ಹುನಗುಂದ: ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಓಡಾಟ ಮಾಡಬೇಕೆಂದು ಪಿಎಸ್ಐ ಚನ್ನಯ್ಯ ದೇವೂರ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ವಿ.ಮ.ವೃತ್ತದಲ್ಲಿ ಗುರವಾರ ಹೆಲ್ಮೆಟ್ ಧರಿಸಿದವರಿಗೆ ಗುಲಾಬಿ ಹೂ ನೀಡಿ ಉಚಿತವಾಗಿ ಹೆಲ್ಮೆಟ್ ನೀಡಿ ಶಿಸ್ತುಬದ್ಧವಾಗಿ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಜನರಲ್ಲಿ ಜಾಗೃತಿ ಮೂಡಿಸಿ ಗಮನ ಸೆಳೆಯಿತು.
ಇದನ್ನು ಓದಿ: Rain effect: ಭಾರೀ ಮಳೆಗೆ ಉರುಳಿಬಿದ್ದ ಮರ, ಬೆಳೆ ಜಲಾವೃತ (ವಿಡಿಯೋ ನೋಡಿ)
ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಮ್ಮ ಜೀವ ನೀವೇ ರಕ್ಷಣೆ ಮಾಡಿಕೊಳ್ಳಬೇಕು. ಕಳೆದ ತಿಂಗಳಿಂದ ಹೆಲ್ಮೆಟ್ ಇಲ್ಲದೆಯೇ ಹಲವು ಸಾವು-ನೋವು ಸಂಭವಿಸಿವೆ. ಈ ಬಗ್ಗೆ ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎನ್ನುವ ಸಂದೇಶ ನೀಡಲಾಯಿತು.

ಪೋಲೀಸ್ ಪೇದೆಗಳಾದ ಸಿದ್ದು ಕವಲಿ, ಎಸ್.ವೈ. ಇಟಗಿ, ಪಿ.ಟಿ.ಪವಾರ, ಎನ್.ಬಿ.ಹುನಗುಂದ, ಬಿ.
ಎಸ್. ಹಿರೇಮಠ, ಎಸ್.ವೈ.ತಳವಾರ, ಲಕ್ಷ್ಮಣ ಅಂಬಿಗೇರ ಇತರರು ಇದ್ದರು.