 02 ಎಕರೆ ಜಮೀನನ್ನು ಹೊಂದಿರಲೇಬೇಕು.
ಈ ಹಿಂದೆ ನೀರಾವರಿ ಸೌಲಭ್ಯ ಪಡೆದಿರಬಾರದು. ಈಗಾಗಲೇ ನೀರಾವರಿ ಜಮೀನು ಹೊಂದಿರಬಾರದು. ಕನಿಷ್ಠ 18 ರಿಂದ ಗರಿಷ್ಠ 60 ವರ್ಷದೊಳಗಿರಬೇಕು. ಆದಾಯದ ಮಿತಿ ವಾರ್ಷಿಕವಾಗಿ ಗ್ರಾಮೀಣ ಪ್ರದೇಶವಾದರೆ 98 ಸಾವಿರ ರೂಪಾಯಿ, ನಗರ ಪ್ರದೇಶವಾದರೆ 1.20 ಲಕ್ಷ ರೂಪಾಯಿ ಒಳಗಿರಬೇಕು.
ಏನೆಲ್ಲ ದಾಖಲೆ ಇರಬೇಕು?
ಜಾತಿ ಪ್ರಮಾಣಪತ್ರ, ಸಣ್ಣ ಹಿಡುವಳಿದಾರರ ಪ್ರಮಾಣಪತ್ರ, ಇತ್ತೀಚಿನ ಪಹಣಿ ಆದಾಯ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ಅರ್ಜಿದಾರರ ಭಾವಚಿತ್ರ ಹೊಂದಿರಬೇಕು.
ಇದನ್ನೂ ಓದಿ: Astrology: ಇವರಿಗೆ ಇಂದು ಭರ್ಜರಿ ರಾಜಕೀಯ ಯೋಗ!
ಅರ್ಜಿ ಹಾಕಲು ಬಯಸುವವರು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಗಸ್ಟ್ 31 ರೊಳಗಾಗಿ ಸಲ್ಲಿಸಬಹುದು.