ಬೆಳಗಾವಿ: ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೃದಯಾಘಾತವಾಗಿ (Heart attack) ಯೋಧ ಸಾವಿಗೀಡಾಗಿರುವ ಘಟನೆ ಬೆಳಗಾವಿಯ ಕ್ಯಾಂಪ್‌ನಲ್ಲಿ ಸಂಭವಿಸಿದೆ.
ಹೃದಯಾಘಾತದಿಂದ ಮೃತಪಟ್ಟ ಯೋಧನನ್ನು ಸುನೀಲ್ ಸಲಾಂ (37) ಎಂದು ಗುರುತಿಸಲಾಗಿದೆ.
Join Out Telegram: https://t.me/dcgkannada
ಬೆಳಗಾವಿಯ ಎಂಎಲ್‌ಐಆರ್‌ಸಿ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದ್ದು, ಸುನೀಲ್ ಅವರು ಮರಾಠ ಲಘು ಪದಾತಿದಳಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ದಿಢೀರ್ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೈಕ್ ಚಲಿಸುತ್ತಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಎದೆಯನ್ನು ಸವರಿಸಿಕೊಳ್ಳುತ್ತಲೇ ಬ್ರೇಕ್ ಹಿಡಿದು ಬೈಕ್ ನಿಧಾನ ಮಾಡಿದ್ದಾರೆ. ಆದರೆ, ವಿಧಿಯಾಟ ನೋಡಿ.. ನಡುರಸ್ತೆಯಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸುನೀಲ್ ಅವರು ಬೈಕ್‌ನಿಂದ ರಸ್ತೆ ಬದಿಗೆ ಬೀಳುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Viral Video: ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನ..! ಕಾಮಾಂಧನನ್ನು ತಿವಿದು ಬಿಸಾಕಿದ ಕಾಮಧೇನು..! (ವಿಡಿಯೋ)
ಸದ್ಯ ಸುನೀಲ್ ಮೃತದೇಹವನ್ನು ಮಹಾರಾಷ್ಟ್ರದ ಚಂದಗಡ ತಾಲೂಕಿನ ಘುಳೇವಾಡಿಗೆ ರವಾನಿಸಲಾಗಿದೆ. ಸಕಲ ಸರ್ಕಾರಿ ಗೌರವಗೊಂದಿಗೆ ಯೋಧನ ಅಂತ್ಯಕ್ರಿಯೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.